ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೦ ಕರ್ನಾಟಕದ ಕಲಾವಿದರು ಬಾಯಿ ಸಿಳ್ಳೆಯಲ್ಲಿ ಹಾಡು ನುಡಿಸುವುದನ್ನು ಅಭ್ಯಾಸ ಮಾಡಿಕೊಂಡರು. ಅವರ ಸಂಗೀತಾಸಕ್ತಿ ಕಂಡು, ಅವರ ಸಮೀಪ ಬಂಧುಗಳಾದ ವೀಣಾ ವಿದ್ವಾನ್ ಎಂ. ಎಸ್. ಭೀಮರಾಯರು, ನರಸಿಂಗರಾಯರ ಬಳಿಗೆ ಕರೆದೊಯ್ದು ಬಿಟ್ಟರು. ನರಸಿಂಗರಾಯರು ಶಿಷ್ಯನ ಸಿಳ್ಳೆ ಸಂಗೀತ ಬಿಡಿಸಿ ಅವನ ಕೈಗೆ ಕೊಳಲು ಕೊಟ್ಟರು. ನಾಲ್ಕು ವರ್ಷ ಸತತವಾಗಿ ಪಾಠವಾಯಿತು. ಅನೇಕ ವರ್ಣಗಳು, ಕೀರ್ತನೆಗಳಾದವು. ಈ ವೇಳೆಗೆ ದೊರೆಸ್ವಾಮಿ ಮಿಡ್ ಸ್ಕೂಲ್ ಪರೀಕ್ಷೆ ಮುಗಿಸಿಕೊಂಡು ಹೈ ಸ್ಕೂಲ್ ಸೇರಿದ್ದರು. ಕನ್ನಡ ನಾಡಿನ ದುರ್ದೈವ೧೯೩೬ ನೆಯ ಇಸವಿಯಲ್ಲಿ ನರಸಿಂಗರಾಯರು ದೈವಾಧೀನರಾದರು. ಸಬ್ ಜಡ್ಸ್ ಲಕ್ಷ್ಮಿನಾರಾಯಣರ ಮನೆಯಲ್ಲಿಯೇ ಅವರ ಕೊನೆಯ ಕಛೇರಿ, ಸಾವು ಬೀಸಿದ್ದ ಬಲೆ ನರಸಿಂಗರಾಯರಿಗೆ ಮನವರಿಕೆಯಾಗಿತ್ತೆಂದು ಕಾಣುತ್ತದೆ. ಶಿಷ್ಯ ದೊರೆಸ್ವಾಮಿಯನ್ನು ಎಲ್ಲರಿಗೂ ಪರಿಚಯ ಮಾಡಿ ಕೊಡುತ್ತಾ ಇನ್ನು ಮೇಲೆ ನಾವಿಬ್ಬರೂ ಒಟ್ಟಿಗೆ ನುಡಿಸುತ್ತೇವೆ' ಎಂದು ಹೇಳಿದರು. ದೊರೆಸ್ವಾಮಿ ಗುರುಗಳ ಜತೆ ಯಲ್ಲಿ ನುಡಿಸಿದ್ದು ಅದೇ ಕೊನೆಯಾಯಿತು. ಆಗ ನರಸಿಂಗರಾಯರ ಬಗ್ಗೆ ನಾನು ಈ ಮಾತುಗಳನ್ನು ಬರೆದೆ. 'ಮೈಸೂರಿನ ವರ್ಧಿಷ್ಟು ವೇಣುಗಾನ ವಿದ್ಯಾ ಪ್ರವೀಣರಾದ ಶ್ರೀ ನರಸಿಂಗರಾಯರ ನಿಧನವಾರ್ತೆಯು ಕಲಾಭಿಮಾನಿಗಳಿಗೆ ಅತ್ಯಂತ ವ್ಯಸನವನ್ನು ಉಂಟುಮಾಡದಿರದು. ಶ್ರೀ ಯು ತ ರಲ್ಲಿ ವಿದ್ಯಾ, ವಿನಯ ಸಂಪನ್ನತೆ, ಗಾಂಭೀರ್ಯಗಳು ಮಾತ್ರವಲ್ಲದೆ ಸಂಗೀತಗಾರರಲ್ಲಿ ಸಾಮಾನ್ಯವಾಗಿ ಇರದಸಂಸ್ಕೃತಿಯೂ ಅಪಾರವಾಗಿತ್ತು. ಅವರ ವೇಣುಗಾನದಲ್ಲಿ ಈ ಗುಣಗಳು ಮೂರ್ತಿವತ್ತಾಗಿ ಕಂಗೊಳಿಸುತ್ತಿದ್ದವು. ಶ್ರೀ ನರಸಿಂಗರಾಯರು ಕೆಲವು ವರ್ಷಗಳ ಹಿಂದೆ 'ನಾದ ವಿನೋದ ಸಭೆ' *ಯೆಂಬ ಗಾಯನ ಸಮಾಜವನ್ನು " + ವಿಶ್ವವಾಣಿ-ಸಂಪುಟ ೧, ಸಂಚಿಕೆ ೬ (ಡಿಸೆಂಬರ್ ೧೯೩೬) * * ೧೯೩೩-೩೪ರ ವೇಳೆಗೇ ಬೆಂಗಳೂರು ಗಾಯನ ಸಮಾಜ ದೊಡ್ಡ ಸಂಸ್ಥೆಯಾಗಿ ಬೆಳೆದಿತ್ತು. ಸದಸ್ಯರು ಕನ್ನಡಿಗರಾದರೂ ಅಧಿಕಾರಸೂತ್ರಗಳು ತಮಿಳರ ಕೈಯ್ಯಲ್ಲಿತ್ತು. ಈ ಸಮಾಜ ಮೈಸೂರು ವಿದ್ಯಾ ೨ ಸ ರ ನ್ನು ಗಣನೆಗೆ ತಂದುಕೊಳ್ಳುತ್ತಿರಲಿಲ್ಲ. ಮೈಸೂರಿನವರಿಗೆ ಸಂಗೀತ ಬರುವುದಿಲ್ಲವೆಂದು ಸ ಮಾ ಜ ದ ಜವಾಬ್ದಾರಿಯುತ ಅಧಿಕಾರಿಗಳು ಧಾ ರಾ ಳ ವಾಗಿ ಮಾತನಾಡುತ್ತಿದ್ದರು. ಈ ಅಪಪ್ರಚಾರವನ್ನು