ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಂ. ಆರ್. ದೊರೆಸ್ವಾಮಿ ೧೬೩ ಶಮ್ಮಂಗುಡಿ, ಮಹಾರಾಜಪುರಂ ವಾಸುದೇವಾಚಾರ್ಯ, ಎ. ಸುಬ್ಬರಾವ್, ಚಿಂತಲಪಲ್ಲಿ ರಾಮಚಂದ್ರರಾಯರ ಸಂಗೀತವನ್ನು ತುಂಬ ಆದರಿಸುತ್ತಾರೆ. ಮಹಾಲಿಂಗಂ ಅವರ ಕೊಳಲುವಾದನದ ಬಗ್ಗೆ ದೊರೆಸ್ವಾಮಿಯವರಿಗೆ ಭಕ್ತಿಪೂರ್ಣ ವಿಶ್ವಾಸವಿದೆ. ದೊರೆಸ್ವಾಮಿ ಮುಖದಲ್ಲಿ ಸದಾ ನಗೆ ಲಾಸ್ಯವಾಡುವಂತೆ ಅವರ ಸಂಗೀತದಲ್ಲಿಯೂ ನಗೆ-ಸಂತೋಷ ತುಂಬಿರುತ್ತದೆ. ಜೀವನದ ಜಂಜಡ ಪರಿಸಿ, ಮನಸ್ಸಿಗೆ ಅಲೌಕಿಕ ಆನಂದ ನೀಡುವ ಶಕ್ತಿ ಅವರ ವಿದ್ವತಿಗಿದೆ. ಕನ್ನಡ ಕಲೆಯ ಹಿರಿಮೆಯನ್ನು ಸಾರಬಲ್ಲ ಸಾಮಥ್ಯವುಳ್ಳವರಲ್ಲಿ ದೊರೆಸ ಒಬ್ಬರೆಂದು ಧಾರಾಳವಾಗಿ ಹೇಳಬದುದು.