ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೬ ಕರ್ನಾಟಕದ ಕಲಾವಿದರು ಚಾಪೂಜೀವನದಲ್ಲಿ ಸಂಗೀತಕ್ಕಿದ್ದ ಸ್ಥಾನ ಯಾರ ಜೀವನದಲ್ಲಿಯೂ ಇಲ್ಲವೆಂದು ಧಾರಾಳವಾಗಿ ಹೇಳಬದುದು. ಅವರ ಪರಿಶುದ್ಧ ಜೀವನ ಹಾಗೂ ಸಂಗೀತ ಹಾಸಹೊಕ್ಕಾಗಿ ಹೊಂದಿಕೊಂಡಿದ್ದವು. ಸಂಗೀತ ತನ್ನ ನಿಜ ಸಾರ್ಥಕ್ಯವನ್ನು ಬಾಪೂ ಜೀವನದಲ್ಲಿ ಕಂಡುಕೊಂಡಿತು. ಪಂಡಿತ ಪಾಮರರಿಬ್ಬರಿಗೂ ಏಕಪ್ರಕಾರವಾದ ಆನಂದವನ್ನು ಕೊಡಲು ಸಮರ್ಥವಾದ ಕಲೆ-ಸಂತ. ಅದೇ ಮಟ್ಟಿದ ಮಗುವಿನಿಂದ ಸಾವಿನ ಉಡಿಯಲ್ಲಿ ಬೀಳಲು ಸಿದ್ದವಾಗಿರುವ ಮುದುಕನವರೆಗೆ ಸಂಗೀತ ಬೇಕೇಬೇಕು. ಸಂಗೀತದ ವಿಷಯದಲ್ಲಿ ಪ್ರತಿಯೊಬ್ಬ ವ್ಯಕ್ತಿ ತೋರುವ ಪ್ರತಿಕ್ರಿಯೆ ಅವನ ಮಾನಸಿಕ ಬೆಳವಳಿಗೆಯ ರನ್ನಗನ್ನಡಿಯಂ ದೆ. ಭಾರತೀಯ ಜೀವನದಲ್ಲಿರುವಂತೆ ಭಾರತೀಯ ಸಂಗೀತದಲ್ಲಿಯೂ ಧರ್ಮ ಬೆರೆತುಕೊಂಡಿದೆ. ದಕ್ಷಿಣದ ಗಾವಡಿಕಾರರು, ಉತ್ತರದ ಡುಮ್ಮಿ ಕಾರರೂ ಸಂಗೀತಕ್ಕೆ ಲೌಕಿಕ ಸ್ವರೂಪಕೊಡಲು ಪ್ರಯತ್ನಿಸಿದರು. ಆದರದು ಕೆಲವು ಗೆ: ವf: ೬ದಕವಾಯಿತು. ಜನ-ಮಾನ್ಯ ಆದರಿಸುವ ಸಂಗೀತ ಇಂದಿಗೂ ನರ್ಮವನ್ನು ಹೊಂದಿಕೊಂಡಿದೆ. ಆದರಿಂದು ಸಂಗೀತ ಆದರ ಅನುಯಾಯಿಗಳ ಪ್ರಭಾವದಿಂದ ಧರ್ಮಸ್ವರೂಪ ನೀಗಿಕೊ೦ಡು ಕೇTಲ ವ್ಯಾಪಾರದ ಸಾಧನೆಯಾಗಿದೆ. ಹಾಡುವವರಿಗಾಗಲಿ, ಕೆಳುವವರಿಗಾಗ ಕೀರ್ತನೆಗಳ ೩೬ರ್ಥ ಮುಖ್ಯವಲ್ಲ. ಮೂರನೆಯ ಕಾಲದಲ್ಲಿ ಹಾದುಗಾರ ಹಾಕುವ 'ಸ್ವರ ಸರ್ಕಸ್' (ಔರ್ಗೆಯ ಸಂಗೀತದಲ್ಲಿ ಬಿಜಲಿ ತಾನ್ ಮತ್ತು ಖಟ್ಟ) ಇವುಗಳಿಗೆ ಪ್ರಾಧಾನ್ಯ. ಮನೆಗಳಲ್ಲಿ ಇಂದು ಬೆಳಗುರುವುದು ಸಿನಿಮಾ ಹಾಡುಗಳ ಕರ್ಕಶ ಕಿರುಲಾಟ. ನಾಡಿನ ಸಂಗೀತ ನಾಡಿನ ಸಂಸ್ಕೃತಿಯ ಪ್ರತೀಕ. ಇಂದು ಭಾರತದಲ್ಲಿ ಪ್ರಚಾರದಲ್ಲಿರುವ ಸಂಗೀತ ದರ ಸಂಸ್ಕೃತಿಯನ್ನು ನಾಶಮಾಡುವುದಕ್ಕೆ ಹೊರಟಿದೆ. ಈ ರಣದುಣ್ಣಿಗೆ ಸಮಯೋಚಿತ ಚಿಕಿತ್ಸೆಯಾಗದಿದ್ದರೆ ನಾಡದೇವ ಕೊಳೆತು ಹೋಗುತ್ತದೆ. ಭಾರತೀಯ ಸಂಗೀತದ (ಅಂದರೆ ಕರ್ನಾಟಕ ಸಂಗೀತದ) ಪರಂಪರಾನು ಗತವಾದ ಹಿರಿಮೆಯನ್ನು ರಕ್ಷಿಸಿಕೊಂಡು, ಅದನ್ನು ಪ್ರಾಗತಿಕವಾಗಿ ಬೆಳೆಸಲು ತ್ರಿಕರಣಪೂರ್ವಕವಾಗಿ ಪ್ರಯತ್ನಿಸುತ್ತಿರುವವರಲ್ಲಿ ಶ್ರೀ ಎ. ಸುಬ್ಬರಾಯರು ) 1 | 11 S eg_ 2 +