ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೪ ಕರ್ನಾಟಕದ ಕಲಾವಿದರು ಉದ್ಯೋಗದಲ್ಲಿದ್ದರು. ದೊಡ್ಡ ಸಂಸಾರ, ಮೂರು ಹೆಣ್ಣು ಮಕ್ಕಳು, ಮೂರು ಗಂಡು ಮಕ್ಕಳು, ತಾಯಿ ಲಕ್ಷ್ಮೀದೇವಮ್ಮನವರು ಆರ್ಯಬಾಲಿಕಾಪಾಠಶಾಲೆಯ ಮುಖ್ಯೋಪಾಧ್ಯಾಯಿನಿಯರಾಗಿದ್ದರು. ಮೈಸೂರು ಸ೦ ಸ್ಥಾ ನ ದಲ್ಲಿ ಮೊಟ್ಟಮೊದಲಿಗೆ ಎಫ್. ಎ. ಪರೀಕ್ಷೆ (ಈಗಿನ ಇಂಟರ್ ) ಯಲ್ಲಿ ತೇರ್ಗಡೆ ಹೊಂದಿದವರ ಪೈಕಿ ಲಕ್ಷ್ಮೀ ಗೆ ನಮ್ಮ ನ ನ ರೂ ಒಬ್ಬರಾಗಿದ್ದರು. ಅನಂತರಾಮಯ್ಯನವರಿಗೆ ಸಾಹಿತ್ಯ ಪ್ರೇಮ ವಿ ತ್ತು. ಅವರೂ ಕೆಲವು ನಾಟಕಗಳನ್ನೂ,ವೇದಾಂತ ಗ್ರಂಥಗಳನ್ನೂ ಬರೆದಿದ್ದಾರೆ. ವಿದ್ಯಾಭಿಮಾನಿಗಳಾದ ತಂದೆ ತಾಯಿಯವರ ಪ್ರಭಾವ ಹಿರಣ್ಣಯ್ಯನವರ ಮೇಲೆ ಆಯಿತೆಂದು ಹೇಳಬಹುದು. ಮಗನ ಭವಿಷ್ಯ ರೂಪುಗೊಳ್ಳುವವರೆಗೆ ತಂದೆ ತಾಯಿ ಇಬ್ಬರೂ ಜೀವಿಸಲಿಲ್ಲ. ಹಿರಣ್ಣಯ್ಯನವರ ಐದನೆಯ ವಯಸ್ಸಿನಲ್ಲಿ ತಾಯಿ ತೀರಿಕೊಂಡರು, ಹದಿನಾಲ್ಕನೆಯ ವಯಸ್ಸಿನಲ್ಲಿ ತಂದೆ ತೀರಿಕೊಂಡರು. ತಂದೆ ಗತಿಸಿದ ಮೇಲೆ ಮನೆ ಅಸ್ತವ್ಯಸ್ತವಾಯಿತು. ಅದೇ ಮಿಡ್ಸ್ ಸ್ಕೂಲ್ ಪರೀಕ್ಷೆ ಮುಗಿಸಿಕೊಂಡು ಹೈಸ್ಕೂಲ್ ಸೇರಿದ್ದ ಹಿರಣ್ಣಯ್ಯ ಜೀವನೋಪಾಯ ಹುಡುಕಿಕೊಳ್ಳ ಬೇಕಾಯಿತು. ಹಿರಣ್ಣಯ್ಯನವರಿಗೆ ಮೊದಲಿಂದಲೂ ಚಿತ್ರಕಲೆ, ಸಾಹಿತ್ಯದ ಮೇಲೆ ಪ್ರೇಮ. ಮೆಜೆಸ್ಟಿಕ್‌ ಸಿ ವಿ ಮಾ ಮಂದಿರದಲ್ಲಿ ಸಿನಿಮಾ ಬೋರುಗಳನ್ನು ಬರೆಯುವುದು, ಪ್ರಕಟನೆಯ ಟ್ರಾಲಿ ತಳ್ಳಿಕೊಂಡು ಹೋಗುವ ಕೆಲಸ ಸಿಕ್ಕಿತು. ಲಲಿತಕಲೆಗಳಲ್ಲಿ ಹಿರಣ್ಣಯ್ಯನವರಿಗಿದ್ದ ಸಹಜಭಕ್ತಿ ಅವರನ್ನು ರಂಗಭೂಮಿ ಪ್ರವೇಶಿಸಲು ಪ್ರೇರಿಸಿತು. 'ಸುಗುಣಬೋಧಕ ಸಮಾಜ'ದವರು ಆಡುತ್ತಿದ್ದ ನಿರುಪಮಾ ನಾಟಕದಲ್ಲಿ ಸಖಪಾತ್ರ ಅಭಿನಯಿಸುವ ಅವಕಾಶ ದೊರೆಯಿತು. ಬೆಂಗಳೂರು ಬಿಟ್ಟು ಹಿರಣ್ಣಯ್ಯನವರು ಮೈಸೂರು ಸೇರಿದರು. ಮೈಸೂರು ಮೆಜೆಸ್ಟಿಕ್ ಥಿಯೇಟರಿನಲ್ಲಿ ಅದೇ ಕೆಲಸ-ಪ್ರಕಟನೆಯ ಬೋರ್ ಬರೆಯುವುದು. ಆ ವೇಳೆಗೆ ಹೇಗೋ ಹಿರಣ್ಣಯ್ಯ ಟೈಪ್ ರೈಟಿಂಗ್ ಅಭ್ಯಾಸಮಾಡಿಕೊಂಡಿದ್ದರು. ಎಕ್ಸಿಕ್ಯೂಟಿವ್ ಇಂಜಿನಿಯರವರ ಕಛೇರಿಯಲ್ಲಿ ಸಿಕ್ಕಿದ ಟೈಪಿಸ್ಟ್ ಹುದ್ದೆಯಿಂದ ಇವರ ಕಲಾಸೇವೆಗೆ ಪರ್ಯಾಯವಾಗಿ ಸಹಾಯ ದೊರೆತಂತಾಯಿತು. ಇಂಜಿನಿಯರವರ ಕಛೇರಿಯಲ್ಲಿದ್ದ ಒಂಭತ್ತು ತಿಂಗಳು ಬರೆಯುವುದಕ್ಕೆ ಕಾಲಾವಕಾಶವೂ ಮನಃಶಾಂತಿಯೂ ಲಭಿಸಿತು.