ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೭. ದೇವತೆಗಳ ಆಗಮನ.] ಹರಿಹರ. ಹ:ಹರರಲ್ಲಿ ಭೇದವೆಣಿಸಲಾಗದೆಂದು ಬೋಧಿಸುವದಕ್ಕಾಗಿಯೇ ವಿಷ್ಣು ಹಾಗು ಮಹಾದೇವರು ಹಿ೦ದೇ ಮೂರ್ತಿಯಲ್ಲಿ ಏಕೀಕರಣ ವಾಗಿ ಮರೆಯುವ ಈ ಕ್ಷೇತ್ರವು ತುಂಗಭದ್ರಾ ನದಿಯ ದಕ್ಷಿಣ ತಟಾಕದಲ್ಲಿ ಮೈಸೂರ ಸಂಸ್ಥಾನದಲ್ಲಿ ನೆಲೆಗೊಂಡಿರುತ್ತದೆ. ದೇವತೆ ಗಳು ಟ್ರೈನಿನಿಂದ ಇಳಿದು ಊರೊಳಗೆ ಹೋಗಬೇಕೆನ್ನುವಷ್ಟರಲ್ಲಿ ಕತ್ತಲು ಮುಸುಗಿತು ಆಗ ಅವರು ಸಮೀಪದಲ್ಲಿಯೇ ಇರುವ ಛತ್ರದಲ್ಲಿಳಿದುಕೊಂಡು ಆಯ್ಕೆ ಕಗಳನ್ನು ತೀರಿಸಿಕೊಂಡು ಅಲ್ಲಿಯ ಪವಡಿಸಿದದು ಮರುದಿನ ಬೆಳಗಿನ ಝಾವದ ಐದು ಗಂಟೆಗೆ ಎದ್ದು ಊರೊ ಳಗೆ ನಡೆದರು, ಹರಿಹರ ಊರು ಅಷ್ಟೊಂದು ದೊಡ್ಡ ದಲ್ಲ. ಎರಡು-ಮೂರೇ ಉದ್ದ ನ ಬೀದಿಗಳಿರುತ್ತವೆ. ದೇವತೆಗಳು ಊರೊ ಈಗಿಂದ ಹಾಯ್ದು ಶ್ರೀಹರಿಹರೇಶ್ವರನ ಧೂಲಿ ದರ್ಶನ ತಕೊ೦ ಡರು; ಹಾಗು ಗುಡಿಯ ಪಶ್ಚಿ ಮ ದಿಕ್ಕಿನ ಘಾಟಿನ ಬಳಿಯಲ್ಲಿ ಸ್ನಾನಕ್ಕೆ ಹೋದರು. ಬೇಸಿಗೆಯ ಕಾಲದ ತುಂಗಾತಟಾಕದ ಆಗಿನ ಸೊಬಗನ್ನೇನು ವರ್ಣಿಸುವದದೆ? ಆ ಸುಪ್ರಭಾತದಲ್ಲಿ ಗಿಳಿಕೋಗಿಲೆಗಳು ಇಂಪಾದ ಗಾನವನ್ನು ಆರಂಭಮಾಡಿದ್ದವು, ಇತರ ಪಶು-ಪಕ್ಷಿಗಳು ಬೆಳಗಾಯಿತೆಂದು ತಮ್ಮ ಬಿಡಾರದಿಂದ ಹೊರ ಹೊರಟು ನಿತ್ಯಕ್ರಮಕ್ಕೆ ನಡೆದಿದ್ದವು. * ಕ್ಷೇತ್ರಸ್ಥರಾದ ವೃದ್ಧ ಹಾಗು ನೆಸಿಕ ಬಾಹ್ಮಣರು ಖೋರ ಖೋಸೊಂದು ಕವತ ಸ್ನಾನಕ್ಕಾಗಿ ತುಂಗಾತಟಾಕಕ್ಕೆ ಬರತೊಡಗಿದ್ದ ರು. ಇಂಥೀ ಆನಂ ದದಾಯಕ ಸಮಯದಲ್ಲಿ ನಮ್ಮ ದೇವತೆಗಳು ತಮ್ಮ ತಮ್ಮ ಪ್ರಾತರ್ವಿಧಿಗಳನ್ನು ತೀರಿಸಿಕೊಂಡು ಸ್ನಾನಮಾಡಲು ಆರಂಭಿಸಿದರು. ಎಲ್ಲರ ಸ್ನಾನಾಹಿಕ ತರ್ಪಣಗಳಾದ ಬಳಿಕ ಪುನಃ ಶ್ರೀಹರಿಹರೇಶ್ವರನ ಹಾಗು ಶ್ರೀಮಹಾಕಾಲೇಶ್ವರನ ದರ್ಶನ ಮಾಡಿಕೊಂಡು, ಅಲ್ಲಿಯ ಇತರ ದೇವತೆಗಳನ್ನು ಸಂದರ್ಶಿಸಿದರು. ಬಳಿಕ ವರುಣನಿಂದ ಶೀ ಹರಿಹರೇಶ್ವರನ ಉತ್ಪತಿಗೆ ಕಾರಣರಾದ ದೈತ್ಯರ ಇತಿಹಾಸವನ್ನೂ ಶ್ರೀಹರಿಹರರು ಏಕೀಕರಣರಾಗಿ ಪ್ರಕಟವಾದ ಕಾರಣವನ್ನೂ ಅಲ್ಲಿಯ ಸ್ಥಳಪುರಾಣವನ್ನೂ ಕೇಳಿಕೊಂಡು, ಅಲ್ಲಿಯ ಒಬ್ಬ ಭಾವಿಕ ಗೃಹಸ್ಥ