ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಭಾಷಣ ಮಾಡಿದರು. ಆ, ಟರ್ಕಿ, ಸ್ವಾಕ್ ಹೋಂ ನಗರಗಳಲ್ಲಿಯೂ ಪ್ರದರ್ಶನ ಭಾಷಣಗಳಾದವು. ಲಂರ್ಡ ಬಿ. ಬಿ. ಸಿ. ಕಂಪೆನಿಯವರು ನಾಗರಾಜಾರಾಯರ ವೀಣಾವಾದನವನ್ನು ರಿಕಾರ್ಡ್ ಮಾಡಿಕೊಂಡರು ಸಂಗೀತದ ವಿಶ್ವವ್ಯಾಪ್ತಿಯ ಕಡೆಗೆ ಸುಸಂಸ್ಕೃತರ ಲಕ್ಷವೆಳೆದು, ವಿಶ್ವ ದಲ್ಲಿ ಶಾಂತಿ, ಪ್ರೇಮ, ಮೈತ್ರಿ ಸ್ಥಾಪಿಸಲು ಸಂಗೀತವನ್ನು ಧಾರಾಳವಾಗಿ ಬಳಸಿಕೊಳ್ಳಬೇಕೆಂದು ಹೇಳಿದವರು ಫ್ರಾನ್ಸಿನ ಋಷಿಕವಿಗಳಾದ ರೊಮೆ ರೋಲಾ ಅವರು, ಪ್ರಾಚ್ಯ, ಪಾಶ್ಚಾತ್ಯ ಸಂಗೀತ ಸಂಪ್ರದಾಯಗಳನ್ನು ತುಲನಾತ್ಮಕವಾಗಿ ವಿಮರ್ಶಿಸಿ, ಭಾರತೀಯ ಸಂಗೀತದ ಹೆಚ್ಚಳವನ್ನು ಫಾಕ್ಸ್ ಸ್ಟಾಂಗ್ ವೇಸ್, ಆಲೆನ್ ದಾವೆಲೂ, ಡಾ|| ಫಾವರ್, ಮಾರ್ಗರೆಟ್ ಕಸಿನ್ಸ್ ಮೊದಲಾದ ವಿದ್ವಾಂಸರು ಸ್ಥಾಪಿಸಿದ್ದಾರೆ. ಜಗದ್ವಿಖ್ಯಾತ ನೀಗೋ ಗಾಯಕ ಪಾಲ್ ರೋಬ್ಬನ್ ವಂದೇ ಮಾತರಂ ', : ಜನಗಣಮನ" ಗೀತೆಗಳನ್ನು ಭಾರತೀಯರೇ ಅಚ್ಚರಿಪಡುವಂತೆ ಮಾಡುತ್ತಾನೆ. ಮಿಸೆಸ್ ಫಿಲೋಮೇನಾ ತಂಬೂಚೆಟ್ಟಿ ಪಾಶ್ಚಾತ್ಯ ಸಂಗೀತ ಪ್ರಪಂಚದಲ್ಲಿ ಕೀರ್ತಿ ಗಳಿಸಿದ್ದಾರೆ. ಮೈಸೂರಿನ ರಾಜಪ್ರಮುಖರಾದ ಶ್ರೀ ಜಯಚಾಮರಾಜ ಒಡೆಯರ್ ರವರು ತಾವೇ ಸ್ವಯಂ ಶ್ರೇಷ್ಠ ಪಾಶ್ಚಾತ್ಯ ಸಂಗೀತ ಪ್ರವೀಣ ರಾಗಿರುವರಲ್ಲದೆ, ಪಾಶ್ಚಾತ್ಯ ವಾಗ್ಗೇಯಕಾರರ ಅನೇಕ ಕೃತಿಗಳು ಬೆಳಕಿಗೆ ಬರಲು ಕಾರಣರಾಗಿದ್ದಾರೆ. ನಾಗರಾಜಾರಾಯರು ತಮ್ಮ ವೀಣಾವಾದನದಿಂದ ಭಾರತ ಮತ್ತು ಪಾಶ್ಚಾತ್ಯ ದೇಶಗಳ ಮಧುರಮೈತ್ರಿ ಬೆಳೆಯಲು ನೆರವಾಗಿದ್ದಾರೆ. ಈಗ ನಾಗರಾಜಾರಾಯರು ದೆಹಲಿಯ ಆಲ್ ಇಂಡಿಯಾ ರೇಡಿಯೋ ಸಂಸ್ಥೆಯಲ್ಲಿ ಸಂಗೀತ ನಿರ್ದೇಶಕರಾಗಿದ್ದಾರೆ. ನಾಗರಾಜಾರಾಯರ ವೀಣಾವಾದನ ಪಂಡಿತ ಪಾಮರರಿಬ್ಬರನ್ನೂ ರಂಜಿಸುತ್ತದೆ. ಶ್ರಾವಕರ ಗ್ರಹಣಶಕ್ತಿಯನ್ನರಿತು ನುಡಿಸುವ ಜಾಣೆ ಅವರಿಗೆ ಸಾಧಿಸಿದೆ. ವೈದುಷ್ಯವನ್ನೇ ಹೆಚ್ಚಾಗಿ ನಿರೀಕ್ಷಿಸುವವರಿಗೆ ಅವರ ವೀಣಾ ವಾದನ ಅತೃಪ್ತಿಯನ್ನುಂಟುಮಾಡಬಹುದಾದರೂ, ಹಿತಮಿತವನ್ನು ಅಪೇಕ್ಷಿಸು ವವರಿಗೆ ಅದು ತೃಪ್ತಿಯನ್ನುಂಟುಮಾಡುತ್ತದೆ. ಶಾಸ್ರೋಕ್ತವಾದ ಸಂಗೀತ