ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಕರ್ನಾಟಕಕ್ಕೆ ಚಾರ್ಯರೆಂಬ ಮಹನೀಯರು ಶ್ರೀಕೃಷ್ಣನ ಬಾಲಮೂರ್ತಿಯನ್ನು ಸ್ಥಾಪಿಸಿರುವರು; ಮತ್ತು ಆ ಮೂರ್ತಿಯ ಅರ್ಚನಕ್ಕೆ ಎಂಟುಜನ ಯುತಿಗಳನ್ನು ನಿಯಮಿಸಿರುವರು. ಆ ಎಂಟೂಜನ ಯತಿಗಳಿಗೆ ಹಿಂದೊಂದು ಮಠವಿದ್ದು, ಅವರ ಶಿಷ್ಯ ಪರಂಪರೆಯು ಸಾಗುತ್ತಿರು ವದು, ಹಿಂದೊಂದು ಮಠದ ಯತಿಗಳು ನಿಯಮಿತ ಆವಧಿಯ ವರೆಗೆ ಶ್ರೀಕೃಷ್ಣ ಪರಮಾತ್ಮನನ್ನು ಅರ್ಚಿಸುವರು. ಒಬ್ಬರ ಪೂಜೆಯ ಅವಧಿಯು ಮುಗಿದು ಮತ್ತೊಬ್ಬರು ಪೂಜೆಯನ: ಪ್ರಾರಂಭಿಸುವದಕ್ಕೆ ಪರ್ಯಾಯವೆಂಬ ಹೆಸರು ಈ ಪರ್ಯಾಯ ಮಹೋತ್ಸವವು ಬಹು ವಿಜೃಂಭಣೆಯಿಂದ ಸಾಗುವದು | ನಮ್ಮ ದೇವತೆಗಳು ಉಡುಪಿಗೆ ಹೋದಾಗ ಪರ್ಯಾಯ ಮಹೋತ್ಸವವಿತ್ತು, ಬ್ರಾಹ್ಮಣರೂ ಸುವಾಸಿನಿಯರೂ ವಿಧವ ಯರೂ ಸೇರಿ ಸರಾಸರಿ ಹದಿನಾರು ಸಹಸ್ರದವರೆಗೆ ಜನಸಮು ದಾಯವು ಕೂಡಿತ್ತು. ಬ್ರಾಹ್ಮಣ- ಸುವಾಸಿನಿಯರ ಸಂಖ್ಯೆಗಿಂತಲೂ ವಿಧವೆಯರ ಸಂಖ್ಯೆಯ ವಿಶೇಷವಾಗಿತು ! ಇದರಿಂದ ಈ ಕರ್ಣಾ ಟಕ ಪ್ರಾಂತದಲ್ಲಿ ಎಷ್ಟು ಜನ ಪುರುಷರು ಅಕಾಲ ಮರಣಕ್ಕೆ ಒಳ ಗಾಗಿರುವರೆಂಬದು ಬ್ರಹ್ಮನ ಲಕ್ಷಕ್ಕೆ ಬಂತು, ಅದರಲ್ಲಿ ಚಿಕ್ಕ ಚಿಕ್ಕ ವಿಧವೆಯರಂತೂ ಸಮುದ್ರದಲ್ಲಿ ಸ್ನಾನಮಾಡಿ ತಮ್ಮ ತಮ್ಮ ಪತಿ ಗಳಿಗೆ ತಿಲೋದಕಗಳನ್ನು ಕೊಡುವಾಗ ಬ್ರಹ್ಮನಿಗೆ ಅನೇಕ ಬಗೆ ಯಾಗಿ ಶಾಪವ ಕೊಡುತ್ತಿದ್ದರು, ಅವರ ಗೋಳನ್ನು ನೋಡಲಾರದೆ, ಬ್ರಹ್ಮನು ಸಮುದ್ರ ತೀರವನ್ನೇ ತ್ಯಜಿಸಿದನು!

  • ದೇವತೆಗಳು ದಿನಾಲು ಪವಿತ್ರವಾದ ಮಧ್ಯಸರೋವರದಲ್ಲಿ ಸ್ನಾನ ಮಾಡಿ ಅಲ್ಲಿಯೇ ಅನುಷ್ಠಾನಗಳನ್ನು ತೀರಿಸಿಕೊಳ್ಳುತ್ತಿದ್ದರು, ಬಳಿಕ ಶ್ರೀಕೃಷ್ಣನ ದೇವಾಲಯಕ್ಕೆ ಹೋಗಿ ಕನಕನ ಕಿಂಡಿಯಲ್ಲಿ ಪರಮಾತ್ಮನ ದರುಶನವನ್ನು ತಕ್ಕೊಳ್ಳುತ್ತಿದ್ದರು. ಆಗ ನಾರಾ ಹಣನಿಗೆ ಕೃಷ್ಣಾವತಾರದ ಲೀಲೆಗಳು ಸ್ಮರಣೆಯಲ್ಲಿ ಬಂದವು. ವರುಣನು ಕನಕನ ಕಿಂಡಿಯ ಇತಿಹಾಸವನ್ನು ಎಲ್ಲರಿಗೂ ಹೇಳಿದನು. ಮಠದಲ್ಲಿ ಭೋಜನಕ್ಕೆ ಮುಕ್ತದ್ವಾರವಿರುವದರಿಂದ ದೇವತೆಗಳಿಗೆ ಉಡುಪಿಯಲ್ಲಿರುವ ವರೆಗೆ ಅನ್ನಕ್ಕೆ ಕೊರತೆಯಾಗಲಿಲ್ಲ. ಅವರು ಅಡಿಗೆಯ ಸ್ಥಳದಲ್ಲಿ ಪರ್ವತಪ್ರಾಯವಾಗಿ ಬಿದ್ದ ಅನ್ನದ ರಾಶಿಯನ್ನು ನೋಡಿ ಬೆರಗಾಗುತ್ತಿದ್ದರು. ಯಾಕಂದರೆ ಸತ್ಯಲೋಕದಲ್ಲಾಗಲಿ,