ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಗೀತವಿದುಷಿ ಜಿ, ಚನ್ನಮ್ಮ ೧೦೭ ದೀಕ್ಷಿತರು, ಶಾಮಾಶಾಸ್ತ್ರಿಗಳು, ಪುರಂದಾದಿದಾಸರು ಮಾಡಿರುವ ಸೇವೆ ಅನನ್ಯವಾದುದೆಂಬುದನ್ನು ಎಲ್ಲರೂ ಒಪ್ಪಲೇ ಬೆ ಕು. ಔತ್ತರೇಯರಲ್ಲಿ ಸಂಗೀತಾಭಿರುಚಿ ಬೆಳೆಯುವುದಕ್ಕೆ ಪಂಡಿತ ವಿಷ್ಣು ದಿಗಂಬರ್‌ (ಪಲೂಸ್ಕರ್) ಅವರ ಸೇವೆ ಹೇಗೆ ಕಾರಣವಾಯಿತೊ ಹಾಗೆ ತ್ಯಾಗರಾಜರ ಸೇವೆ ದಕ್ಷಿಣದಲ್ಲಿ ಅನ್ಯಾದೃಶ ಸಂಗೀತ ಜಾಗೃತಿಯನ್ನುಂಟುಮಾಡಿತು. ತ್ಯಾಗರಾಜರ ಕೃತಿಗಳಲ್ಲಿರುವ ಸರಳತೆ, ಶಬ್ದಸೌಷ್ಟವ, ಸಾಹಿತ್ಯ ಸಂಗೀತ ಸಂಯೋಗ ಗಾಯಕರಲ್ಲಿ ಹಾಗೂ ಶ್ರಾವಕರಲ್ಲಿ ಅವು ವಿಶೇಷವಾಗಿ ಬೆಳೆಯುವುದಕ್ಕೆ ಕಾರಣವಾದವು. ತ್ಯಾ ಗ ರಾಜ ರ ಕಾಲ ಕ್ರಿ. ಶ. ೧೮೦೦-೧೮೫೦. ಮುತ್ತುಸ್ವಾಮಿ ದೀಕ್ಷಿತರೂ, ಶಾಮಾಶಾಸ್ತ್ರಿಗಳೂ ಅವರ ಸಮಕಾಲೀನರು. ಹತ್ತೊಂಭತ್ತನೆಯ ಶತಮಾನಕ್ಕೆ ಪೂರ್ವದಲ್ಲಿ ಅಂದರೆ ತ್ಯಾಗರಾಜರ ಪ್ರಭಾವ ಬೆಳೆಯುವುದಕ್ಕೆ ಮುಂಚೆ ಕನ್ನಡ ಜನ ಸಂಗೀತ ಕೇಳುತ್ತಲೇ ಇರಲಿಲ್ಲವೇ ? ಅವರು ಸಂಗೀತಪ್ರಿಯರಾಗಿದ್ದರೆ ಅವರು ಕೇಳುತ್ತಿದ್ದ ಸಂಗೀತ ಯಾವದು ? ಹನ್ನೆರಡನೆಯ ಶತಮಾನದ ಪೂರ್ವಾರ್ಧದಲ್ಲಿದ್ದ ನಿಜಗುಣಶಿವಯೋಗಿ, ಉತ್ತರಾರ್ಧದಲ್ಲಿದ್ದ ವಚನಕಾರರು, ಹದಿನಾರನೆಯ ಶತಮಾನದಲ್ಲಿದ್ದ ರತ್ನಾಕರವರ್ಣಿ, ಪುಂಡರೀಕ ವಿಠಲ, ಅದೇ ಶತಮಾನದ ಪೂರ್ವಾರ್ಧದಲ್ಲಿದ್ದ ಪುರಂದರ, ಕನಕಾದಿ ದಾಸರು ವಾಗ್ಗೇಯಕಾರರಾಗಿ, ಶಾಸ್ತ್ರಜ್ಞರಾಗಿದ್ದುದಕ್ಕೆ ಆಧಾರಗಳಿವೆ. ಕನ್ನಡ ಪ ರ ೦ ಪ ರ ಯ ನ್ನೇ ತ್ಯಾಗರಾಜರ ಸಂಗೀತ ನಿರ್ಮೂಲಮಾಡಿರುವಾಗ, ಕನ್ನಡಿಗರು ತಮ್ಮ ಸಂಸ್ಕೃತಿಯ ಭಂಡಾರದ ಪುನರುದ್ಧಾರ ಮಾಡಲೆತ್ನಿಸುವುದು 'ಸಂಗೀತ ದ್ರೋಹ' ವಾದೀತೇ ? ಒಂದು ನಾಡಿನ ಭಾಷೆ ಕೇವಲ ವ್ಯಾವಹಾರಿಕ ಸಾಧನವಲ್ಲ. ಭಾಷೆ ಒಂದು ನಾಡಿನ ಸಂಸ್ಕೃತಿಯ ಪ್ರತೀಕ, ಜನತೆಯಲ್ಲಿ ಅರಿವು ಹುಟ್ಟಿಸಲು ಆಯಾ ದೇಶಭಾಷೆಗಳಿಗಿರುವ ಸಾಮರ್ಥ್ಯ ಉಳಿದ ಭಾಷೆಗಳಲ್ಲಿಲ್ಲ. ತೆಲುಗರ ಉದ್ದಾರ ತೆಲುಗಿನಿಂದಲೂ, ತಮಿಳರ ಉದ್ದಾರ ತಮಿಳಿನಿಂದಲೂ, ಕನ್ನಡಿಗರ ಉದ್ದಾರ ಕನ್ನಡದಿಂದ ಆಗಬೇಕಾಗಿದೆ. ಇಂದು ತ್ಯಾಗರಾಜರ ಕೀರ್ತನೆಗಳ ಕಛೇರಿಮಾಡುವ ಎಷ್ಟು ಜನಕ್ಕೆ ಕೀರ್ತನೆಗಳ ಅರ್ಥ ತಿಳಿದಿದೆ ? ಶ್ರಾವಕರಲ್ಲಿ ಕೀರ್ತನೆಗಳ ಅರ್ಥ ತಿಳಿದುಕೊಂಡಿರುವವರೆಷ್ಟು ಮಂದಿ ? ನಮ್ಮ ಸಂಗೀತ ಸಾರ್ವತ್ರಿಕವಾಗದೆ ಗಾಯನ ಸಮಾಜಕ್ಕೆ ಅಡಕವಾಗಿರುವುದಕ್ಕೆ ಭಾಷೆಯ