ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೪ ಕರ್ನಾಟಕದ ಕಲಾವಿದರು ಆಕಾಂಕ್ಷೆ, ವರ್ಣ ಸಾಮಂಜಸ್ಯ, ಉಡುಗೆ ತೊಡುಗೆಗಳನ್ನೇ ರಾಯರು ತಮ್ಮ ಚಿತ್ರಗಳಲ್ಲಿ ಭಟ್ಟಿಯಿಳಿಸಿರುತ್ತಾರೆ. ಭಾರತದ ಪ್ರಾಚೀನ ಸಂಪ್ರದಾಯ ಚಿತ್ರಗಳನ್ನ ನೋಡಿ ನೋಡಿ ಅಭಿರುಚಿ ಬೆಳಸಿಕೊಂಡಿರುವವರಿಗೂ, ಪಾಶ್ಚಾತ್ಯ ಮಾರ್ಗಗಳಿಗೆ ಮಾರುವೋಗಿರುವವರಿಗೂ ಜಾಮಿನಿರಾಯರ ಚಿತ್ರಗಳು ವಿಚಿತ್ರವಾಗಿ ಕಾಣಬಹುದು. ಕರ್ನಾಟಕದಲ್ಲಿ ಆಧುನಿಕ ಚಿತ್ರಕಲಾಪದ್ದತಿಯನ್ನು ಆರಂಭಿಸಿರುವ ಪಿ. ಸುಬ್ಬರಾಯರು ಜಾಮಿನಿರಾಯರ ಸ್ವಾತಂತ್ರವನ್ನು, ವಿಚಾರ ವೀಕ್ಷಣವನ್ನು ಪ್ರತಿಧ್ವನಿಸುತ್ತಾರೆ. ಆದರೆ ಅನುಕರಿಸುವುದಿಲ್ಲ. ಬಂಗಾಳದಲ್ಲಿ ಹೇಗೆ ಜಾಮಿನಿರಾಯರ ಒಂದು ಪಂಥವೇ ಆರಂಭವಾಯಿತೊ ಕಾಗೆ ಕರ್ನಾಟಕದಲ್ಲಿ ಒಂದು ನೂತನ ಪಂಥದ ಅಸ್ತಿಭಾರ ಹಾಕುತ್ತಿರುವವರು ಸಿ. ಸುಬ್ಬರಾಯರು. ಇವರು ಜನಿಸಿದ್ದು ೧೯೧೭ ರಲ್ಲಿ. ತಂದೆ ಪುಟ್ಟನರಸಪ್ಪನವರು ಕೋರ್ಟಿನಲ್ಲಿ ಕ್ಲರ್ಕ್ ಆಗಿದ್ದರು. ಹೈ ಸ್ಕೂಲ್ ವರೆಗೆ ಸುಬ್ಬರಾಯರು ಓದಿ ಶಾಲೆಬಿಟ್ಟರು. ಇವರ ಭಾವನವರಾದ ದಾಸಪ್ಪನವರು ಡ್ರಾಯಿಂಗ್ ಟೀಚರ್ ಆಗಿದ್ದರು. ಕಲಾಶಿಕ್ಷಣ ಪಡೆಯಲು ಸುಬ್ಬರಾಯರಿಗೆ ಪ್ರೇರಣೆ ಯ ನ್ನುಂಟು ಮಾಡಿ ದ ವ ರು ದಾಸಪ್ಪನವರು. ೧೯೩೧ ರಲ್ಲಿ ಎ. ಎನ್. ಸುಬ್ಬರಾಯರು ನಡೆಸುತ್ತಿದ್ದ ಕಲಾಮಂದಿರ ' ಸಂಸ್ಥೆ ಸೇರಿದರು. ಅಲ್ಲಿ ಒಂದು ವರ್ಷ ಡ್ರಾಯಿಂಗ್ ಶಿಕ್ಷಣಪಡೆದು 'ಚಾಮರಾಜೇಂದ್ರ ಟೆಕ್ನಿಕಲ್ ಇನ್ ಸ್ಟಿಟ್ಯೂಟ್ ' ಸೇರಲು ಮೈಸೂರಿಗೆ ಹೋದರು. ನಾಲ್ಕು ವರ್ಷ ಟೆಕ್ನಿಕಲ್ ಇನ್ಸ್ಟಿಟ್ಯೂಟಿನಲ್ಲಿ ಟಂಕಸಾಲೆ, ಕೇಶವಯ್ಯ, ಪಾವಂಜೆ, ವೇಣುಗೋಪಾಲ ನಾಯಿಡು ಮೊದಲಾದ ಕಲಾಶಿಕ್ಷಕರಲ್ಲಿ ಶಿಕ್ಷಣ ಪಡೆದರು. ೧೯೩೬ ರಲ್ಲಿ ಬೆಂಗಳೂರಿಗೆ ಹಿಂತಿರುಗಿ ಆರ್ ಲಿಥೋ ಪ್ರೆಸ್ ನಲ್ಲಿ ಡ್ರಾಫ್ಟ್ಮ ನ್ ಆಗಿ ಕೆಲಸ ಮಾಡಿದರು. ಕೆಲವು ಕಾಲ ತಿಮ್ಮಯ್ಯನವರ * ಮೈಸೂರು ಸೌಂಡ್ ಸ್ಟುಡಿಯೋ ' ನಲ್ಲಿ ಮೂರ್ತಿ ನಿರ್ಮಾಪಕರಾಗಿ ಸೇವೆ ಮಾಡಿದರು. ೧೯೪೪ ರಲ್ಲಿ ಪುಣೆಗೆ ಹೋಗಲು ಅನುಕೂಲವಾಯಿತು. ಅಲ್ಲಿ ಚಿತ್ರಗಾರ ಗೋಂದಲೇಕರ್ ಅವರಲ್ಲಿ ೧೯೪೭ರವರೆಗೆ ಶಿಕ್ಷಣ ಪಡೆದು ಮುಂಬಯಿ ಕಲಾಶಾಲೆಯ ಡಿಪ್ಲೊಮಾ ಪರೀಕ್ಷೆಗೆ ಕುಳಿತು ತೇರ್ಗಡೆ ಹೊಂದಿದರು. ಊರಿಗೆ ಹಿಂದಿರುಗಿದ ಮೇಲೆ ಚಿತ್ರ ಕಲಾ ವ್ಯವಸಾಯಿಗಳಾದರು.