ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮ ಕರ್ನಾಟಕ ಕಲಾವಿದರು ಶ್ರಮವಹಿಸಿದ್ದಾರೆ. ಅವರು ಆಯ್ದು ಕೊಂಡಿರುವ ವಸ್ತುಗಳೂ ನಿರ್ವಹಿಸುವ ಕ್ರಮವೂ ಕುತೂಹಲವನ್ನು ಕೆರಳಿಸುತ್ತವೆ. ೧. ಮೋಹಿನಿ ಭಸ್ಮಾಸುರ : (೧೯೪೫) ಪ್ರ ಸಿ ದ್ದ ಪೌರಾಣಿಕ ಕಥೆಯ ನೃತ್ಯಾನುವಾದ. ಪರಮೇಶ್ವರನಿಂದ ಅನುಗ್ರಹೀತನಾದ ಭಸ್ಮಾಸುರ ಲೋಕಕಂಟಕನಾಗುತ್ತಾನೆ. ವಿಷ್ಣು ಮೋಹಿಸಿ ಅವತಾರವೆತ್ತಿ ಅವನನ್ನು ನಿಗ್ರಹಿಸುತ್ತಾನೆ. ೨, ಸೀತಾಪಹರಣ : (೧೯೪೬) ರಾಮನ ಮೇಲೆ ಮೋಹಗೊಂಡ 'ರಾಕ್ಷಸಿ ಶೂರ್ಪನಖಿ ಸುಂದರಸ್ತ್ರೀಯಂತೆ ಮಾರುವೇಷ ಧರಿಸಿ ರಾಮಲಕ್ಷ್ಮಣರ ಬಳಿಗೆ ಬರುತ್ತಾಳೆ. ರಾಮಲಕ್ಷ್ಮಣರು ಅವಳ ಪ್ರೇಮಯಾಚನೆಯನ್ನು ನಿರಾ ಕರಿಸುತ್ತಾರೆ. ತನಗಾದ ಅಪಮಾನ, ಆಶಾಭಂಗಕ್ಕೆ ಖತಿಗೊಂಡ ಶೂರ್ಪನಖಿ ಅಣ್ಣ ರಾವಣನ ಬಳಿಗೆ ಹೋಗಿ ದೂರು ಒಪ್ಪಿಸಿ, ಅವನು ಪ್ರತೀಕಾರಕ್ಕೆ ಹಾತೊರೆಯುವಂತೆ ಮಾಡುತ್ತಾಳೆ, ರಾವಣನಿಂದ ಆಜ್ಞಪ್ತನಾದ ಮಾರೀಚ ಮಾಯಾಸ್ವರ್ಣಮೃಗವಾಗಿ ರಾಮನ ಪರ್ಣಶಾಲೆಯ ಬಳಿ ಸುಳಿದು ಸೀತೆಯಲ್ಲಿ ಆಸೆಯನ್ನು ಹುಟ್ಟಿಸುತ್ತಾನೆ. ಸ್ವರ್ಣಮೃಗ ಹಿಡಿದು ತರಲು ರಾಮಲಕ್ಷ್ಮಣರು ಹೋದ ಸಮಯ ಸಾಧಿಸಿ ರಾವಣ ಸೀತೆಯನ್ನು ಕದ್ದೊಯ್ಯುತ್ತಾನೆ. ಇದರಲ್ಲಿ ಮಾಯಾದೇವಿ ರಾವಣನ ಪಾತ್ರವನ್ನ ಭಿನಯಿಸುತ್ತಾರೆ. ೩. ವರ್ಣಗೀತೆ : (೧೯೪೭) ವಿವಿಧ ವರ್ಣಗಳಲ್ಲಿ ನಾನು ಹೆಚ್ಚು ತಾನು ಹೆಚ್ಚು ಎಂದು ವಾದವಿವಾದವೇಳುತ್ತದೆ. ಕೊನೆಯಲ್ಲಿ ಶ್ವೇತವರ್ಣ ಬಂದು ಎಲ್ಲವೂ ತನ್ನಲ್ಲಿ ಸಮಾವೇಶವಾಗಿದೆಯೆಂದು ತಿಳಿಸಿ ಸಮಾಧಾನ ಹೇಳುತ್ತದೆ. ಶಾಂತಿ, ಸಮರಸವನ್ನು ಸಾಂ ಕೇ ತಿ ಕ ನಾ ಗಿ ಈ ನೃತ್ಯ ಸೂಚಿಸುತ್ತದೆ. “ ನಾನಿದೆ ವರ್ಣ ವಾದಿ ಬ್ರಹ್ಮ ನಾನಿಲ್ಲದುಳಿದೆಲ್ಲ ಬರಿಭ್ರಮಾ | ನಿನ್ನ ಬೆಳಕಿನ ಸೃಷ್ಟಿ ಶಾಲೆಯೊಳಲ್ಲಿ ಅರಳಿದವು ಹಲವು ಹೂವಂತರೆಂಬೆಗಳು ಹಸಿರು ಹಳದಿಯು ಕೆಂಪು ನೀಲಿ ॥