ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆ. ಹಿರಣ್ಣ - ಎತ್ತಿ

4. + "On this hapless earth There's small sincerity of mirth, And laughter oft is but an art To drown the outcry of the heart" – Hartley Coleridge. ಕಾವ್ಯಗಳಲ್ಲಿ ನಾಟಕ ಅತಿ ರಮ್ಯ, ಸಾಹಿತ್ಯದಲ್ಲಿ ನಾಟಕಕ್ಕೆ ಆ* ಗೌರೀಶಂಕರದ ಸ್ನಾನ, ಸಾಹಿತ್ಯದಲ್ಲಿ ನಾಟಕಕ್ಕೆ ಕೊಡುವ ಹಿರಿಯ ಸ್ಥಾನವನ್ನು ನಾಟಕದಲ್ಲಿ ಹಾಸ್ಯಕ್ಕೆ ಕೊಡಬೇಕಾದುದವಶ್ಯಕ. ಶೃಂಗಾರಾದಿ ರಸಗಳಲ್ಲಿ ಹಾಸ್ಯವನ್ನು ನಿರೂಪಿಸುವುದು ಬಹಳ ಕಷ್ಟದ ಕೆಲಸ: ಮಹೋನ್ನತವಾಗಿ ಬೆಳೆದಿರುವ ಸಂಸ್ಕೃತ ಸಾಹಿತ್ಯದಲ್ಲಿ ಕಾಳಿದಾಸ, ಶ್ರೀಹರ್ಷರು ಹಾಸ್ಯವನ್ನು ಅಲ್ಲಲ್ಲಿ ಸ್ವಲ್ಪ ಬಳಸಿಕೊಂಡಿದ್ದ ರೂ ಹಾಸ್ಯಕ್ಕೆ ಶೂದ್ರಕನೇ ಆದಿ-ಅಂತ್ಯ, ಸರ್ವತೋಮುಖವಾಗಿ ಬೆಳೆದಿರುವ ಐರೋಪ್ಯ ಸಾಹಿತ್ಯದಲ್ಲಿ ಅರಿಸ್ಟೋಫೇನಸ್, ಮೋಲಿಯರ್, ವಾಲ್ವೇರ್, ಷೇಕ್ಸ್ಪಿಯರ್, ಸ್ವಿಫ್ಟ್, ಸರ್ವಾಂಟಿಸ್, ಷಾ ಮೊದಲಾದವರು ಅಲ್ಪಸಂಖ್ಯಾತರೇ, ಕನ್ನಡ ಸಾಹಿತ್ಯದಲ್ಲಿ ನಯಸೇನ, ಕುಮಾರವ್ಯಾಸ, ಜನ್ನ, ಸರ್ವಜ್ಞ ಮೊದಲಾದ ಕವಿಗಳು ಅಲ್ಲಲ್ಲಿ ಹಾಸ್ಯವನ್ನು ಬಳಸಿಕೊಂಡಿದ್ದರೂ ಹಾಸ್ಯಕ್ಕೆ