ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

h೬ ೫ ಸಂಗೀತವಿದುಷಿ ಚೊಕ್ಕಮ್ಮ ವಿಲ್ಲದಿರುವುದರಿಂದ ಅದು ಮುಂದುವರಿಯಲಿಲ್ಲ. ಆದರೆ ಹಿಂದೂಸ್ತಾನಿ ಪದ್ಧತಿಯ ಶ್ರೇಷ್ಟ ಕಲಾ ವಿ ದ ರಾ ದ ಉಸ್ತಾದ್ ಫಯಾಜ್ ಖಾನ್, ರೋಷನಾರಾ ಬೇಗಂ, ಅಬ್ದುಲ್ ಖಾದರ್ ಮೊದಲಾದವರ ಸಂಗೀತಕೇಳಿ ಅವರ ಪದ್ದತಿಯ ಜೀವಾಳವನ್ನರಿಯಲು ಪ್ರಯತ್ನಿಸಿದ್ದಾರೆ.

  • ಬಾಯಿಹಾಡುಗಾರಿಕೆಯಲ್ಲದೆ ಚೊಕ್ಕಮ್ಮನವರು ಸೊಗಸಾಗಿ ವೀಣೆ ನುಡಿಸುತ್ತಾರೆ. ತಬಲಾನಾದನ ಅಭ್ಯಾಸಮಾಡುತ್ತಿದ್ದಾರೆ. ಸಂಸ್ಕೃತ, ತಮಿಳು, ತೆಲುಗು ಭಾಷೆಗಳ ಪರಿಚಯವಿದೆ. ಗೋಸೇವೆ ಮತ್ತು ನಾಯಿ ಸಾಕುವುದರಲ್ಲಿ ತುಂಬ ಅಭಿಮಾನ, ಡ್ರಾಯಿಂಗ್, ಕಸೂತಿ ಕೆಲಸ, ಲೇಸ್ ಕೆಲಸಗಳಲ್ಲಿಯೂ ಇವರಿಗೆ ಪರಿಶ್ರಮವಿದೆ. ಸಂಗೀತಗಾರರಿಗೂ ಸಾಹಿತ್ಯಾಭ್ಯಾಸ ಅವಶ್ಯಕವೆಂದು ಭಾವಿಸುವವರಲ್ಲಿ ಚೊಕ್ಕಮ್ಮನವರೊಬ್ಬರು.

ಬೆಂಗಳೂರು, ಮೈಸೂರು, ಮದರಾಸು, ಧಾರವಾಡಗಳಲ್ಲಿ ಇವರ ಕಛೇರಿಗಳಾಗಿವೆ. ಮೈಸೂರು, ಮದರಾಸು, ಎ. ಐ. ಆರ್, ಸ್ಟೇಷನ್ನಿನಲ್ಲಿ ಮೇಲಿಂದ ಮೇಲೆ ಹಾಡುತ್ತಾರೆ. ಇವರ ಹಾಡಿಕೆಯನ್ನು ರೈಟ್ ಆನರಬಲ್ ವಿ.ಎಸ್. ಶಾಸ್ತ್ರಿಗಳೂ, ಟೈಗರ್ ವರದಾಚಾರ್ಯರೂ, ಕೃಷ್ಣಮಾಚಾರ್ಯರೂ, ರುಕ್ಕಿಣಿ ಆರುಂಡೇಲರೂ, ಪಳಿನಿ ಸುಬ್ರಹ್ಮಣ್ಯ ಪಿಳ್ಳೆಯವರೂ, ಅಬ್ದುಲ್ ಖಾದರ್ ರವರೂ, ಅರಿಯಾಕುಡಿ ರಾ ಮಾ ನು ಜ ಯ್ಯ • ಗಾ ಯ ೯ ರೂ, ವೆಂಕಟಗಿರಿಯಪ್ಪನವರೂ, ದೇವೇಂದ್ರಪ್ಪನವರೂ ಕೇಳಿ ಮೆಚ್ಚುಗೆ ವ್ಯಕ್ತ ಮಾಡಿದ್ದಾರೆ. ಸಂಗೀತದ ಬಗ್ಗೆ ಇವರು ತಳೆದಿರುವ ಅಭಿಪ್ರಾಯ ಗಮನಾರ್ಹ ವಾದುದಾಗಿದೆ : 'ಸಂಗೀತ ಸರ್ವಜನ ಸಂಪ್ರೀತ ವಿದ್ಯೆ, ಅದು ಮನುಷ್ಯರಿಗೆ ಮಾತ್ರವೇ ಅಲ್ಲ ಪಶು ಪ್ರಾಣಿ ವರ್ಗಕ್ಕೂ ಪ್ರಿಯವಾಗಿದೆ. ಚಿಕ್ಕ ಮಕ್ಕಳೂ ಸಂಗೀತವನ್ನು ಆ ದರಿಸುತ್ತಾರೆ. ಶ್ರುತಿ, ತಾಳ, ಭಾವಗಳ ಮಿಳನವೇ ಸಂಗೀತ, ಹಾಡು, ಹಾಡುವವರಿಗೂ ಕೇಳುವವರಿಗೂ ಶಾಂತಿಯನ್ನೂ ನೆಮ್ಮದಿಯನ್ನೂ ಕೊಡಬೇಕು. ಅದು ದೈವಭಕ್ತಿಯನ್ನು ಹೆಚ್ಚಿಸಿ ಮು ಕೈ ಗೆ ಮಾರ್ಗ ತೋರಬೇಕು. ಇಂಥ ಉದಾತ್ತ ಆಶಯವನ್ನಿಟ್ಟುಕೊಂಡು ಸಂಗೀತ ಸಾಧನೆಗೆ ಹೊರಟಿರುವ ಚೊಕ್ಕಮ್ಮನವರ ಹಾಡುಗಾರಿಕೆ ರಸಕಲೆಯ ಜೀವಾಣುವಿನಿಂದ ಕೂಡಿರುವುದರಲ್ಲಿ ಆಶ್ಚರ್ಯವೇನು ?