ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಿ. ಸುಬ್ಬರಾವ್ ೧೮೩ ಶಾಖೆಯ ಪ್ರಾಧ್ಯಾಪಕರಾದ ಅವನೀಂದ್ರನಾಥ ಠಾಕೂರರು ಪ್ರಾಚೀನ ಕಲಾಕೃತಿಗಳ ಜೀರ್ಣೋದ್ಧಾರ ಮಾಡಿದ್ದಲ್ಲದೆ ಸಂಪ್ರದಾಯವನ್ನು ಹಿಡಿದು ನೂತನ ಕೃತಿಗಳನ್ನು ರಚಿಸಿದರು. ಕೆಲಾ ಪುನರದಯಕ್ಕೆ ಮಾತೃಸ್ಥಾನವಾದ ಠಾಕೂರ ಮನೆತನದಲ್ಲಿಯೇ ಕಲೆಯ ಕ್ರಾಂತಿಪುರುಷರ ಅವತಾರವೂ ಆಯಿತು. ಅವನೀಂದ್ರನಾಥ ಠಾಕೂರರ ಸೋದರರಾದ ಗಗನೇಂದ್ರನಾಥ ಠಾಕೂರರು ಸಾಂಪ್ರದಾಯಿಕ ಮಾರ್ಗಗಳನ್ನು ಸಂಪೂರ್ಣವಾಗಿ ತ್ಯಜಿಸಿ ಆಧುನಿಕ ಕ್ರಿಯಾ ಅಲ್ಪಿಗಳಾದ ಹೊಕುಸಮ್, ಹೀರೋಗೆ, ಉಟಮಾರೋ ಮೊದಲಾದ ಜಪಾನೀ ಚಿತ್ರಗಾರರಿಂದಲೂ, ಸೆಜಾನ್, ಪಿಕಾಸೋ, ರೆನ್ಯಾ, ಮಾನೆ ಮೊದಲಾದ ಫ್ರೆಂಚ್ ಚಿತ್ರಗಾರರಿಂದಲೂ ಸ್ಫೂರ್ತಿ ಪಡೆದರು. ಕಲೆಯ ಕ್ರಾಂತಿಯ ಸಂಪೂರ್ಣವಾಗಿ ಭಾರತೀಯವಾಗಿರಬೇಕೆಂದು ಪ್ರತಿಪಾದಿಸಿದವರು ಜಾಮಿನಿರಾಯರು. ಜಾಮಿನಿರಾಯರ ಅನುಪಮ ಕೃತಿಗಳಿಂದ ಉತ್ತೇಜಿತರಾದ ರವೀಂದ್ರನಾಥ ಠಾಕೂರರು ಸ್ವತಂತ್ರ ಮಾರ್ಗ ನನ್ನಳವಡಿಸಿಕೊಂಡು ಭಾರತೀಯ ಚಿತ್ರಕಲಾದೇಶಕ್ಕೆ ನೂತನ ಮುಖವನ್ನು ಕಲ್ಪಿಸಿಕೊಟ್ಟರು. ಜಾಮಿನಿರಾಯರು, ರವೀಂದ್ರನಾಥರು ಇವರಿಬ್ಬರ ಪ್ರಭಾವಕ್ಕೂ ಸಿಕ್ಕದೆ ಸ್ವತಂತ್ರವಾti-ಆದರೆ ಅವರು ಹೋದ ಜಾಡಿನಲ್ಲೇ ನಡೆದವರು ಅಮೃತ ಷೇರ್ ftಲ್, ಗಗನ್ ಬಾಬು, ರವೀಂದ್ರರು, ಜಾಮಿನಿ ರಾಯ್ ಮತ್ತು ಅದ್ಭುತ ಸೇಲ್ ಗಿಲ್ ಆಧುನಿಕ ಕಲೆಯ ಮೊದಲಿಗರು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆಧುನಿಕ ಚಿತ್ರಕಲೆಯ ಸ್ತಿತ್ವಕ್ಕೆ ಜಾಮಿನಿರಾಯರ ಪ್ರತಿಭೆ ಯಿಂದಾಗಿರುವಷ್ಟು ಉಪಕಾರ ಬೇರೆ ಯಾರಿಂದಲೂ ಆಗಿಲ್ಲವೆಂದು ಹೇಳಬಹುದು. ಮಿಕ್ಕ ಆಧುನಿಕ ಚಿತ್ರಗಾರರು ಯೂರೋಪ್, ಜಪಾನ್‌ಗಳ ಕಡೆ ಲಕ್ಷವಿಟ್ಟರೆ ಜಾಮಿನಿರಾಯರು ಭಾರತದ ಹಳ್ಳಿಗರ ಸಂಸ್ಕೃತಿಯನ್ನು ಅನುಲಕ್ಷಿಸಿದರು. ಹಳ್ಳಿಗರ ಭಾವ ಭಂಗಿ, ಆಚಾರ ವಿಚಾರ, ಅಭಿರುಚಿ

  • ಹತ್ತೊಂಭತ್ತನೆಯ ಶತಮಾನದ ಅಂತ್ಯ ಮತ್ತು ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಫ್ರಾನ್ಸಿನಲ್ಲಿ ಆರಂಭವಾದ ನೂತನ ಕಲಾ ಪ್ರಯೋಗಗಳನ್ನು ನಾನು (ಭಾರತೀಯ ಚಿತ್ರಕಲೆಯಲ್ಲಿ ರಾಜಾ ರವಿವರ್ಮನ ಸ್ಥಾನ' (ಪುಟ ೧೧೬) ಗ್ರಂಥದಲ್ಲಿ ವರ್ಣಿಸಿದ್ದೇನೆ.