ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ [ಕರ್ನಾಟಕಕ್ಕೆ ಪಗಡಿನಾಟದ ವಿಸ್ತಾರವಾದ ಪೇಟೆ, ಅಲ್ಲಿ ಸಂಗ್ರಹಿಸಲ್ಪಟ್ಟ ವಿಪುಲ ವಾದ ಧಾನ್ಯ ಸಂಗ್ರಹ ಇವುಗಳನ್ನು ನೋಡಿಕೊಂಡು ದೇವತೆಗಳು ಸಂತುಷ್ಟಚಿತ್ತರಾಗಿ ತಮ್ಮ ಬಿಡಾರಕ್ಕೆ ಬಂದರು. ಡಾವಣೆಗೇರಿಯಲ್ಲಿ ಬ್ರಾಹ್ಮಣರ ವಸತಿಯು ವಿಶೇಷವಾಗಿರ ದಿದ್ದರೂ, ಧನಾಢರೂ ಧರ್ಮಾತ್ಮರೂ ಆದ ಬಹುಜನ ವೀರ ಶೈವರೂ ವೈಶವರರೂ ಆರುವರೆಂದು ವರುಣನಿಂದ ತಿಳಿದರು. ಅಲ್ಲಿಂದ ಸಂಜೆಯ ರೈಲಿನಲ್ಲಿ ಹೊರಟು ಶಿವಮೊಗ್ಗ ಯ ಕಡೆಗೆ ಸಾಗಿ ದರು ಲೋಹಶಕ ೬ ವು ಚಿಕ್ಕಜಾಜೂರ ಸ್ಟೇಶನ್ನಿನಲ್ಲಿ ಬಂದು ನಿಲ್ಲಲು, ಒಬ್ಬ ಪೋರ್ಟರನು ಚಿತ್ರದುರ್ಗದ ಕಡೆಗೆ ಹೋಗುವ ಪ್ರಯಾಣಿಕರು ಇಲ್ಲಿ ಇಳಿಯಬೇಕೆಂದು ಗಟ್ಟಿಯಾಗಿ ಕೂಗಿಕೊಳ್ಳ ಹತ್ತಿದನು. ಹರಿಹರ- ಡಾವಣಗೇರಿಗಳಲ್ಲಿ ಭರ್ತಿಯಾದ ಎಷ್ಟೋ ಪ್ರಯಣಿಕರು ಲಗುಬಗೆಯಾಗಿ ಇಳಿದು, ರೈಲು ಕಾಮಗಾರರ ಕೈ ಬೆಚ್ಚಗೆ ಮಾಡಿ, ಸಮೀಪದಲ್ಲಿಯೇ ಬೇರೆ ಲೋಹಕಂಬಿಗಳ ಮೇಲೆ ನಿಂತಿದ್ದ ಗಾಡಿಯ ಡಬ್ಬಿಗಳ ಬಾಗಿಲು ತೆರೆತೆರೆದು ಒಳನುಗ್ಗಿ ಪವಡಿಸ ಲಾರಂಭಿಸಿದರು ಅಷ್ಟರಲ್ಲಿ ನಮ್ಮ ದವತಗಳ ರೈಲು ಕೂಗು ಹಾಕಿ ಫಕ್ ಫಕ್ ಶಬ್ದ ಮಾಡುತ್ತ ಸಾಗಿತು ಆಗ ಬ್ರಹ್ಮನು:-- ಚಿತ್ರದುರ್ಗವೆಂದರೇನು? ಅದರ ಪ್ರಾಚೀನ ಹಾಗು ಅರ್ವಾಚೀನ ಇತಿಹಾಸವೇನು? ಎಂದು ಪ್ರಶ್ನೆ ಮಾಡಲು, ವರುಣನು:- ಚಿತ್ರದುರ್ಗವೆಂದರೆ ಚಿತ್ರದ ಗುಡ್ಡವಲ್ಲ. ರುಕ್ಷ ಹಾಗು ಭೀಕರವಾದ ಪರ್ವತ ಶ್ರೇಣಿಯಲ್ಲಿ ಕಟ್ಟಿದ ಕೋಟೆಯಾಗಿರು ತದೆ. ಕೌರವ-ಪಾಂಡವರ ಕಾಲಕ್ಕೆ ಇಲ್ಲಿ ಬಕಾಸುರನೆಂಬ ರಾಕ್ಷ ಸನು ವಾಸಿಸುತ್ತಿದ್ದನೆಂದೂ, ಪಾಂಡವರು ಅರಣ್ಯ ವಾಸಿಗಳಾದಾಗ್ಗೆ ಹಿಮ್ಮ ಭೀಮಸೇನನಿಗೆ ಆ ಬಕಾಸುರನ ಬಲಿಯು ಸರತಿಯು ಬಂದಿ ತೆಂದೂ, ಅವನು ಬಕಾಸುರನಿಗಾಗಿ ಕಳುಹಲ್ಪಟ್ಟ ಬಂಡಿ ಅನ್ನವನ್ನು - ಇುತ್ತ ಕುಳಿತಿದ್ದ ಕಾಲದಲ್ಲಿ ಆ ರಾಕ್ಷಸನು ಬಂದು ಅವನಿಗೆ ಗದ್ದ ಲು, ಭೀಮಸೇನನು ಇವನನ್ನು ಜಿಗಿದು ಸಂಹರಿಸಿ, ಅವನ ದೇಹವನ್ನು ಆ ಕೋಟೆಯ ಬಾಗಿಲಿಗೆ ಕಟ್ಟದ್ದನೆಂದೂ ಆಖ್ಯಾಯಿ ಕೆಯು ಈ ಪ್ರಾಂತದಲ್ಲಿ ಪ್ರಚಾರದಲ್ಲಿರುತ್ತದೆ

ಚಿತ್ರದುರ್ಗದಲ್ಲಿ ವೀರಶೈವರ ಮುಖ್ಯ ಗುರುಗಳಾದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳ ಮಠವಿರುತ್ತದೆ. ಇಲ್ಲಿ ಡಿಸ್ನಿ