ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶಂಕರ ದೀಕ್ಷಿತರು ದಲ್ಲಿಯ ಲಾಲಿತ್ಯ ಸಿಕ್ಕ ಬೇಕಾದರೆ ಶ್ರೀ ಬಿಡಾರಂ ಕೃಷ್ಣಪ್ಪನವರಲ್ಲಿಯೇ, ಶಾಸ್ತ್ರ ಹಾಗೂ ಕಲೆ ಇವುಗಳ ಸಮನ್ವಯವು ಇವರಲ್ಲಿ ಪೂರ್ಣವಾಗಿ ಕಂಡುಬರುತ್ತಿತ್ತು. ಹಿಂದೂಸ್ಥಾನಿ ಪದ್ಧತಿಯೇ ಇರಲಿ, ದಕ್ಷಿಣಾದಿ ಪದ್ಧತಿಯೇ ಇರಲಿ ರಾಗದ ಧೈಯವೇನೆಂಬುದನ್ನು ಇವರು ಗಾನಮಂತ್ರದಿಂದ ಜಗತ್ತಿಗೇ ತಿಳಿಸುತ್ತಿದ್ದರು.' ಹಿಂದೂಸ್ಥಾನಿ ಪದ್ದತಿಯನ್ನು ಪ್ರತಿಭಾವಂತ ಕಲಾವಿದರಿಂದ ಅಭ್ಯಾಸ ಮಾಡಿರುವ ದೀಕ್ಷಿತರು ಈ ಎರಡು ಸಂಪ್ರದಾಯಗಳ ಬಗ್ಗೆ ಅಧಿಕಾರ ವಾಣಿಯಿಂದ ಮಾತನಾಡಲು ಸಮರ್ಥರಾಗಿದ್ದಾರೆ. ಗಾಯನವು ಹಿಂದೂಸ್ಥಾನಿಯೇನು, ಕರ್ನಾಟಕಿಯೇನು, ವಸ್ತುವೊಂದೇ, ಮಾವಿನಹಣ್ಣು ಬೆಂಗಳೂರು ಕಸಿಯೇನು ? ರತ್ನಗಿರಿಯ ಆಪೂಸೇನು ? ಸ್ವಲ್ಪ ರುಚಿ ಭೇದವಲ್ಲದೆ ಗುಣ, ರೂಪ, ಆಕಾರ, ಪರಿಣಾಮಗಳೆಲ್ಲಾ ಒಂದೇ. ಹೆಸರು ಬೇರೆ. ಉತ್ತರದಲ್ಲಿದ್ದರೂ ದಕ್ಷಿಣದಲ್ಲಿದ್ದರೂ ಹಿಂದುವು ಹಿಂದುವೇ ಎನಿಸಿಕೊಳ್ಳುವನಲ್ಲದೆ ಬೇರಿಲ್ಲ. ವೈವಿಧ್ಯವು ವೇಷ ಭಾಷೆ ಗಳಲ್ಲಿಯಲ್ಲದೆ ಮನುಷ್ಯತ್ವದಲ್ಲಿ ಬೇರೆಯಿಲ್ಲ. ಅನೇಕ ರಾಗಗಳ ಅರೋ ಹಣಾವರೋಹಣಕ್ರಮ, ಸ್ವರೂಪ ಒಂದೇ ಇದ್ದು ಹೆಸರು ಮಾತ್ರ, ಭಾಷೆ ಮಾತ್ರ ಬೇರೆ ಇದೆ. ತಿಳಿದವರಿಗೆ ತತ್ಯವು ಒಂದೇ ಇದೆ. ಆದರೂ ಎರಡೂ ಪದ್ದತಿಯವರೂ ತಮ್ಮನ್ನು ತಾವು ತಿಳಿದುಕೊಳ್ಳುವುದು ಒಳ್ಳಿತೆಂದು ನಮ್ಮ ಅಭಿಪ್ರಾಯ. ಕರ್ನಾಟಕಿಗೆ ಭದ್ರವಾದ ಸಾರ್ವತ್ರಿಕ ಶಾಸ್ತ್ರಾಧಾರ ಸಾಧನ ಸಂಪತ್ತಿದ್ದರೂ ಸೌಷ್ಟವ ಕಡಿಮೆ. ಸ್ವರದ ಲಾಲಿತ್ಯವನ್ನು ಅರಿಯರು. ಇದಕ್ಕೆ ಅಪವಾದ ಇಲ್ಲವೆಂತಿಲ್ಲ. ಆದರೂ ಘನ ವಿದ್ವಾಂಸರು ಕೂಡಾ ಸ್ವರ ಕ್ರಮವನ್ನು ನಡೆಸತೊಡಗಿದರೆಂದರೆ ಸಾ ಯಾವದು ನೀ ಯಾವುದು, ರಿಷಭ ಗಾಂಧಾರಗಳಾವವು ಎಂಬುದನ್ನು ಬಹುಶ್ರಮದಿಂದ ಹುಡುಕಬೇಕಾಗುತ್ತದೆ. ಹಿಂದೂಸ್ಥಾನಿಯಲ್ಲಿ ಬುಡವೇ ಗಟ್ಟಿಯಿಲ್ಲ. ಅವರ ಘರಾಣೆ, ಇವರ ಘರಾಣೆ, ಆ ಬಾಜು ಈ ಬಾಜು ಎಂಬ ಧುಮಶ್ನಕ್ರಿಯು ತಾಂಡವವಾಡುತ್ತಿದೆ. ಹೆಚ್ಚು ಕೇಳಿದರೆ ನಮ್ಮ ಘರಾಣೆಯೇ ಹೀಗೆಂದು ಉತ್ತರ ಸಿದ್ದ. ಮನುಷ್ಯನಿಗೊಂದು ಘರಾಣೆಯಾದರೆ ಮುಂದೇನು ? ಲಖನೌ ಬೇರೆ ಗ್ವಾರ ಬಾಜು ಬೇರೆ. ಅಸಾವರಿಯು ಕೋಮಲ ಋಷಭದ್ರೂ, ತೀವ್ರ ಋಷಭದ್ರೋ ? ಲಲಿತದಲ್ಲಿಯ ಧೈವತದ ಗೊಂದಲವೇನು ? ಯಾರು ಯಾವದನ್ನು