ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೯ ಎಂ, ಅರ್. ದೊರೆಸ್ವಾಮಿ ಗೀತಾಚಾರ್ಯನೇ ಕೊಳಲುಕೃಷ್ಣ, ವೀಣೆಯಂತೆ ಕೊಳಲು, ಪಂಡಿತರು ವಿವಿಧಕಳಾಮಂಡಿತರಲ್ಲಿ ಅಡಗಿ ಕುಳಿತುಕೊಳ್ಳಲಿಲ್ಲ. ಕೃಷ್ಣ ಪ್ರಾಯಶಃ ಗೋವಳನಾಗಿದ್ದುದರಿಂದಲೇ ಏನೋ ಕೊಳಲು ಜನಪದದಲ್ಲಿ - ಅದರಲ್ಲಿಯೂ ರೈತರಲ್ಲಿ ವಿಶೇಷ ಬಳಕೆಗೆ ಬಂದಿತು. ಕೃಷ್ಣ ಔತ್ತರೇಯನಾಗಿದ್ದರೂ, ಕೊಳಲಿಗೆ ಅವನು ಆಧ್ಯಾತ್ಮಮಹತ್ವವನ್ನು ಕೊಟ್ಟರೂ ಸಂಗೀತದಲ್ಲಿ ಕೊಳಲು ಶ್ರೇಷ್ಠ ಸ್ಥಾನ ಗಳಿಸಿಕೊಳ್ಳಲಿಲ್ಲ. ವಿದ್ವತ್ತೂರ್ಣವಾದ ಸಂಗೀತಕ್ಕೆ ಕೊಳಲನ್ನು ಅಳವಡಿಸಿಕೊಂಡವರು ದಾಕ್ಷಿಣಾತ್ಯರು, ಕೀರ್ತಿಶೇಷ ಶರಭಶಾಸ್ತ್ರಿಗಳವರ ಅನುಪಮ ಪ್ರತಿಭೆ, ಅವರ ಶಿಷ್ಯರಾದ ಶ್ರೀ ಪಲ್ಲಡಂ ಸಂಜೀವರಾಯರ ಕೊಳಲಿನ ಚಿತ್ತಾಕರ್ಷಕ ನಾದಸೌರಭ ಕೊಳಲಿಗೆ ದಕ್ಷಿಣ ಹಿಂದೂಸ್ತಾನದಲ್ಲಿ ದಿವ್ಯಸ್ನಾನವನ್ನು ಗಳಿಸಿ ಕೊಟ್ಟ ವು. ಉತ್ತಮ ಕಲಾವಿದರಾದ ಶ್ರೀ ಗೋಪಾಲ ಅಯ್ಯರ್ ಮತ್ತು ಶ್ರೀ ಸ್ವಾಮಿನಾಥ ಸಿಳ್ಳೆಯವರು ಕೊಳಲು ಬಹುಜನ ಪ್ರೀತಿಗೆ ಕಾರಣವಾಗುವಂತೆ ಮಾಡಿದರು. ಮಾಸ್ಟರ್' ಮಹಾಲಿಂಗಂ ತಮ್ಮ ಅನ್ಯಾದೃಶ ಕ್ರಿಯಾಶಕ್ತಿಯಿಂದ ಕೊಳಲು ಸಂಗೀತಕ್ಕೆ ನೂತನ ಭಾವರಾಜ್ಯಗಳನ್ನು ಗೆದ್ದು ಕೊಟ್ಟರು. ಬಾಯಿ ಹಾಡುಗಾರಿಕೆಗೂ ದುಸ್ಸಾಧ್ಯವಾದ ನರೇಖುಗಳು, ನೆರವಲುಗಳು, ಗಮಕಗಳು ಮಹಾಲಿಂಗಂ ಅವರ ಕೊಳಲಿಗೆ ಸುಲಭಸಾಧ್ಯವಾಯಿತು. ಮೈಸೂರಿನಲ್ಲಿ ಕೊಳಲು ಸಂಗೀತದ ಕೀರ್ತಿಯನ್ನು ವಿಸ್ತರಿಸಿದವರು ದಿವಂಗತ ವಿದ್ವಾನ್ ಎಚ್. ನರಸಿಂಗರಾಯರು. ಇಂದು ಮೈಸೂರಿನ ' ಆಲ್ ಇಂಡಿಯಾ ರೇಡಿಯೊ ಸ್ಟೇಷನ್ನಿ 'ನಲ್ಲಿರುವ ವಿದ್ವಾನ್ ರಂಗಯ್ಯನವರೂ ಬೆಂಗಳೂರಿನ ಶ್ರೀ ಎಂ. ಆರ್. ದೊರೆಸ್ವಾಮಿಯವರೂ ಕೊಳಲುವಾದ್ಯದ ಏಕನಿಷ್ಠ ಸೇವಕರಾಗಿ ಕೀರ್ತಿಶಾಲಿಗಳಾಗಿದ್ದಾರೆ. ದೊರೆಸ್ವಾಮಿಯವರಿಗೆ ಇದೇ ಈಗ ಮೂವತ್ತನೆಯ ವಯಸ್ಸು ನಡೆಯುತ್ತಿದೆ. ಇವರ ತಂದೆ ಮೋದೂರು ರಾಮಚಂದ್ರಯ್ಯನವರೂ, ತಾಯಿಯ ಚಿಕ್ಕಪ್ಪನವರಾದ ವೆಂಕಟರಾಮಯ್ಯನವರೂ ಸಂಗೀತಪ್ರಿಯರು. ವೆಂಕಟರಾಮಯ್ಯನವರಿಗೆ ವಿಶೇಷ ಸಂಗೀತಜ್ಞಾನವಿದ್ದುದಲ್ಲದೆ ಅವರು ಕೀರ್ತನೆಗಳನ್ನೂ ಮಾಡುತ್ತಿದ್ದರು. ಕಿರಿಯ ದೊರೆಸ್ವಾಮಿಗೆ ಮೊದಲಿಂದಲೂ ಸಂಗೀತದ ಮೇಲೆ ವಿಶ್ವಾಸ