ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ht೨ ಕರ್ನಾಟಕದ ಕಲಾವಿದರು ನಡೆಯುತ್ತಿದ್ದ 'ಸರಸ್ವತಿ ಆರ್‌ಕೆಸ್ವಾ' ಗೋಷ್ಠಿ ಯನ್ನು ೧೯೩೯ರಲ್ಲಿ ಸೇರಿ ೧೯೪೨ರವರೆಗೂ ಅವರೊಂದಿಗಿದ್ದರು. ಈ ಅವಧಿಯಲ್ಲಿ ಎರಡು ವರ್ಷಕಾಲ ಸಂಗೀತವಿದ್ವಾನ್ ಡಿ. ಸುಬ್ಬರಾಮಯ್ಯನವರಿಂದ ಶಿಕ್ಷಣ ದೊರಕಿತು. ಸುಬ್ಬರಾಮಯ್ಯನವರು ವಿದ್ಯಾಗುರುಗಳಾಗಿದ್ದುದು ಮಾತ್ರವೇ ಅಲ್ಲ.-ಶಿಷ್ಯನ ಪೋಷಕರೂ ಆದರು. ಕೊಳಲು ನುಡಿಸುವುದಕ್ಕೆ ಎದೆ ಗಟ್ಟಿಯಾಗಿರಬೇಕೆಂದು ಕೈಯ್ಯಂದ ಖರ್ಚುಮಾಡಿ ಶಿಷ್ಯನಿಗೆ ಉಪಚಾರ ಮಾಡಿಸಿದ್ದರು. ಅನೇಕ ಅಪರೂಪ ರಾಗಗಳು, ಪ್ರಚಲಿತ ರಾಗಗಳ ವಿಶಿಷ್ಟ ಸ್ವರೂಪ ಸುಬ್ಬರಾಮಯ್ಯ ನವರಿಂದ ಧಾರಾಳವಾಗಿ ದೊರೆಸ್ವಾಮಿಯವರಿಗೆ ದೊರೆಯಿತು. ೧೯೪೨ರಲ್ಲಿ ರಾಮಗೋಪಾಲರು ಸಿಲಾನ್ ಮತ್ತು ಅಖಿಲ ಭಾರತ ಪ್ರವಾಸ ಹೊರಟಾಗ ದೊರೆಸ್ವಾಮಿಯವರನ್ನೂ ಜತೆಯಲ್ಲಿ ಕರೆದುಕೊಂಡು ಹೋದರು. ದೊರೆಸ್ವಾಮಿಯವರ ತನಿ ನುಡಿಸುವಿಕೆ ಅಖಿಲ ಭಾರತದ ಕಲಾಭಿಮಾನಿಗಳ ವಿಶ್ವಾಸ ದೊರಕಿಸಿಕೊಟ್ಟಿತು. ೧೯೪೬ರಲ್ಲಿ ತಾರಾಚೌಧುರಿ ಯವರ ಜತೆ ಪ್ರವಾಸ ಕೈಗೊಂಡರು. ಆಗ ತಾ ರಾ ಚೌ ಧು ರಿ ಯ ವ ರ “ಉಷಾ ನೃತ್ಯ', 'ಬೆಳದಿಂಗಳು', 'ಕೃಷ್ಣಲೀಲೆ', ನೃತ್ಯಗಳಿಗೆ ಸಂಗೀತವನ್ನು ಅಳವಡಿಸಿಕೊಟ್ಟರು. ಮೂರು ವರ್ಷ ತಾರಾಚೌಧುರಿಯವರ ಜತೆ ಪ್ರವಾಸ ಮಾಡಿದ ಮೇಲೆ ೧೯೪೯ರಲ್ಲಿ ಬೆಂಗಳೂರಿನಲ್ಲಿ ನೆಲಸಿದರು. ಈವರೆಗೆ ಬೆಂಗಳೂರು, ಮೈಸೂರು, ಮದರಾಸುಗಳಲ್ಲಿ ಹಲವು ಕ ಚೇ ರಿ ಗ ಳ ನ್ನು - ನಡೆಸಿದ್ದಾರೆ. ದೊರೆಸ್ವಾಮಿಯವರ ಕೊಳಲುವಾದನದಲ್ಲಿ ಸಮೋಹಕ ಶಕ್ತಿಯಿದೆ. ಹಕ್ಕಿಗಳ ಕಲರವದಂತಿರುತ್ತದೆ ಅವರ ಕೊಳಲಿನ ಮಂಜುಳ ನಿನಾದ, ನಾದ ಎಲ್ಲಿ ಹಗುರವಾಗಬೇಕು, ಎಲ್ಲಿ ಘಾತವಾಗಬೇಕೆನ್ನುವುದನ್ನು ದೊರೆಸ್ವಾಮಿ ಬದಳ ಜಾಳ್ಮೆಯಿಂದ ಸ್ವರರಂಧ್ರಗಳ ಮೇಲೆ ಪ್ರಯೋಗಿಸುತ್ತಾರೆ. ಅಪಶ್ರುತಿ ನುಡಿಯದಂತೆ ಕೊಳಲು ನುಡಿಸುವ ಸಾಧನೆ ಗುರುಕೃಪೆಯಿಂದ ದೊರೆಸ್ವಾಮಿಯವರಿಗೆ ಲಭ್ಯವಾಗಿದೆ. ಬಾಯಲ್ಲಿ ಹಾಡಿದರೆ ಸ್ವರ, ಸಾಹಿತ್ಯ ಎಷ್ಟು ಸ್ಪಷ್ಟವಾಗಿರುತ್ತದೆಯೊ ಇವರ ವಾದ್ಯದಲ್ಲಿ ಅಷ್ಟು ಸ್ಪಷ್ಟವಾಗಿ ನುಡಿಯುತ್ತದೆ. ದೊರೆಸ್ವಾಮಿ ತಮ್ಮಿಬ್ಬರು ಗುರುಗಳ ಸಂಗೀತವನ್ನಲ್ಲದೆ ಅರಿಯಾಕುಡಿ,