ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಗಿ 11 ದೇವತೆಗಳ ಆಗಮನ? ಕೋರ್ಟು, ಹಾಯಸ್ಕೂಲುಗಳಿರುತ್ತವೆ. ಚಿತ್ರದುರ್ಗಕ್ಕೆ ಈ ಪೂರ್ವ ದಲ್ಲಿ ಲೋಹಮಾರ್ಗವಿರಲಿಲ್ಲ. ಈಗ ನಾಲ್ಕಾರು ವರ್ಷಗಳ ಮೊದಲು ಆದು ಹಾಕಲ್ಪಟ್ಟಿರುತ್ತದೆ, ಎಂದನು. ಅಷ್ಟರಲ್ಲಿ ಲೋಹಯಾನವು ಹೊಸದುರ್ಗದ ಸ್ಟೇಶನ್ನಿನಲ್ಲಿ ನಿಂತಿತು ಮಾರೀಕಣಿವೆ ಅಥವಾ ಕೃಷ್ಣರಾಜಸಮುದ್ರಕ್ಕೆ ಹೋಗುವ ಪ್ರಯಾಣಿಕರು ಇಲ್ಲಿ ಇಳಿಯಬಹುದೆಂದು ಕೂಗುವ ದನಿಯು ಕೇಳಿಸಿತು. ಕೃಷ್ಣರಾಜ ಸಮುದ್ರವೆಂದರೆ, ಏನೆಂಬ ಬ್ರಹ್ಮನ ಪ್ರಶ್ನೆಗೆ (cಇಲ್ಲಿಂದ ೧೮ ಮೈಲುಗಳ ಮೇಲೆ ಕೆಲವು ಸಣ್ಣ ಪುಟ್ಟ ಹೊಳೆಗಳಿಗೆ ಹಿಡ್ಲು ಹಾಕಿಸಿ, ಮೈಸೂರ ಸಂಸ್ಥಾನದ ಪ್ರಜಾನುರಾಗಿಯಾಗಿದ್ದ. ದಿವಾಣ ಸರ ಶೇಷಾದ್ರಿಅಯ್ಯರರು 'ಹಿಂದು ಕೆರೆಯನ್ನು ಕಟ್ಟಿಸಿರು ತ್ತಾರೆ. ಅದು ಈಗ ಸಮುದ್ರದಂತ ಸರಾಸರಿ ೫೦ ಮೈಲು ಪರಿಘ ವು ಕೆರೆಯಾಗಿರುತ್ತದೆ. ಆದರಲ್ಲಿ ಈಗ ಬಹಳ ಆಳು ನೀರು ಸಂಗ್ರಹಿಸಲ್ಪಟ್ಟಿದ್ದು, ಆ ನೀರನ್ನು ಕಾಲುವೆಯೊಳಗಿಂದ ದೂರ ದೂರದ ಜಮೀನುಗಳಿಗೆ ಹಾಯಿಸುವದರಿಂದ ಸಂಸ್ಥಾನದ ಉತ್ಪನ್ನವು ಹೆಚ್ಚಾಗುತ್ತಿರುವದು” ದೇವತೆಗಳ ಟ್ರೇನು ರಾತ್ರಿ ೧೧|ಗಂಟೆಗೆ ಬಿರೂರ ಜಂಕ್ಷನ್ನಿಗೆ ಬರಲು, ಅವರು ಅಲ್ಲಿ ಇಳಿದರು. ಆ ಗಲಿಚ್ಛಸ್ಟೇಶನ್ನಿನಲ್ಲಿ ಬೆಳಗಿನ ೪ ಗಂಟೆಯ ವರೆಗೆ ಅವರು ಕುಳಿತುಕೊಳ್ಳಬೇಕಾಯಿತು, ಯಾಕೆಂದರೆ ಆಗ ಶಿಮೊಗ್ಗ ಗೆ ಸಂಜೆಯ ೪ ಗಂಟೆಗೆ ಹಿಂದು, ಬೆಳಗಿನ ೪ ಗಂಟೆಗೆ ಹಿಂದು ಹೀಗೆ ಎರಡೇ ಗಾಡಿಗಳು ಹೋಗುತ್ತಿದ್ದವು ಇಷ್ಟು ದೊಡ್ಡ ಜಂಕ್ಷನ್ನಿನ ಸ್ಥಳ ವಾದರೂ ಸ್ಟೇಶನ್ನಿನೊಳಗಿನ ವೇಟಂಗರೂಮು ಬಹು ಹೊಲಸಾ ಥದ್ದೂ, ತೀರ ಸಣ್ಣದೂ ಇರುವದಲ್ಲದೆ, ಬಿರೂರಲ್ಲಿ ಕಳ್ಳರ ಉಪದ್ರ ನವು ಬಹಳ, ಅದರಿಂದ ಇಡಿ ರಾತ್ರಿಯಲ್ಲಿ ದೇವಗಣಗಳು ಎಚ್ಚ 4ರಬೇಕಾಯಿತು. ಆಗ ವರುಣನು:-ಬಿರೂರಲ್ಲಿ ಕೆಲವು ದಿನಗಳ ಹಿಂದೆ ಒಬ್ಬ ಬೂಟಾಟಿಕೆಯ ಸಾಧುವು ಶ್ರೀ ರಾಮೋತ್ಸವವನ್ನು ಮಾಡುತ್ತೇನೆಂದು ಹೇಳಿ ಇಡೀ ನಾಡಿನಲ್ಲಿ ಸಂಚರಿಸಿ, ಎಷ್ಯ ಹಣ ಸಂಪಾದನು, ಅವನು ೧-೨ ವರ್ಷ ಆ ಉತ್ಸವ ಮಾಡಿ ಮುಂದೆ ಆ ಗಂಟನ್ನೆಲ್ಲ ಎತ್ತಿ ಹಾಕಿ ಧನಿಕನಾದನೆಂದು ಜನವಾಡಿ ಖುದ, ಎಂದು ಹೇಳಿದನು.