ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ದೀಕ್ಷಿತರ ವಿದ್ವದೈಖರಿಗೆ ಪರಂಪರೆ ಹಾಗೂ ಸ್ವಪ್ರಯತ್ನಗಳೆರಡೂ ಕಾರಣವೆಂದು ಕಾಣುತ್ತದೆ. ಇವರ ಅಜ್ಜಂದಿರಾದ ಜಂತಲಿ ಮನೆತನದ ಬಂಕಾಪುರದ ತೀರ್ಥಪತಿ ದೀಕ್ಷಿತರು ದೊಡ್ಡ ವಿದ್ವಾಂಸರು. ಅನೇಕ ಜನ ವಿದ್ಯಾರ್ಥಿಗಳಿಗೆ ಸಂಸ್ಕೃತ ವಿದ್ಯಾಭ್ಯಾಸಮಾಡಿಸುತ್ತಿದ್ದರು. ಸಂಜೆಯಾಗುತ್ತಲೇ ಪುರಜನರಿಗೆ ಭಾರತ-ಭಾಗವತ ಪುರಾಣಶ್ರವಣ ಮಾಡಿಸುತ್ತಿದ್ದರು. ಒಮ್ಮೆ ಅಕಸ್ಮಾತ್ತಾಗಿ ಬಂಕಾಪುರಕ್ಕೆ ಬಂದ ಆಂಧ್ರದೇಶದ ಪ್ರಸಿದ್ದ ಸಂಗೀತ ವಿದ್ವಾಂಸರಾದ ವೆಂಕಟಸ್ವಾಮಿ ಎಂಬುವರು ತೀರ್ಥಸತಿ ದೀಕ್ಷಿತರ ವಿದ್ವತ್ತಿಗೆ ಮಾರುವೋಗಿ ಅವರ ಪುರಾಣಶ್ರವಣಾನಂದವನ್ನನುಭವಿಸುತ್ತಾ ಕೆಲಕಾಲ ಅಲ್ಲಿಯೇ ನಿಂತರು. ತೀರ್ಥಪತಿ ದೀಕ್ಷಿತರು ಆ ಅವಕಾಶವನ್ನು ಪಯೋಗಿಸಿ ಕೊಂಡು ಸಂಗೀತ ಕಲಿತರು. ವೆಂಕಟಸ್ವಾಮಿ ಕೆಲವು ದಿವಸಗಳ ತರುವಾಯ ಊರಿಗೆ ಮರಳಿದರೂ ಮತ್ತೆ ಮತ್ತೆ ಬಂಕಾಪುರಕ್ಕೆ ಬಂದು ತೀರ್ಥಪತಿ ದೀಕ್ಷಿತರ ಪುರಾಣ ಕೇಳಿ ಅವರಿಗೆ ಹೊಸ ರಾಗಗಳನ್ನು ಅಭ್ಯಾಸಮಾಡಿಸಿ ಹೋಗು ತಿದ್ದರು.

  • ತೀರ್ಥಪತಿ ದೀಕ್ಷಿತರ ಹಿರಿಯ ಮಗ ರಾಮಚಂದ್ರ ದೀಕ್ಷಿತರಿಗೆ ಸಂಸ್ಕೃತ ಸಾಹಿತ್ಯದಲ್ಲಿಯೂ ಸಂಗೀತದಲ್ಲಿಯೂ ಹೆಚ್ಚಿನ ಪರಿಶ್ರಮವಿತ್ತು. ಅವರು ರೋಣಕ್ಕೆ ಹೋದಾಗ ಪ್ರಸಿದ್ಧ ತಬಲಾವಾದನಕಾರರಾದ ರಂಗಾಚಾರ್ಯರಲ್ಲಿ ತಬಲಾವಾದನ ವಿದ್ಯೆಯನ್ನು ಅಭ್ಯಾಸ ಮಾಡಿದರು. ಎರಡನೆಯ ಮಗ ಗುರು ನಾಥ ದೀಕ್ಷಿತರು ಸಾಹಿತ್ಯದಲ್ಲಿ ನೈಪುಣ್ಯ ದೊರಕಿಸಿಕೊಂಡು ಅಲಂಕಾರ ಶಾಸ್ತ್ರ ಪಾಠ ಹೇಳುತ್ತಿದ್ದರು. ಮೂರನೆಯವರಾದ ಶಿವಾನಂದ ದೀಕ್ಷಿತರು ಅಧ್ಯಾತ್ಮಪ್ರವೃತ್ತಿಯವರಾಗಿದ್ದು ಸನ್ಯಾಸ ಸ್ವೀಕರಿಸಿದರು. ಅವರಿಗೂ ಸಂಗೀತದಲ್ಲಿ ಪರಿಶ್ರಮವಿತ್ತು,

ರಾಮಚಂದ್ರ ದೀಕ್ಷಿತರ ನಾಲ್ಕು ಜನ ಗಂಡು ಮಕ್ಕಳಲ್ಲಿ ಮೂರನೆಯ ವರೇ ಶಂಕರ ದೀಕ್ಷಿತರು. ಶಂಕರ ದೀಕ್ಷಿತನಿಗೆ ಬಾಲ್ಯದಿಂದ ಸಂಗೀತದ ಹುಚ್ಚು, ಅವರಿವರು ಹಾಡುತ್ತಿದ್ದುದನ್ನು ಕೇಳಿ ತಾನೂ ಹಾಡುತ್ತಿದ್ದ. ಗಣಪತಿ ಮೇಳ, ಸಾರ್ವಜನಿಕ ಉತ್ಸವಗಳಲ್ಲಿ ಅವನ ಹಾಡಿಕೆಗೆ ಪಾರಿತೋಷಕ ಗಳೂ ದೊರೆಯುತ್ತಿದ್ದವು. ಶಂಕರ ಆರನೆಯ ಈಯತ್ತೆಯಲ್ಲಿ ಓದುತ್ತಿದ್ದಾಗ ಅವನ ತಂದೆ ತೀರಿಕೊಂಡರು. ಚಿಕ್ಕಪ್ಪ ಗುರುನಾಥ ದೀಕ್ಷಿತರು ಶಂಕರ