ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೧ ಕರ್ನಾಟಕದ ಕಲಾವಿದರು ಸತ್ಯದರ್ಶನ, ಸೌಂದರ್ಯಾ ವಿರ್ಭಾವಗಳಿಗೆ ಛಾಯಾಚಿತ್ರಕಲೆಯನ್ನು ಉಪಯೋಗಿಸಿಕೊಳ್ಳುವಂತೆ ದೈನಂದಿನ ಜೀವನಕ್ಕೆ ಹೇಗೆ ಉಪಯೋಗಿಸಿ ಕೊಳ್ಳಬಹುದೆಂದು ಸಿ , ತಾ ರಾಮ್ ತೋರಿಸಿಕೊಟ್ಟಿದ್ದಾರೆ. ಮಿಂಟೊ ಆಪ್ತಾಲ್ಮಿಕ್ ಮತ್ತು ವಿಕ್ಟೋರಿಯಾ ಆಸ್ಪತ್ರೆಯ ಡಾಕ್ಟರುಗಳ ರೋಗ ನಿಧಾನಕ್ಕೆ (Diagnosis) ಸೀತಾರಾಮ್ ಅವರ ಛಾಯಾಚಿತ್ರಗಳು ಸಹಾಯ ಮಾಡಿವೆ. - ನೃತ್ಯದ ಭಾವ ಭಂಗಿಗಳ ಛಾಯಾಚಿತ್ರ ತೆಗೆಯುವುದರಲ್ಲಿ ಸೀತಾರಾಮ್ ಅವರದು ಸಿದ್ಧಹಸ್ಯ, ರಾಮಗೋಪಾಲ್, ತಾರಾಚೌಧುರಿ, ಜಾನಕಿ, ಜರ್ ಜಸ್ಸಾವಾಲಾ, ನೀನಾ ತಿಮ್ಮಯ್ಯ, ಯು. ಎಸ್. ಕೃಷ್ಣ ರಾವ್, ಮಾಯಾದೇವಿ ಮೊದಲಾದ ಕಲಾವಿದ ಕಲಾವಿದೆಯರ ನೂರಾರು ಚಿತ್ರಗಳನ್ನು ತೆಗೆದಿದ್ದಾರೆ. ಸೀತಾರಾಮ್ ತೆಗೆದ ರಾಮಗೋಪಾಲರ ಛಾಯಾಚಿತ್ರಗಳು ಐರೋಪ್ಯ ಕಲಾವಿದರನ್ನು ಆಶ್ಚರಗೊಳಿಸಿವೆ. ಸೀತಾರಾಮರ ಕಲಾ ಖ್ಯಾತಿ ಭಾರತದಲ್ಲಲ್ಲದೆ ವಿದೇಶಗಳಲ್ಲಿಯೂ ಹಬ್ಬಿದೆ. ೧೯೪೭ರಲ್ಲಿ ಅಮೆರಿರ್ಕ ಫೋಟೊಗ್ರಾಫಿಕ್ ಆನ್ಯುಯಲ್” ಸಂಚಿಕೆಯಲ್ಲಿ ಸೀತಾರಾಮರ ಏಳು ಚಿತ್ರಗಳಿಗೆ ಮೆಚ್ಚುಗೆ ದೊರಕಿತು. ಅದೇ ವರ್ಷ * ಬ್ರಿಟನ್ನಿನ ರಾಯಲ್ ಫೋಟೋಗ್ರಾಫಿಕ್ ಸೊಸೈಟಿ ” ಸೀತಾರಾಮರ ಛಾಯಾಚಿತ್ರಗ್ರಹಣ ಕಲೆಯನ್ನು ಆದರಿಸಿ ಅವರಿಗೆ ಎ. ಆರ್. ಪಿ. ಎಸ್. ಈ ಸ್ಟಾನವಿತ್ತು ಗೌರವಿಸಿದರು. * ವಿಶ್ವವಿಖ್ಯಾತರಾದ ಈ ಕನ್ನಡ ಶಿಲ್ಪಿ ಸರಳ ಸೌಜನ್ಯದ ಮೂರ್ತಿಗ ಳಾಗಿದ್ದಾರೆ. ಅವರ ಕಲಾಭಿಮಾನ, ಕಲಿಯುವ ಆಸಕ್ತಿ, ನಿರಪಂಭಾವ ಸುಸಂಸ್ಕೃತ ಜೀವನ ಇತರ ಕಲಾವಿದರಿಗೆ ಮಾದರಿಯಾಗಿದೆ.

  • Associate Royal Photographic Society of Great Britain