ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೨ ಕರ್ನಾಟಕದ ಕಲಾವಿದರು ಗಳನ್ನು ಕೊಡಲು ಮುಂಬಯಿಗೆ ಹೋಗಿದ್ದಾಗ ಅಲ್ಲಿ ಸಾರ್ವಜನಿಕ ಕಛೇರಿ ವ್ಯವಸ್ಥಿತವಾಯಿತು. ಅಂದಿನ ಕ ಛೇ ರಿ ಗಂಗೂಬಾಯಿಯವರಿಗೆ ಹಲವು ಆಮಂತ್ರಗಳನ್ನೊದಗಿಸಿತು. ೧೯೩೮ರಲ್ಲಿ ಕಲ್ಕತ್ತೆಯಲ್ಲಿ ನಡೆದ ಸಂಗೀತ ಸಮ್ಮೇಳನ 'ಕೈ ಗಂಗೂಬಾಯಿಯವರಿಗೆ ಕರೆ ಬಂದಿತು. ಅಲ್ಲಿಂದ ಮುಂದೆ ಅಲ್ಲಾಬಾದ್, ಲಖನೌ, ಅಮೃತಸರ, ಕರಾಚಿ, ಮುಂಬಯಿ, ಬರೋಡಾ ಗಯಾ, ಆಗ್ರಾ, ಡೆಹ್ರಾಡೂನ್ ಮೊದಲಾದ ಸ್ಥಳಗಳಲ್ಲಿ ನಡೆದ ಸಂಗೀತ ಸಮ್ಮೇಳನಗಳಲ್ಲಿ ಗಂಗೂಬಾಯಿಯವರು ಭಾಗವಹಿಸಿದರು. ಮುಂಬಯಿ, ದೆಹಲಿ, ಲಖನೌ, ಲಾಹೋರ್, ಪೆಷಾವರ್, ಪಾಟ್ನಾ, ಕಟಕ್, ಕಲ್ಕತ್ತಾ, ನಾಗಪುರ, ಔರಂಗಾಬಾದ್, ಹೈದರಾಬಾದ್, ಧಾರವಾಡ, ಬರೋಡ ನಗರ ಗಳ ಬಾನುಲಿ ಕೇಂದ್ರಗಳಲ್ಲಿ ಹಾಡಿದ್ದಾರೆ. ಇಂದಿಗೂ ಹಾಡು ಶಿದ್ದಾರೆ. ಗಂಗೂಬಾಯಿಯವರ ಸಂಗೀತ ಜೀವನದ ಕೆಲವು ಘಟನೆಗಳು ಸ್ವಾರಸ್ಯ ವಾಗಿವೆ. ಮುಂಬಯಿ ಬಾನುಲಿ ಕೇಂದ್ರ (Radio Station) ಬಹಳ ಬಿಗುಮಾನ ತೋರುತ್ತಿದ್ದ ಕಾಲ. ನಿಶ್ಚಿತ ಕಾರ್ಯಕ್ರಮವೊಂದಕ್ಕೆ ಹಾಡ ಬೇಕಾಗಿದ್ದವರು ಬರಲಿಲ್ಲ. ಗಂಗೂಬಾಯಿಯವರಿಗೆ ಅವಕಾಶ ಸಿಕ್ಕಿತು. ಬಾ ನುಲಿ ಕೇಂದ್ರದ ರಿಗೆ ಗಂಗೂಬಾಯಿ ಹಾಡಬಲ್ಲರೆಂಬ ನಂಬಿಕೆಯೇ ಇರಲಿಲ್ಲ. ಕಾರ್ಯಕ್ರಮದ ಮೊದಲಿಗೆ ಹೆಸರು ಕೂಡ ಹೇಳಲಿಲ್ಲ. ಹಾಡಿಕೆ ಪ್ರಾರಂಭವಾದ ಸ್ವಲ್ಪ ವೇಳೆಯೊಳಗಾಗಿ ಮೇಲಿಂದ ಮೇಲೆ ಫೋನ್ ಕಾಲ್ (Phone Call)ಗಳು ಬಂದವು. ವ್ಯವಸ್ಥಾಪಕರು ಪಾಂರ್ಯಕ್ರಮದ ಮಧ್ಯ ದಲ್ಲಿಯೇ ಹಾಡುವವರ ವದು ಹೇಳಬೇಕಾಯಿತು. ದೆಹಲಿಯ ಬಾನುಲಿ ಕೇಂದ್ರದಲ್ಲಿ ಮೊದಲ ಸಾರಿಗೆ ಗಂಗೂಬಾಯಿ ಯವರು ಹಾಡಲು ಹೋದಾಗ, ವ್ಯವಸ ಸಕರು ಅವರನ್ನು ವೈದ್ಯರ ಜತೆಯ ಹನ್ನೊಂದನೆಯ ವರ್ಗದ ಸಂಗೀತಗಾರರೆಂದು ಭಾವಿಸಿದರು. ತಮ್ಮ ಪಾಡಿ ಕೆಯ ವೇಳೆಕಾಯುತ್ತಾ ಕಾವಲುಗಾರರು ಕೂಡುವ ಎಡೆಯಲ್ಲಿ ಗಂಗೂ ಬಾಯಿಯವರು ಕೊಡಬೇಕಾಯಿತು. ಪಾಪಿಕೆಯ ವೇಳೆ ಬಂದಾಗ ವ್ಯವ ಸ್ಥಾಪಕರು ಗಂಗೂಬಾಯಿಯವರ ಕೈಯಲ್ಲಿ ತಂಬೂರಿ ಹೊರಸಿದರು. ಹಾಡಿಕೆ ಮುಗಿಯಿತು. ಇಡಿಯ ಗಂಗೂಬಾಯಿಯವರನ್ನು ಅಭಿನಂದಿಸಲು ಧಾವಿಸಿ ಬಂದಿತು. ವ್ಯವಸ್ಥಾಪಕರ ಮುಖದ ಮೇಲೆ ಕಳೆಯುಳಿಯಲಿಲ್ಲ.