ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಲವಟ್ಟ ೬೧, ಅಭ್ಯಾಸ ಕಾಲದಲ್ಲಿ ಮಾಡಿದ ಚಿತ್ರಕ್ಕೆ ಬಹುಮಾನ ದೊರಕಿತು. ಮುಂದೆ ಜಯಪುರ, ಉದಯಪುರ, ಸಿಮ್ಯಾ ಮೊದಲಾದ ಊರುಗಳಲ್ಲಿ ಪ್ರವಾಸಮಾಡಿ ಅಲ್ಲಿನ ಸುಂದರ ದೃಶ್ಯಗಳನ್ನು ಚಿತ್ರಕ್ಕಿಳಿಸಿದರು. ಸರ್ ವಿಲಿಯಂ ಬಿಯರ್ ಸೆಲ್ ಇವರನ್ನು ಕರೆದುಕೊಂಡು ದಕ್ಷಿಣ ಹಿಂದೂಸ್ಥಾನ ಪ್ರವಾಸಮಾಡಿದರುಪ್ರವಾಸ ಮುಗಿದ ನಂತರ ಎಲವಟ್ಟಿಯವರು. ಮೈಸೂರಿನಲ್ಲಿ ಕೆಲವು ಕಾಲ ನಿಂತರು. ಶ್ರೀಗಳಾದ ಎನ್. ಎಸ್. ಸುಬ್ಬ ರಾಯರು, ಎ. ಆರ್. ವಾಡಿಯಾ, ರಾಲೋ ಮಹಾಶಯರು ಇವರಿಗೆ ವಿಶೇಷ ಪ್ರೋತ್ಸಾಹವಿತ್ತರು. ಇವರ ಪ್ರಕೃತಿ ನೋಟಗಳು-ಪಶು ಚಿತ್ರಗಳಿಗೆ ಪ್ರತಿಯೊಂದು ಪ್ರದರ್ಶನದಲ್ಲಿಯೂ ಬಹುಮಾನ ಮಾಡಲಾಯಿತು. ಸಿಮ್ಯಾ, ಮುಂಬಯಿ, ಮದರಾಸು, ಮೈಸೂರು ಪ್ರದರ್ಶನಗಳಲ್ಲಿ ಅನೇಕ ಬಹುಮಾ ನಗಳು, ಪದಕಗಳು, ಪ್ರಶಸ್ತಿ ಪತ್ರಿಕೆಗಳು ದೊರೆತವು. ಲೇಡಿ ರ್ಲಿಲಿತ್ ಗೌ, ಮಿಸಸ್ ಓಿನ್, ಮಿಸಸ್ ರೋಸ್ ಇವರ ಮೂಲಕ ಎಲವಟ್ಟಿ ಯವರ ನೂರಾರು ಚಿತ್ರಗಳು ವಿಲಾಯತಿ ಸೇರಿದವು. ಸ್ವಯಂಶ್ರೇಷ್ಟ ಚಿತ್ರಕಾರ ರಾದ ಶ್ರೀ ಜೆರಾಕ್ಸ್ರವರು ಇವರ ಚಿತ್ರಗಳನ್ನು ವಿಮರ್ಶಿಸುತ್ತಾ " ಎಲವಟ್ಟ ಯವರು ತೋರುವ ವರ್ಣನಿಯೋಜನೆ ಅನ್ಯಾದೃಶವಾಗಿದೆ' ಎಂದರು. ಇಂಡಿಯನ್ ಅಕೆಡಮಿ ಆಫ್ ಆಕ್ಟ್ ಸಂಸ್ಥೆ ಇವರ ' ತಾಯಿ ' ( ಪರಸ್ಪರ ನಂಬಿಕೆ ' ಚಿತ್ರಗಳನ್ನು ತುಂಬ ಮೆಚ್ಚಿಕೊಂಡಿತ್ತು. ಎಲವಟ್ಟಿ ಯವರ ವರ್ಣನಿಯೋಜನೆ ಹಾಗೂ ಸಂವಿಧಾನ ಕೌಶಲ್ಯ ಬೆರಗುಗೊಳಿಸುವಂತಿದೆ. ದೃಷ್ಟಾಂತಕ್ಕೆ ಇವರ - ಶ್ರೀರಂಗಪಟ್ಟಣದ ಜಲದ್ವಾರ' ಚಿತ್ರವನ್ನು ನೋಡೋಣ. ಮಹಾವೀರ ಟಿಪೂ ಸುಲ್ತಾನ ಮಡಿದುದಲ್ಲ. ಇಂದು ಹಳೆಯದಾಗಿ ಶಿಥಿಲವಾಗಿದೆ ರಾಜದ್ವಾರ, ಕಪ್ಪು, ಕೆಂಪುಗಳ ಮಿಶ್ರಣದಿಂದ ಚಿತ್ರಗಾರ ದ್ವಾರದ ಗಹನತೆಯನ್ನು ಸಾಧಿಸಿದ್ದಾನೆ. ಬಿರುಕುಬಿಟ್ಟಿರುವ ಕಲ್ಲು ಗೋಡೆ, ಅಲ್ಲಿ ಇಲ್ಲಿ ಹಣಿಕಿ ಹಾಕುವ ಗಿಡಮರಗಳು. ಎದುರಿಗೆ ಕೆಂಪುವಸನವುಟ್ಟು ತಲೆಯಮೇಲೆ, ಕಂಕುಳಲ್ಲಿ ನೀರಿನ ಬಿಂದಿಗೆ ಹೊತ್ತು ಹೋಗುತ್ತಿರುವ ಹೆಣ್ಣಿನ ಹಿನ್ನಲೆಯ ರುದ್ರಗಭೀರತೆಯನ್ನು ಚಿತ್ರಗಾರ ಮುನ್ನಲೆಯ ಬಾಳಚಿತ್ರದೊಂದಿಗೆ ಸಮತೋಲನ ಮಾಡಿದ್ದಾನೆ. ಸಾಮ್ರಾಜ್ಯಗಳು ಅಳಿದರೂ ನಿತ್ಯಜೀವನ ಸಾಗಲೇಬೇಕು. ಚಿತ್ರವಸ್ತುವಿನಲ್ಲಿ