ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* [ಕರ್ನಾಟಕಕ್ಕೆ ಮಾಧ್ಯಾಹ್ನ ಕಗಳನ್ನು ಅಲ್ಲಿಯೇ ತೀರಿಸಿದರು ಅಲ್ಲಿಯ ತುಂಗ ನದಿಯಲ್ಲಿ ಅಸಂಖ್ಯತೀರ್ಥಗಳಿರುವದರಿಂದ ಆ ಹಳ್ಳಿಗೆ ಬಂದ ಹಸರು `ಯೋಗ್ಯವಿರುವದೆಂದು ಅಂದುಕೊಂಡರು, ಬಳಿಕ ದೇವತೆಗಳು ಅಲ್ಲಿಯ ದೇವಸ್ಥಾನದ ಅರ್ಚಕರಲ್ಲಿ ಆ ದಿನದ ವೈಶ್ವದೇವವನ್ನು ತೀರಿಸಿಕೊಂಡು ಮುಂದೆ ಹೊಸಕೊಪ್ಪದ ಮೇಲೆ ಹಾಯ್ದು ಶೃಂಗ ರಿಗ ಹೋದರು, ಕಲಿಯುಗದಲ್ಲಿ ಕುಮತಗಳನ್ನು ಖಂಡಿಸುವದಕ್ಕೆ ಖಾಕಾ ತ್ ಶಂಕರನೇ ಅವತಾರ ಮಾಡಿ ಮಠವನು, ಸಾ ಪಿಸಿ. ಲೋಕಪುನೀತವನ್ನಾಗಮಾಡಿದ ಆ ಕ್ಷೇತ್ರದ ದರುಶನದಿಂದ ಅವ ರಿಗೆ ಅತಿಶಯ ಆನಂದವಾಯಿತು. ಶ್ರೀಮಚ್ಚಂಕರ ಭಗವತ್ಪಾದ ರವರು ತಮ್ಮ ಪೀಠಕ್ಕೆ ಬಹು ಯೋಗ್ಯವಾದ ಸ್ಥಳವನ್ನು ಆರಿಸಿರು ವರೆಂದು ದೇವತೆಗಳು ತಿಳಿದರು. ಸುತ್ತಲೂ ಪರ್ವತಶ್ರೇಣಿಗಳು; ಬಳಿಯಲ್ಲಿ ಮಧುರನೀರಿನ ತುಂಗಾನದಿಯು; ನೆರೆಯಲ್ಲಿಯೇ ಶೃಂಗ ಋಷಿಗಳ ಪವಿತ್ರ ಆಶ್ರಮ, ಇವುಗಳಿಂದ ಆ ಪ್ರದೇಶಕ್ಕೆ ಬಹು ರವು ಣೀಯತೆಯು ಬಂದಿತ್ತು; ಇರಲಿ. ದೇವತೆಗಳು ಮೊದಲು ಶ್ರೀ ಶಂಕರಭಗವತ್ಪಾದರವರಿಂಹ ಸ್ಥಾಪಿತವಾದ ಶ್ರೀ ಶಾರದಾಂಬಾ ದೇವಿಯ ಗುಡಿಗೆ ಹೋದರು. ಬ್ರಹ್ಮನ ಹೊರತು ಎಲ್ಲರೂ ಆ ಮಹಾತಾಯಿಗೆ ನಮಸ್ಕರಿಸಿದರು. ಸತ್ಯಲೋಕವನ್ನು ಬಿಟ್ಟು ಬಂದ ಶಾರದಾಂಬೆಯು ಭೂಲೋಕದಲ್ಲಿ ಈ ಮೆರೆಗೆ ವೈಭವದಿಂದ ಪೂಜೆಗೊಳ್ಳುವದನ್ನು ನೋಡಿ ಬ್ರಹ್ಮ ನಿಗೆ ಸಂತೋಷವಾಯಿತು. ಇಂದಾದಿಗಳು ಗುಡಿಯ ಭವ, ಕ. ವನ್ನು ನೋಡಿ ಬೆರಗಾದರು. ಆಗ ಬ್ರಹ್ಮನಿಗೆ ತಾನು ಶ್ರೀ ಸುರೇ ಇರಾಚಾರ್ಯರೆಂಬ ಹೆಸರಿನಿಂದ ಅವತಾರೆ ಮಾಡಿ ಶೃಂಗಪುರಿಯ ಜಗದ್ಗುರು ಪೀಠದಲ್ಲಿ ಕುಳಿತ ಸಂಗತಿಯು ನೆನಪಾಯಿತು. ಅವನು ಆ ಹಿಂದಿನ ಕಥೆಯನ್ನು ಇಂದ್ರಾದಿಗಳಿಗೆ ಹೇಳಿದನು; ಮತ್ತು ನುಡಿ ದದೇನಂದರೆ:-ನಾರಾಯಣಾ, ನಾನು ಜಗದ್ಗುರು ಪೀಠವೇರಿದ ಕೃ೦ಗೇರಿಯು ಇದೇ ಆಗಿರಬಹುದೇನು? ಎಲ! ಎಲ! ಎಷ್ಟು ಹೆಚ್ಚು. ಕಡಿಮೆಯಾಗಿದೆಯಲ್ಲ! ಆಗ ಇಷ್ಟು ಭವ್ಯಗಳಾದ ಗುಡಿಗಳಿರಲಿಲ್ಲ; ಸಭವವಿರಲಿಲ್ಲ. ಈಗೇನು, ಮಠದ ತುಂಬ ಗುಡಿಗಳೇ ಗುಡಿಗಳಾಗಿ ವೆ ಶಾಬಾಸ್! ಮಠದ ಗೌರವವು ಚೆನ್ನಾಗಿ ಇದ್ದಂತೆ ತೋರುತ್ತದೆ. ಬ್ರಹ್ಮನ ಮಾತಿಗೆ ನಾರಾಯಣನು ಏನೇನೋ ಹೇಳಿದನು