ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಭಯಕರ್ ಕೃಷ್ಣ ರಾವ್ - ಶ್ರೀ ಕೃಷ್ಣನ ಜೀವನ, ಸಂದೇಶವನ್ನು ನೃತ್ಯ ರೂಪದಲ್ಲಿ ತೋರಲು ಕೃಷ್ಣರಾಯರು ತೋರಿರುವ ಶ್ರದ್ದೆ ಯನ್ನೇ ಶಿವನ ಬಗ್ಗೆಯೂ ತೋರಿದ್ದಾರೆ. ಶಿವಲಾಸ್ಯ, ತಾಂಡವಗಳಿಗೆ ಅವಶ್ಯಕವಾದ ಭಾವ, ಭಂಗಿ, ಮುದ್ರೆಗಳನ್ನು ಜಾಗರೂಕತೆಯಿಂದ ಅಭ್ಯಾಸಮಾಡಿಕೊಂಡಿದ್ದಾರೆ. ಶಿವನೃತ್ಯದ ಸಾಂಕೇತಿಕ ಸ್ವರೂಪವನ್ನು ವಿವರಿಸುತ್ತಾ ಡಾ. ಆನಂದಕುಮಾರಸ್ವಾಮಿಯವರು ' ಬ್ರಹ್ಮನ ಇರುಳಿನಲ್ಲಿ ಪ್ರಕೃತಿ ಜಡಳಾಗಿದ್ದಾಳೆ. ಶಿವನ ಪ್ರಚೋದನೆಯಿಲ್ಲದೆ, ಅವಳು ಜಾಗೃತಳಾಗಲು ಸಾಧ್ಯವಿಲ್ಲ. ಅವನು ಆನಂದಭರಿತನಾಗಿ ಕುಣಿದು ಜಾಗತ ನಾದದಿಂದ ಜಡಪ್ರಕೃತಿಯನ್ನು ಹೊಡೆದೆಬ್ಬಿಸುತ್ತಾನೆ. ಅವನ ವಿದ್ಯುತ್ ಸ್ಪರ್ಶನದಿಂದ ಜೀವತಳೆದ ಪ್ರಕೃತಿ ತಾನೂ ಆನಂದದಿಂದ ಕುಣಿಯುತ್ತದೆ. ಕುಣಿಯುತ್ತ ಅವನು ಪ್ರಕೃತಿಯ ಅನಂತ ಆವಿಷ್ಕಾರಗಳನ್ನು ಕಾಪಾಡುತ್ತಾನೆ. ಆಸೆ ಆಮಿಷಗಳನ್ನು, ಕಾಳ್ಮೆ ಕಿಷಗಳನ್ನು ತನ್ನ ಪ್ರಚಂಡಾಗ್ನಿಯಲ್ಲಿ ದಹಿಸಿ ನವಚೇತನ, ನವಸೃಷ್ಟಿ, ನವಜೀವನಕ್ಕೆ ಬುನಾದಿ ಹಾಕುತ್ತಾನೆ.' ಸಾಮಾನ್ಯ ನೃತ್ಯಕಾರರು ಸಿನಿಮ ದಿಗ್ದರ್ಶಕರ ಕೈಗೆ ಸಿಕ್ಕಿ (ಶಿವತಾಂಡವ' ಹೊಲ್ಲಹಗೊಂಡಿದೆ. ಶಿವನ ತಾಂಡವ, ಲಾಸ್ಯಗಳಲ್ಲಿ ಹಿಂದೂ ದರ್ಶನ, ಸಂಸ್ಕೃತಿಯ ಸಾರಸರ್ವಸ್ವವೂ ಅಡಕವಾಗಿದೆ. ಸಂಸ್ಕೃತಿಯ ಬಲವಿಲ್ಲದವರು ಪಾಂಡಿತ್ಯದ ಪೋಷಣೆಯಿಲ್ಲದವರು ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಸಾಧ್ಯ. ಕೃಷ್ಣರಾಯರು ಶಿವನ ಲಾಸ್ಯ, ತಾಂಡವಗಳ ನಿಗೂಢರಹಸ್ಯವನ್ನು ಭೇದಿಸಲೆತ್ನಿಸಿದ್ದಾರೆ. ಯು. ಎಸ್. ಕೃಷ್ಣರಾಯರು ರಾಮಗೋಪಾಲರ ಶಿಷ್ಯರಾದರೂ ಅವರ ಮಾರ್ಗವನ್ನೇ ಅನುಸರಿಸುವುದಿಲ್ಲ. ಸ್ವತಂತ್ರ ವಿಚಾರಮಾಡಲು, ಸ್ವತಂತ್ರ ಮಾರ್ಗ ಹುಡುಕಲು ಇವರು ಪ್ರಯತ್ನ ಪಡುತ್ತಿದ್ದಾರೆ. ಕೃಷ್ಣರಾಯರು ತಮ್ಮ ಪ್ರದರ್ಶನ, ಭಾಷಣಗಳಲ್ಲಿ (demonstration lectures) ಕೆಲವು ವಾದಗ್ರಸ್ತ, ವಿಷಯಗಳನ್ನು ಮಂಡಿಸುತ್ತಾರೆ. ಪಂದನಲ್ಲೂರು ಮಿಾನಾಕ್ಷಿಸುಂದರಂ ಪಿಳ್ಳೆಯವರ ಸಂಪ್ರದಾಯವೇ ಭರತ ನಾಟ್ಯ' ದ ಸ್ವರ್ಣಕಳಶವೆಂದು ಕೃಷ್ಣರಾಯರ ಅಭಿಪ್ರಾಯ. ಕರ್ನಾಟಕದಲ್ಲಿ (ಮುಖ್ಯವಾಗಿ ಮೈಸೂರಿನಲ್ಲಿ) ಭರತನಾಟ್ಯ ಸಹಸ್ರಾರು ವರ್ಷಗಳಿಂದ ಬೆಳೆದು ಬಂದಿದೆಯೆಂಬುದು ನಿರ್ವಿವಾದ. ನಾಟ್ಯದ ಬಗ್ಗೆ ನಾಲ್ಕು ಮಾತು ಆಡದ