ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೨ ಕರ್ನಾಟಕದ ಕಲಾವಿದರು ಗಳೆಲ್ಲದರ ಇತಿಹಾಸ ಇದನ್ನೇ ಸ್ಥಾಪಿಸುತ್ತದೆ. ನಿತ್ಯ ಜೀವನದ ಎಲ್ಲ ಚಟುವಟಿಕೆ ಗಳಲ್ಲಿಯೂ ನೃತ್ಯ ಅತ್ಯವಶ್ಯಕವೆನಿಸಿತ್ತು. ಯುದ್ಧ, ಶಿಕ್ಷಣ, ಸಂತೋಷ, ನಿತ್ಯಗೆಲಸ, ನೀತಿ ಬೋಧೆಗಳೆಲ್ಲಕ್ಕೂ ನೃತ್ಯ ಅನಿವಾರ್ಯವಾಗಿತ್ತು. ಧಾರ್ಮಿಕ ಜೀವನ ಸಾಮಾಜಿಕಜೀವನಗಳೆರಡರಲ್ಲಿಯೂ ಗೌರವಯುತ ಸ್ಥಾನಪಡೆದಿದ್ದ ನೃತ್ಯಕಲೆ* ಭಾರತದಲ್ಲಿ ಯಾವಕಾರಣಕ್ಕೆ ಮತ್ತು ಯಾವ ಕಾಲದಲ್ಲಿ ಅಪಗತಿಹೊಂದಿ ವೇಶ್ಯಾವಾಟ ಸೇರಿತೆಂದು ನಿರ್ಧರಿಸುವುದು ಸಾಧ್ಯವಿಲ್ಲವಾಗಿದೆ. ಭಕ್ತಿಪಂಥದ ಸಂತರಾದ ಚೈತನ್ಯ, ಮಾರಾಬಾಯಿ, ತುಕಾರಾಮ, ಪುರಂದರ ದಾಸ ಮೊದಲಾದವರು ತ್ಯವನ್ನು ಭಕ್ತಿ ಪ್ರಸಾರಕ್ಕೆ ಉಪಯೋಗಿಸಿಕೊಂಡರು. ಪರ್ಶಿಯಾದ ಪ್ರಸಿದ್ದ ದಾರ್ಶನಿಕನೂ, ಸೂಫಿ ಸಂತನೂ ಆದ ಹಜರತ್ ಜಲಾಲುದ್ದೀನ್ ರೂಮಿ ' ನ ತಿ ೯ ಸು ವ ಕಿ ರ ರ” (Dancing Derveshes) ಪಂಥವನ್ನೇ ಆರಂಭಮಾಡಿದ. ಮಧ್ಯಕಾಲದ ವೇಳೆಗೆ ನೃತ್ಯ ಕಲೆ ಭಾರತದಲ್ಲಿ ತೀರ ಕೆಳಮಟ್ಟಕ್ಕೆ ಬಂದಿಳಿಯಿತು. ಉತ್ತರದ ನಾಚ್, ಮಹಾರಾಷ್ಟ್ರದ ತಮಾಷ್, ದಕ್ಷಿಣದ ತಾಫೆ ನೃತ್ಯಕಲೆಗೂ ಗೃಹಸ್ಥಧರ್ಮಕ್ಕೂ ಬದ್ಧದ್ವೇಷವನ್ನು ತಂದಿಟ್ಟವು. ನರ್ತಕರಾಗುವುದು ಅಶ್ಲೀಲವೆನಿಸಿಕೊಂಡರೂ ನರ್ತಕರಿಗೆ ಪ್ರೋತ್ಸಾಹ ಕೊಡುವುದು ಶೀಲದ ವ್ಯಾಪ್ತಿಯಲ್ಲೇ ಸೇರಿತು. ನೃತ್ಯ ಕಲೆಗೆ ಬಂದೊದಗಿದ ವಿಪತ್ತನ್ನು ಪರಿಹರಿಸಲು ಯೂರೋಪ್ ಅಮೇರಿಕಾದಲ್ಲಿಯೂ ಪ್ರಯತ್ನಗಳು ನಡೆದವು. ನಿಜ, ಆನಾ ಪಾವಲೋವ, ರೂತ್ ಸೇಂಟ್ ಡೆನಿಸ್, ಐ ಸ ಡೊ ರಾ ಡ ೦ ಕ ನ್ ಮೊದಲಾದ ಪ್ರತಿಭಾನ್ವಿತರು ಸೂಳೆಗೇರಿಯಿಂದ ಪೂಜಾಮಂದಿರಕ್ಕೆ ನೃತ್ಯವನ್ನೊಯ್ಯಲು

  • "The art of dancing ... is intimately entwined with all human traditions of war, of labour, of pleasure, of education, while some of the wiscst philosophers and the most ancient civilisations have regarded the dance as the pattern in accordance with which the moral life of men must be woven"

"THE DANCE OF LIFE" --Havelock Ellis (Page 35)