ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

noe ಕರ್ನಾಟಕದ ಕಲಾವಿದರು ತಮ್ಮ ನುಡಿಯಲ್ಲಿ ರಚಿಸುವಂತೆ ಉತ್ತೇಜನವೀಯುವುದು, ಒಂದು ಭಾಷೆಯವರು ಮತ್ತೊಂದು ಭಾಷೆಯ ಕೃತಿಗಳನ್ನು ಚೆನ್ನಾಗಿ ವ್ಯಾಸಂಗ ಮಾಡಿ ತಪ್ಪಿಲ್ಲದೆ ಹಾಡಿ ಪರಭಾಷೆಯ ಗಾಯನದಲ್ಲಿ ಅಭಿರುಚಿಯನ್ನು ಉಂಟುಮಾಡುವುದೂ ಅಗತ್ಯ. ಉತ್ತರಾದಿ, ದಕ್ಷಿಣಾದಿ ಪದ್ದತಿಗಳಿಗಿರುವ ವ್ಯತ್ಯಾಸವನ್ನು ಕಡಿಮೆಮಾಡಿ ಮಧುರ ಬಾಂಧವ್ಯವುಂಟಾಗುವಂತೆ ಮಾಡಬೇಕಾದುದು ಅಗತ್ಯ. ಕರ್ನಾಟಕ ಪದ್ಧತಿಯ ಘನರಾಗಗಳನ್ನು ಯಾವ ರೂಪದಲ್ಲಿಯೂ ವ್ಯತ್ಯಾಸಮಾಡದೆ ಶಾಸ್ತ್ರಕ್ಕನುಸಾರವಾಗಿ ಶಾಸ್ತ್ರ ಪದ್ದತಿಗಳನ್ನು ಕಾಪಾಡಿಕೊಂಡು ಬರುವಂತೆ ಏರ್ಪಡಿಸುವುದು ಅಗತ್ಯ. ಉಳಿದ ರಾಗಗಳಲ್ಲಿ ಹಿಂದೂಸ್ಥಾನಿಗೂ ಕರ್ನಾಟಕ ಪದ್ಧತಿಗೂ ಬಹು ಭಾಗ ಹೊಂದಾಣಿಕೆಯಾಗುವಂತೆ ಹಾಡುವ ಹೊಸ ಪ್ರಯತ್ನ ಮಾಡಬೇಕಾಗಿದೆ, ಕನ್ನಡ ಮಾತಾಡುವ ಜನರಲ್ಲಿಯೇ ಈ ಎರಡು ಪದ್ಧತಿಗಳೂ ಪ್ರಚಾರದಲ್ಲಿವೆ ಯೆಂಬುದನ್ನು ಮರೆಯಬಾರದು. ಅಲ್ಲದೆ ಸಿನಿಮಾ ಸಂಗೀತದ ಪ್ರವಾಹದ ಹೊಡೆತದಲ್ಲಿ ಪ್ರತ್ಯೇಕತಾ ಮನೋಭಾವದ ಈ ಅಡ್ಡಗಟ್ಟಗಳು ಪರಿಣಾಮ ಕಾರಿಯಾಗಲಾರವು.ಆಗಲೂಬಾರದು.' ತಮಿಳು ನಾಡಿನಲ್ಲಿ ಈಚೆಗೆ ಬೆಳೆದಿರುವ ತಮಿಳು ಈಸ್ಯೆ ಚಳುವಳಿಯ ಚಲನವಲನಗಳನ್ನು ಲಕ್ಷದಲ್ಲಿಟ್ಟುಕೊಂಡು ಚೆನ್ನಮ್ಮನವರು ಈ ನಿರ್ಧಾರಗಳಿಗೆ ಬಂದಿರುವ ಹಾಗೆ ಕಾಣುತ್ತದೆ. ತಮಿಳು ಈಸ್ಯೆ ಚಳುವಳಿ ಯ ನ್ನು ಹುಟ್ಟಿ ಹಾಕಿದಾಗ ಅದರ ಜನಕರಾದ ಡಾ|| ಷಣ್ಮುಗಂ ಚೆಟ್ಟಿಯವರಿಗಿದ್ದುದು ತಮಿಳರಿಗೆ 'ಸ್ವಸ್ವರೂಪದರ್ಶನ' ಮಾಡಿಸಬೇಕೆಂಬ ಆಕಾಕ್ಷ. ಆದರೆ ಅದು “ದ್ರವಿಡ ಕಜಗ' ಚಳುವಳಿಯ ಅಗ್ನಿ ಭಕ್ಷಕರ ಕೈಸೇರಿ ವಿಕೃತಾಕಾರ ತಳೆದು ಕೋಮುವಾರು ಭೂತವಾಯಿತು. ತಮಿಳು ಈಸ್ಯೆ ಚಳುವಳಿ ತಮಿಳರಲ್ಲಿ ಸ್ವಾಭಿಮಾನ ಹುಟ್ಟಿಸಿ ಅನೇಕ ನೂತನ ವಾಗ್ಗೇಯಕಾರರನ್ನು ಬೆಳಕಿಗೆ ತಂದಿ ತೆಂಬುದು ನಿರ್ವಿವಾದ. ಅದೇ ಚಳುವಳಿಯ ಪ್ರಭಾವದಿಂದ ತಮಿಳುನಾಡಿನ ಶೈವ, ವೈಷ್ಣವ, ಶಾಕ್ತಸಂತರ ಹಲವು ಕೃತಿಗಳು ಜನರಲ್ಲಿ ಬಳಕೆಗೆ ಬಂದಿತು. ಚೆನ್ನಮ್ಮನವರು ಊಹಿಸಿರುವಂತೆ ಕನ್ನಡ ನಾಡಿನಲ್ಲಿ ಇಂಥ ಚಳುವಳಿ ಇನ್ನೂ ಹುಟ್ಟಿಲ್ಲ. ಹುಟ್ಟಬೇಕಾದ ಅಗತ್ಯವಿದೆಯೆಂದು ನನ್ನ ಅಭಿಪ್ರಾಯ.

  • ಕರ್ನಾಟಕ ಸಂಗೀತಪದ್ದತಿಗೆ ತ್ಯಾಗರಾಜರು, ಮುತ್ತುಸ್ವಾಮಿ