ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನೀಲಮ್ಮ ಕಡಾಂಬಿ ತೊಂದರೆಯಿಂದ ನೀಲಮ್ಮನವರು ಆ ಸ್ಥಳಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ನೀಲಮ್ಮನವರು ಸಂಗೀತವನ್ನು ಜೀವನೋಪಾಯ ಸಾಧನೆಗಾಗಿ ಕಲಿ ಯಲಿಲ್ಲ. ಅಭಿರುಚಿ ರಕ್ತಗತವಾಗಿ ಬಂತು. ಅದನ್ನು ಬೆಳಸಿಕೊಂಡು, ಸಂಗೀತ ನಿಸ್ಸಂಕೋಚವಾಗಿ ನೀಡುವ ಆನಂದವನ್ನನುಭವಿಸಬೇಕೆಂಬ ಉದ್ದೇಶವೇ ಅವರ ಕಲಿಕೆಗೆ ಕಾರಣವಾಯಿತು. ಅವರ ಸಂಗೀತದಲ್ಲಿ ಈ ಆನಂದಾನುಭವವನ್ನು ಕಾಣಬಹುದು. ರೂಢಿಯಲ್ಲಿ ಸಂಗೀತ ಎರಡು ಮುಖ ಪಡೆದಿದೆ ; ಭಾವ, ತಂತ್ರ, ಭಾವ ಸಂಪ್ರದಾಯವನ್ನನುಸರಿಸುವವರು ತಾಳಕ್ಕೆ ಮಹತ್ವ ಕೊಡುವುದಿಲ್ಲ. ತಂತ್ರ ಸಂಪ್ರದಾಯವನ್ನವಲಂಬಿಸುವವರು ಭಾವಕ್ಕೆ ತಿಲತರ್ಪಣವನ್ನರ್ಪಿಸಿಬಿಡುತ್ತಾರೆ. ಭಾವದ ರಸಶಿಖರಕ್ಕೆ ಕಲಾವಿದ ನನ್ನೂ ಶ್ರಾವಕನನ್ನೂ ಮುಟ್ಟಿಸುವುದೇ ತಂತ್ರದ ಗುರಿ, ತಂತ್ರಕ್ಕೆ ವಿಶಿಷ್ಟವಾದ ಅಸ್ತಿತ್ವವಿಲ್ಲ. ಆದರೆ ತಂತ್ರವನ್ನು ತ್ಯಜಿಸಿದ ಕಲೆ ವೈವಿಧ್ಯ ರಹಿತವಾಗುತ್ತದೆ. ನೀಲಮ್ಮನವರ ಸಂಗೀತದಲ್ಲಿ ಭಾನ, ತಂತ್ರಗಳ ಮಧುರಮೈತ್ರಿಯನ್ನು ಕಾಣ ಬಹುದು. ಕೀರ್ತನೆಯೇ ಆಗಲಿ, ದೇವರ ನಾಮವೇ ಆಗಲಿ, ಹಿಂದೂಸ್ತಾನಿ ಚೀಸೇ ಆಗಲಿ ಅರ್ಥ ನಲುಗದಂತೆ, ಶಬ್ದ ಮುರಿಯದಂತೆ, ಸಂದರ್ಭ, ಸನ್ನಿ ವೇಶ ವಿಕಾರವಾಗದಂತೆ ಸಾಹಿತ್ಯ ಸಂಗೀತ ಸಂಯೋಗಮಾಡಿ ಕಲಾಪಾಕವನ್ನಿ ಳಿಸುವುದು ಅಪೂರ್ವ ಸಿದ್ದಿ, ಅಂತಹ ಸಿದ್ದಿ ನೀಲಮ್ಮನವರ ಕರಗತವಾಗಿದೆ. ಇಂದು ಹಿಂದೂಸ್ತಾನಿ-ಕರ್ನಾಟಕ ಸಂಪ್ರದಾಯಗಳಲ್ಲಿ ಹೆಚ್ಚಿನ ಬಾಂಧವ್ಯ ಬೆಳೆಯುತ್ತಿದೆ. ಕರ್ನಾಟಕ ಪದ್ದತಿಯ ಹಿರಿಮೆಯನ್ನು ಖಾನ್ ಸಾಹೇಬ್ ಅಬ್ದುಲ್ ಕರೀಂಖಾನರು ಔತ್ತರೇಯರಿಗೆ ತೋರಿಸಿಕೊಟ್ಟ ಮೇಲೆ ಗವಯಿಗಳು ಸ್ವರಪ್ರಸ್ತಾರ ಹಾಕುವುದು ಕರ್ನಾಟಕ ರಾಗಗಳಲ್ಲಿ ಚೀಸು ಗಳನ್ನು ಹಾಡುವುದು ಪ್ರಸಾರಕ್ಕೆ ಬಂತು. ಇದೇ ತೆರನ ಪ್ರಭಾವ ಕರ್ನಾಟಕ ಪದ್ಧತಿಯ ಮೇಲೂ ಮೂಡಿತು. ಕರ್ನಾಟಕ ಪದ್ದತಿಯ ಕೆಲವು ವಿದ್ವಾಂಸರು ಹಿಂದೂಸ್ಥಾನಿ ರಾಗಗಳಲ್ಲಿ ಕೀರ್ತನೆಗಳನ್ನು ಹಾಡುವ ಸುಧಾರಣೆಯ ಪ್ರಯೋಗಮಾಡಿನೋಡಿದರು. - ಭಾರತೀಯ ಸಂಗೀತದ ಶುದ್ಧ ಸ್ವರೂಪವನ್ನು ಇಂದು ಕರ್ನಾಟಕ ಪದ್ದತಿಯಲ್ಲಿ ಕಾಣಬೇಕೇ ವಿನಾ ಹಿಂದೂಸ್ಥಾನಿ ಪದ್ದತಿಯಲ್ಲಲ್ಲ. ಹೊರಗಿ ನಿಂದ ಬಂದ ವಿವಿಧ ಸಂಸ್ಕೃತಿಗಳನ್ನು ಭಾರತ ಎಷ್ಟು ಚೆನ್ನಾಗಿ ಜೀರ್ಣಿಸಿ