ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಗೀತವಿದುಷಿ ಚೊಕ್ಕಮ್ಮ ೧೭೩ ಚೊಕ್ಕಮ್ಮನವರಿಗೆ ಎಸ್.ಎಸ್.ಎಲ್.ಸಿ. ಯವರೆಗೆ ಇಂಗ್ಲಿಷ್ ಶಿಕ್ಷಣವಾಯಿತು. ಸಂಸ್ಕೃತದಲ್ಲಿ ಮೈಸೂರು ಸರ್ಕಾರದ 'ಸಾಹಿತ್ಯ' ಪರೀಕ್ಷೆ ಮುಗಿಸಿಕೊಂಡು ಈಗ ಅಲಂಕಾರವನ್ನೇ ಪರೀಕ್ಷೆಯ ವಿಷಯವಾಗಿ ತೆಗೆದುಕೊಂಡು 'ಮಾಧ್ಯಮ' ಪರೀಕ್ಷೆಗೆ ಕೂಡಲು ಅಭ್ಯಾಸಮಾಡುತ್ತಿದ್ದಾರೆ. ಹಿಂದಿ 'ರಾಷ್ಟ್ರಭಾಷಾ' ಪರೀಕ್ಷೆಯವರೆಗೆ ಅಭ್ಯಾಸವಾಗಿದೆ. ಮೈಸೂರು ಸರ್ಕಾರ ನಡೆಸುವ ಸಂಗೀತ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಚೊಕ್ಕಮ್ಮನವರ ಸಂಗೀತದ ಪ್ರಥಮಗುರುಗಳು ಶ್ರೀ ವಿರೂಪಾಕ್ಷಾಸ್ತ್ರಿಗಳು. ಅನಂತರ ಮೈಸೂರಿನ ಶ್ರೀ ದೇವಪ್ಪನವರೂ, ಶ್ರೀ ಟಿ. ಪುಟ್ಟಸ್ವಾಮಯ್ಯ (ಸಂಗೀತರತ್ನ ಟಿ. ಚೌಡಯ್ಯನವರ ಸೋದರರು) ಕೆಲವು ದಿನ ಪಾಠ ಹೇಳಿದರು. ತರುವಾಯ ಮೈಸೂರು ಆಸ್ಥಾನದ ಮೃದಂಗವಿದ್ವಾನ್ ಡಿ, ಶೇಷಪ್ಪನವರು ಪಾಠ ಹೇಳಲಾರಂಭಿಸಿದರು. ಅವರ ಪಾಠವೇ ಇಂದಿಗೂ ನಡೆದಿದೆ. ಸಂಪ್ರದಾಯವನ್ನು ಬಿಡದೆ ರಾಗದ ಜೀವಂತವಾಹಿನಿಯನ್ನರಸಿ ಅನುಸರಿಸುವ ಕಡೆಗೂ ಸಾಹಿತ್ಯದ ಶುದ್ಧ ಸ್ವರೂಪವನ್ನು ಉಳಿಸಿಕೊಳ್ಳುವುದರ ಕಡೆಗೂ, ನೆರವಲುಗಳ ವ್ಯಾಪ್ತಿಯನ್ನು ಕಂಡುಹಿಡಿದು ಅದು ಭಾನ, ರಸಕ್ಕೆ ಪೋಷಕವಾಗುವಂತೆ ಬೆಳಸುವುದಕ್ಕೂ ಚೊಕ್ಕಮ್ಮನವರು ವಿಶೇಷ ಲಕ್ಷ ಕೊಡುತ್ತಿದ್ದಾರೆ. ಶ್ರೀ ಶೇಷಪ್ಪನವರು ಶ್ರೇಷ್ಠ ವರ್ಗದ ಮೃದಂಗ ವಿದ್ವಾಂಸರಾದುದರಿಂದ ಅವರ ಶಿಕ್ಷಣದಿಂದ ಚೊಕ್ಕಮ್ಮನವರ ಲಯಕಾಲ ಜ್ಞಾನದಲ್ಲಿ ಖಚಿತತೆಯೂ, ಔಚಿತ್ಯವೂ, ಶ್ರುತಿಶುದ್ದತೆಯೂ ಮೂಡಲು ಅನುಕೂಲವಾಗಿದೆ. * ಕರ್ನಾಟಕ ಪದ್ದತಿಯ ಸಂಗೀತ ಇಂದು ಕೆಲವು ಸಮಯಾಚಾರಗಳಿಗೆ ಕಟ್ಟಾಗಿ ತನ್ನ ಕ್ರಿಯಾಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಹಾಡುವವರಿಗೆ ಸಾಹಿತ್ಯಜ್ಞಾನ ಹಾಗೂ ಕೀರ್ತನಸಾಹಿತ್ಯ ಸಂಗ್ರಹವಿಲ್ಲವಾಗಿದೆ. ತಮಿಳು ವಿದ್ವಾಂಸರ ಬಾಯಲ್ಲಿ ನುಡಿಯುವ ತೆಲುಗು ಕೀರ್ತನೆಗಳು ಕರ್ಣಕಠೋರ ವಾಗಿರುತ್ತವೆ, ಹಾಡುವವರೂ ಅಚ್ಚು ಮಾಡಿಕೊಂಡಂತೆ ಒಂದೊಂದು ರಾಗಕ್ಕೆ ಒಂದೊಂದು ಕೀರ್ತನೆ ಪಾಠಮಾಡಿಕೊಂಡಿರುತ್ತಾರೆ. ಸಂಗೀತಸಾಹಿತ್ಯದಲ್ಲಿ ಕೀರ್ತನೆಗಳಿಗೆ ಯಾವ ದಾರಿದ್ರವಿಲ್ಲದಿದ್ದರೂ ನಾವು ಮೇಲಿಂದ ಮೇಲೆ,