ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾಯಾದೇವಿ ಬಿಡಲೆ ನಾ ನೀ ಕಲೆಯ ಬಿಡಲೆ ನಾ ನೀ ಒಲವ ಹಲವು ರಾಗದ ಸುಳಿಯೊಳಗೆ ಸಿಕ್ಕೆನ್ನ ಮನಕಾವ ವಾರಿ ! ” ತನ್ನ ಶಾಂತಿ ಭಂಗಮಾಡಿದ, ನಂಬಿಕೆಗಳನ್ನು ಬುಡಮೇಲು ಮಾಡಿದ ಮೂರ್ತಿಯನ್ನು ತುಂಡುತುಂಡು ಮಾಡಿ ನಾರಮಾಡಲು ಶಿಲ್ಪಿ ಧಾವಿಸುತ್ತಾನೆ ಆ ಸೌಂದರ್ಯನಿಧಿಯನ್ನು ನಾಶಪಡಿಸಲು ಕೈ ಬಾರದು. ಆ ಮಹಾಕೃತಿಗೆ ತನ್ನ ನ್ನೇ ಬಲಿದಾನವಾಗರ್ಪಿಸಿಕೊಳ್ಳಲು ನಿರ್ಧರಿಸುತ್ತಾನೆ. ಜೀವನ ಮತ್ತು ಕಲೆ ೩೨ ಬಿ ವಾ ದು ದೆಂ ಬ ಸತ್ಯದ ಅರಿವು ಅವನಿಗಾಗುವುದು ಆಗಲೇ. ಮೂರ್ತಿವಂತ ಸತ್ಯದೇವಿ ಬಂದು ಅವನ ಕಣ್ಣು ತೆರೆಯುತ್ತಾಳೆ. * ಜೀವನ ನಿನಗೆ ಕೊಡಬೇಕಾದದ್ದು ಬಹಳ ಇದೆ. ಜೀವನದ ಸೌಂದರ್ಯ ಸುಧೆಯ೦ಟು. ವೃಥಾ ಪ್ರಾಣನೀಗಿಕೊಳ್ಳಬೇಡ ನಿನ್ನ ದಂತದ ಅರಮನೆಯಿಂದ ಹೊರಬಂದು ಜೀವನದ ಅನಂತಾವಿರ್ಭಾವವನ್ನು ನೋಡು' ಎಂದು ಕೇಳುತ್ತಾಳೆ. ಶಿಲ್ಪವೂ ಜೀವದಳೆದು ಎದ್ದು ಬರುತ್ತದೆ. ಕಲೆಯೇ ಜೀವನವೆಂಬ ಸತ್ಯ ಅವನ ದೃಗ್ಗೋಚರವಾಗುತ್ತದೆ. “ ಇದುಕಂಡಿತು ಬೆಳಕು ಓ ! ಬೆಳಕು ಬೆಳಗಿತು ಕಲೆಯು ಬಾಳು ಎರಡು ಕಣ್ಣು ಒಂದೇ ಜೀವ, ಒಂದೇ ಮೈ ಒಂದನುಳಿದು ಬೇರೆಯಲ್ಲ. ಬಾಳಬಿಟ್ಟು ಕಲೆಯೇ ಇಲ್ಲ ಕಲೆಯು ಬಾಳು ಒಂದಕೊಂದು ಪೂರಕ ಬಾಳ ಬೆರೆತ ಕಲೆಯ ವಿಶ್ವ ಶಕ್ತಿ ಸಾಧನ ಶಿಲ್ಪಿ ಆನಂದಭರಿತನಾಗಿ ಶಿಲ್ಪದೊಂದಿಗೆ ನರ್ತಿಸುತ್ತಾ ತನ್ನ ಸಂದೇಶ ವನ್ನು ಜಗತ್ತಿಗೆ ಸಾರುತ್ತಾನೆ. ಇದರಲ್ಲಿ ಮಾಯಾದೇವಿ ಶಿಲ್ಪಿಯ ಪಾತ್ರವನ್ನು ಅಭಿನಯಿಸುತ್ತಾರೆ.