ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುನ್ನುಡಿ ಬಂದ ಕೂಡಲೆ ' ಸರ್ವಜ್ಞತ್ವ' ಪ್ರಾಪ್ತವಾಗುತ್ತದೆಂಬ ಮೌಢವನ್ನು ತೊರೆಯಬೇಕು. ಆಯಾಯ ರಂಗದಲ್ಲಿ ವಿಶೇಷವಾಗಿ ದುಡಿದು ಪ್ರಾವೀಣ್ಯ ದೊರಕಿಸಿಕೊಂಡಿರುವವರ ಸಲಹೆ, ಸಹಕಾರ ಪಡೆಯುವುದು ವ್ಯಕ್ತಿಗಾಗಲಿ, ಸರ್ಕಾರಕ್ಕಾಗಲಿ ಅಗೌರವವಲ್ಲ. ಭಾರತಾದ್ಯಂತ ಕಲೆಗಳಿಗೆ ಒದಗಿರುವ ದುಸ್ಥಿತಿಯೇ ಕರ್ನಾಟಕ ದಲ್ಲಿಯೂ ಓದಗಿದೆ. ಕರ್ನಾಟಕಕ್ಕೆ ಅನ್ವಯವಾಗುವ ಕೆಲವು ಕಾರಣಗಳೂ ಇವೆ. ೧. ಸಂಗೀತ : ಮೈಸೂರು ಕರ್ನಾ ಟ ಕ ದಲ್ಲಿಂ ದು ಸಂಗೀತ ಕೇಳುವವರ ಸಂಖ್ಯೆ ಹೆಚ್ಚಿದೆ. ಬೆಂಗಳೂರು, ಮೈಸೂರುಗಳಲ್ಲಿಯಲ್ಲದೆ ಮಂಡ್ಯ, ಭದ್ರಾವತಿ, ಶಿವಮೊಗ್ಗೆ, ಕೋಲಾರ, ಚಿಕ್ಕಮಗಳೂರು, ಹಾಸನ ಮೊದಲಾದ ಊರುಗಳಲ್ಲಿಯೂ ಗಾಯನಸಮಾಜಗಳೇರ್ಪಟ್ಟಿವೆ. ಎಲ್ಲಾ ಊರುಗಳ ಎಲ್ಲಾ ಸಂಗೀತ ಕ ಛೇ ರಿ ಗ ಳಲ್ಲಿ ಯೂ ನಾವು ಕೇಳುವುದು ತ್ಯಾಗರಾಜ ಕೀರ್ತನೆಗಳು, ಔತ್ತರೇಯ ಸಂಗೀತ ಪ್ರಸಾರದಲ್ಲಿರುವ ಉತ್ತರ ಕರ್ನಾಟಕದಲ್ಲಿ ತಾನಸೇನ್, ಅ ದಾ ರಂ ಗ್, ಸದಾರಂಗ್ ಅವರ ಚೀಸುಗಳು, ಕನ್ನಡ ಜನಸಾಮಾನ್ಯಕ್ಕೆ ತೆಲುಗು, ಹಿಂದಿ, ಉರ್ದು ಭಾಷೆಗಳು ಅರ್ಥವಾಗುತ್ತವೆಯೇ? ಕನ್ನಡ ಜನ ಕನ್ನಡ ಭಾಷೆಯಲ್ಲಿರುವ ಹಾಡುಗಳನ್ನೂ, ಕೀರ್ತನೆಗಳನ್ನೂ ಕೇಳಬೇಡವೇ ? ಸಂಗೀತಸಾಧನವನ್ನು ಪಯೋಗಿಸಿಕೊಂಡು ನಾಡಿನ ಕವಿಗಳು ದೇಶದಲ್ಲಿ ನವಚೈತನ್ಯವನ್ನು ಹುಟ್ಟಿಸುವ ಪ್ರಯತ್ನ ಮಾಡಬಾರದೇಕೆ ? ಈ ವಿಷಯದಲ್ಲಿ ಕನ್ನಡನಾಡಿನ ಸಂಗೀತ ವಿದ್ವಾಂಸರು, ಕವಿಗಳು ಇಬ್ಬರೂ ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ವಿಷಾದದಿಂದ ಹೇಳಬೇಕಾಗಿದೆ. ಸಂಗೀತಕ್ಕೆ ಇಂದು ರಾಜಾಶ್ರಯವಿಲ್ಲ. ಸಂಗೀತಗಾರರು ಬದುಕ ಬೇಕಾದರೆ ಸಂಗೀತ ಸಮಾಜಗಳ ಕಛೇರಿಗಳು, ಮದುವೆಯ ಮನೆಯ ಕಛೇರಿಗಳು, ರಾಮನವಮಿ ಕಛೇರಿಗಳು, ಪ್ರದರ್ಶನಗಳ ಕಛೇರಿಗಳು, ರೇಡಿಯೋ, ಸಿನೇಮಾ, ಸಂಗೀತ ಪಾಠಗಳು, ಸಮಾಜಗಳ ಸಂಗೀತ ಕಛೇರಿಗಳಂತೂ ದಕ್ಷಿಣದ ವಿದ್ವಾಂಸರಿಗೆ ಮುಡಿಪಾಗಿಬಿಟ್ಟಿದೆ. ಕನ್ನಡ ಸಂಗೀತ ವಿದ್ವಾಂಸರ ಕಛೇರಿ ಏರ್ಪಡಿಸಿದರೆ ಹಣವಾಗುವುದಿಲ್ಲವೆಂಬ ಸಬೂಬು ಸಮಾಜಗಳ ಅಧಿಕಾರವರ್ಗದವರು ಹೇಳುತ್ತಾರೆ. ಮದುವೆಯ ಮನೆಗಳಲ್ಲಿ