ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

9

}

& 2 4 ಎ. ಸುಬ್ಬರಾಯರು ೧೩೭ ಒಬ್ಬರಾಗಿದ್ದಾರೆ. ಇಪ್ಪತ್ತೊಂಬತ್ತು ವರುಷ ವಯಸ್ಸಿನ ಈ ತರುಣ ವಿದ್ವಾಂಸರು ಸಂಗೀತದಲ್ಲಿ ಸಾಧಿಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. - ಸುಬ್ಬರಾಯರು ಐದು ವರ್ಷದ ಮಗುವಾಗಿದ್ದಾಗಲೇ ಅವರ ತಂದೆ ಅನಂತರಾಮರಾಯರು ತೀರಿಕೊಂಡರು. ಇವರ ಯೋಗಕ್ಷೇಮ ಅನಂತರಾಮ ರಾಯರ ಆಪ್ತಗೆಳೆಯರಾಗಿದ್ದ ಕರ್ನಾಟಕ ಸಂಗೀತಚಕ್ರವರ್ತಿ ಬಿಡಾರದ ಕೃಷ್ಣಪ್ಪನವರಿಗೆ ಸೇರಿತು. ಕೃಷ್ಣಪ್ಪನವದಲ್ಲಿ ಆದಾಯ ವಯಸ್ಸಿನಿಂದಲೇ ಸಂಗೀತ ಅಭ್ಯಾಸ ಆರಂಭವಾಯಿತು. ಸುಬ್ಬರಾಯರ ಕಲಿಕಯಲಕ್ಷಣ ನೋಡಿ ಕೃಷ್ಣಪ್ಪ ನವರು ಮಾರುವೋಗಿದ್ದರು, “ ಹತ್ತು ವರ್ಷಕ್ಕೆ ರ್ಪವಿ ಕುಡಿಸುತ್ತೇನೆ' ಎಂದು ಪದೇಪದೆ ಹೇಳುತಿದ್ದರು. ಒಂದು ವರ್ಸಣಾಲ ಪಾಠವಾದ ಮೇಲೆ ಕೃಷ್ಣಪ್ಪನವರು (೧೯೩೧) ವೈಕುಂಠವಾಸಿಗಳಾದರು. ದಕ್ಷಿಣ ಕನ್ನಡ ಜಿಲ್ಲೆಯ ಲಕ್ಷ್ಮಿದಾಸ್ ಎಂಬ ಸಂಗೀತ ವಿದ್ವಾಂಸರು ಸುಬ್ಬರಾಯರ ಶಿಕ್ಷಣ ಮುಂದುವರಿಸಿ ಒಂದು ವರ್ಷ ಪಾಠ ಹೇಳಿದರು. ಅನಂತರ ದಿವಂಗತ ಎಸ್. ರಾಮರಾಯರು (ಚಿಕ್ಕ ರಾಮರಾಯರು) * ಎರದು ವರ್ಷಕಾಲ ಪಾಠ ಹೇಳಿ, ಸುಬ್ಬರಾಯರಿಗೆ ಸರಸ ರಾಗಗಳನ್ನೂ ವಕ್ರಸಂಚಾರಗಳನ್ನೂ ಪರಿಚಯ ಮಾಡಿಕೊಟ್ಟರು. ೧೯೭೬ ಸುಬ್ಬರಾಯರ ಕಲಿಕೆ ಮುಗಿ ದಂತಾಯಿತು. ಆಗವರ ವಯಸ್ಸು ದಿನಾ೦, ೧೯೩೮ರಲ್ಲಿ ಅವರ ಮೊಟ್ಟ ಮೊದಲನೆಯ ಕಛೇರಿ ಮೈಸೂರಿನಲ್ಲಿ ನಡೆದು ಸಂಗೀತ ಪ್ರೇಮಿಗಳಿಗೆ ಸಂತೋಷವನ್ನುಂಟುಮಾಡಿತು. ಸಂಗೀತಾಭ್ಯಾಸದ ಜತೆಗೆ ಸುಬ್ಬರಾಯರ ಶಾಲೆಯ ಓದೂ ಸಾಗಿತ್ತು, ೧೯೪೩ರವರೆಗೆ ಮೈಸೂರಿನಲ್ಲಿ ಓದಿ ಹೈ ಸ್ಕೂಲ್ ಪರೀಕ್ಷೆ ಮುಗಿಸಿಕೊಂಡು ೧೯೪೧ರಲ್ಲಿ ಬೆಂಗಳೂರು ಇಂಟವ್ ಮಾಡಿಯೆಟ್ ಕಾಲೇಜ ಸೇರಿದರು. ಆದರೆ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಶಾಲೆಯ ಓದಿಗೆ ಶರಣು ಹೊಡೆದು ಸಂಗೀತಕ್ಕೆ ಪೂರ್ಣಶಕ್ತಿಯನ್ನು ವಿನಿಯೋಗಿಸಲಾರಂಭಿಸಿದರು. ಅದೇ ವರ್ಷ ಪ್ರವಾಸ ಕೈಗೊಂಡು ಮದರಾಸು, ಧಾರವಾಡ, ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಊರುಗಳಲ್ಲಿ ಕಛೇರಿ ಮಾಡಿದರು.

  • ಇವರ ಪರಿಚಯವನ್ನು ಕರ್ನಾಟಕದ ಕಲಾವಿದರು'-(ಪುಟ ೬೩) ಭಾಗ ೧ ಗ್ರಂಥದಲ್ಲಿ ಕೊಟ್ಟಿದ್ದೇನೆ.

.