ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರುದ್ರಪಟ್ಟಣದ ದೊರೆಸ್ವಾಮಿ ವಿಕೃತಾವಸ್ಥೆಯಲ್ಲಿ ಕೊರಗುತ್ತಿರುವಾಗ ವೀಣಾವಾದನ ಕಲೆ ಮಾತ್ರ ತನ್ನ ವೈಶಿಷ್ಟ್ಯವನ್ನುಳಿಸಿಕೊಂಡಿರುವುದು ಗಮನಾರ್ಹವಾದುದಾಗಿದೆ. ಇಂದಿಗೂ ಸಾಂಬಶಿವ ಅಯ್ಯರ್, ವಿ. ಎನ್. ರಾವ್, ಆರ್. ಕೇಶವಮೂರ್ತಿ, ವೆಂಕಟಗಿರಿಯಪ್ಪ, ಏಮನಿ ಶಂಕರಶಾಸ್ತ್ರಿ, ದೊರೆಸ್ವಾಮಿ ಅಯ್ಯಂಗಾರ್, ರುದ್ರಪಟ್ಟಣದ ದೊರೆಸ್ವಾಮಿ ಮೊದಲಾದ ಕಲಾವಿದರು ವೀಣೆಯ ಯಶಃ ಕೀರ್ತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಶ್ರೇಷ್ಠ ಕಲೆ ಕಲಿತವರ, ತಿಳಿದವರ ಸೊತ್ತು. ಅದು ಜನಸಾಮಾನ್ಯಕ್ಕೆ ಒಪ್ಪಿಗೆಯಾಗುವುದಿಲ್ಲ. ಜನಸಾಮಾನ್ಯಕ್ಕೆ ಸಾಧಾರಣ ದರ್ಜೆಯ ಕಲೆಯೇ ಬೇಕು ಎಂದು ವಾದಮಾಡುವವರಿದ್ದಾರೆ. ಈಗ್ಗೆ ಮೂರು ವರ್ಷಗಳ ಹಿಂದೆ ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನ ಕರ್ನಾಟಕ ಸಂಘದ ವಾರ್ಷಿ' ಕೋತ್ಸವದಲ್ಲಿ ನಾನು ಭಾಗವಹಿಸಿದ್ದೆ. ಅಂದು ರುದ್ರಪಟ್ಟಣದ ದೊರೆಸ್ವಾಮಿ ಗಳ ವೀಣಾವಾದನ ಕಾರ್ಯಕ್ರಮದ ಒಂದು ಅಂಗವಾಗಿತ್ತು. ವೇದಿಕೆಯ ಮೇಲೆ ಕುಳಿತು ದೊರೆಸ್ವಾಮಿ ಸಂಪ್ರದಾಯದಂತೆ ಒಂದು ಕೀರ್ತನೆ ನುಡಿಸಿ ದರು. ವಿದ್ಯಾರ್ಥಿಗಳು ಗಲಭೆಗಾರಂಭಿಸಿದರು. ಎರಡನೆಯ ಕೀರ್ತನೆ ಆರಂಭಿಸಿದರು. ಅದನ್ನು ಮುಗಿಸುವುದು ಸಾಧ್ಯವಾಗಲಿಲ್ಲ. ಶ್ರಾವಕರ ಅಭಿ ರುಚಿಯನ್ನರಿತುಕೊಂಡ ದೊರೆಸ್ವಾಮಿ ಕೀರ್ತನೆಗಳ ಕೈ ಬಿಟ್ಟು ತಾನ ನುಡಿಸಿ, ಒಂದು ತಿಲ್ಲಾನ ನುಡಿಸಿದರು. ವಿದ್ಯಾರ್ಥಿಗಳು ಸಂತೋಷಭರಿತರಾದರು. ಸಂಗೀತದ ಕ್ಲಿಷ್ಟ ಅಂಗವಾದ ತಿಲ್ಲಾನವನ್ನು ಜನಸಾಮಾನ್ಯಕ್ಕೆ ರುಚಿಸುವಂತೆ ನುಡಿಸಿ ದೊರೆಸ್ವಾಮಿ ಅವರ ಕಿವಿಯಲ್ಲಿ ಶ್ರೇಷ್ಠ ಸಂಗೀತ ತುಂಬಿದರು. ಜನ ಸಾಮಾನ್ಯಕ್ಕೂ ಶ್ರೇಷ್ಠ ಕಲೆಗೂ ಸಂಬಂಧವಿಲ್ಲವೆಂದು ಕಲಾವಿದರು ತೃಪ್ತರಾ ಗುವುದರ ಬದಲು ಶ್ರೇಷ್ಠ ಕಲೆಯನ್ನು ಜನಸಾಮಾನ್ಯಕ್ಕೆ ಹೇಗೆ ಅರ್ಪಿಸ ಬೇಕೆಂಬುದರ ಕಡೆಗೆ ಅವರ ಲಕ್ಷ ಹೋಗಬೇಕು. ವರ್ಧಿಷ್ಣುಗಳಾದ ರುದ್ರಪಟ್ಟಣದ ದೊರೆಸ್ವಾಮಿ ಹಿರಿಯಪರಂಪರೆಯನ್ನು ಉಳಿಸಿಕೊಂಡು ಬೆಳಸುತ್ತಿರುವ ಕಲಾವಿದರಾಗಿದ್ದಾರೆ. ೧೯೧೬ ರಲ್ಲಿ ರುದ್ರಪಟ್ಟಣದಲ್ಲಿ ಇವರ ಜನನವಾಯಿತು. ಇವರ ತಾಯಿಯವರ ಕಡೆ ಸಂಗೀತ ಬಲ್ಲವರಿದ್ದರು. ದೊರೆಸ್ವಾಮಿಯವರಲ್ಲಿ ಸಂಗೀತಾಭಿರುಚಿ ಮೊಳೆಯುವುದಕ್ಕೆ ತಾಯಿಯೇ ಕಾರಣರಾದರು. ಹೊಳೇನರಸೀಪುರದಲ್ಲಿ ಐದನೆಯ ಫಾರಮ್