ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೬ ಕರ್ನಾಟಕದ ಕಲಾವಿದರು - - G - ಹೆಚ್ಚಾಗಿ ಪಡೆಯುತ್ತೇನೆ. ಅದರಲ್ಲಿರುವ ಸಹಜತೆ ಸಂಪ್ರದಾಯನೃತ್ಯಗಳಲ್ಲಿಲ್ಲ ? * * ಶ್ರೀಮತಿಯವರ ಪ್ರಾಗತಿಕ ಮನೋಭಾವ ಸಂಪ್ರದಾಯಪ್ರಿಯರನ್ನು ಕೆರಳಿಸುವುದರಲ್ಲಿ ಸಂದೇಹವಿಲ್ಲ. ಸಂಪ್ರದಾಯವೇ ಆಗಲಿ, ಶಾಸ್ತ್ರವೇ ಆಗಲಿ ಕಲೆಗೆ ಅಧೀನವಾಗಿರಬೇಕು. ರಸಾನುಸಂಧಾನಕ್ಕೆ ಸಂಪ್ರದಾಯ ಕಂಟಕವಾದರೆ ಅದನ್ನು ಅತಿಕ್ರಮಿಸಿ ನಡೆಯುವ ಅಧಿಕಾರ ಕಲಾವಿದನಿಗಿದೆ. ತಾವು ಕೂಡಿಸಿರುವ ನೃತ್ಯನಾಟಕಗಳಲ್ಲಿ ಮಾಯಾದೇವಿ ಸಂಪೂರ್ಣ ಸ್ವಾತಂತ್ರ ವಹಿಸಿದ್ದಾರೆ. ಕಥಾವಸ್ತು, ನಿರೂಪಣೆಗೆ ಸಂಪ್ರದಾಯ, ತಂತ್ರ (Technique) ಹೊಂದಿಕೊಂಡಿವೆಯೇ ವಿನಾ, ತಂತ್ರಕ್ಕೆ ಕಥಾವಸ್ತು ಅಧೀನವಾಗಿಲ್ಲ. ↑

  • ಪ್ರಗತಿಗೂ ಸಂಪ್ರದಾಯಕ್ಕೂ ಸತತವಾಗಿ ಹೋರಾಟ ನಡೆದಿರುತ್ತದೆ. ಸಂಪ್ರದಾಯಬಿಟ್ಟು ನಡೆಯುವ ಸಾಹಿತ್ಯ, ಕಲೆ, ದೇಶದ ಶತ್ರು ಎಂದು ಸಂಪ್ರದಾಯ ಹಿಯರು ಅಭಿಪ್ರಾಯಪಡುತ್ತಾರೆ. ಸಂಪ್ರದಾಯ ಒಣಗಿದ ಕಷ್ಟವಾಗಿದೆ, ಅದಕ್ಕೆ ನೀರೆರೆದು ಚಿಗುರಿಸಲೆತ್ನಿಸುವುದು ಪರಮಮೌಡ್ಯವೆಂದು ಪ್ರಗತಿಗಾಮಿಗಳು ಭಾವಿಸುತ್ತಾರೆ. ಸಂಪ್ರದಾಯ, ಪ್ರಗತಿಯೆಂಬ ಹೆಸರುಗಳಿಗಾಗಲಿ, ನೂತನತೆಯ ಆಕರ್ಷಣೆಗಾಗಿ ನಾವು ಮನಸೋಲಬೇಕಾದುದಿಲ್ಲ, ಸ೦ ಪ್ರ ದಾ ಯ ದಲ್ಲಿ (ಅವಿನಾಶಿತ್ವ'ವೂ, ಜೀವಂತವಾಹಿನಿಯೂ ಇದ್ದರೆ ಅದನ್ನು ಪ್ರಗತಿ ತನ್ನ ಹಿತಕ್ಕಾಗಿಯೇ ಬಳಸಿಕೊಳ್ಳಬಹುದು, ಅಂಥ ಗುಣ ಸಂಪ್ರದಾಯದಲ್ಲಿಲ್ಲದಿದ್ದರೆ ಅದನ್ನು ತ್ಯಜಿಸು ವುದಕ್ಕೆ ಹಿಂಜರಿಯಬಾರದು. ಪ್ರಾಗತಿಕವಾದ ಸ್ವತಂತ್ರ ಮಾರ್ಗಗಳನ್ನು ನಿರ್ದೇಶಿಸಿ ಕೊಂಡ ಆನಾ ಪಾವಲೋವಾ, ನಿಜ (ನರ್ತಕರು) ವ್ಯಾಕರ್, ಚೆಕೋವೆಸ್ಕಿ, ಚೂಪಿನ್ (ವಾಗ್ಗೇಯಕಾರರು), ಸೆಜಾನ್, ಮಾಟಿಸ, ರನ್ನಾ, (ಚಿತ್ರಕಾರರು) ರೊದಿನ್, ಎಪ್ಸ್ಟಿನ್ (ಶಿಲ್ಪಿಗಳು) ಸಂಪ್ರದಾಯವನ್ನು ಚೆನ್ನಾಗಿ ಬಲ್ಲವರಾಗಿದ್ದ ರು. ಪ್ರಾಗತಿಕಸ್ವಾತಂತ್ರ್ಯ, ಸ್ವಚ್ಛಂದವಾಗದಿರಲು ಸಂಪ್ರದಾಯದ ಅರಿವು ಅವಶ್ಯಕ. ಸಂಪ್ರದಾಯವನ್ನು ಎಷ್ಟು ಬಳಸಿಕೊಳ್ಳಬೇಕೆನ್ನುವುದು ಕ್ರಿಯಾಶಾಲಿಯಾದ ಕಲಾವಿದನಿಗೆ ಸೇರಿದ ಕರ್ತವ್ಯಭಾಗ,

["Still more striking is the change in the responses to the beautiful from age to age. No age is satisfied wholly with the beautiful things of its forefathers, but produces other things, to the measure of its desires, quite clearly different from those beauitful traditions it inherits. This new vision does not include the old, however. The old