ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೩ ಕರ್ನಾಟಕದ ಕಲಾವಿದರು ಹಾಲುಗರೆಯುತ್ತಿದ್ದಾಳೆ. ಅವಳ ಮುಖದಲ್ಲಿ ಆಶ್ಚರ್ಯಚಿನ್ನೆ ಮೂಡಿದೆ. ಪ್ರಾಯಶಃ ಅವಳ ಸೋದರಿ ಕೇಳಿದ ಯಾವುದೋ ವಾರ್ತೆ ಕೇಳಿ ಅವಳು ಚಕಿತಳಾಗಿರಬೇಕು. ಸೋದರಿ ಮುಂಬದಿಯಲ್ಲಿ ಕುಳಿತು ಅಂಗವಿನ್ಯಾಸ ಮಾಡಿಕೊಂಡು ಯಾವುದೋ ವಾರ್ತೆ ಹೇಳುತಿದ್ದಾಳೆ. ಮುಂದಿನ ಬುಟ್ಟಿ ಅವಳದೇ, ಗಂಡನಿಗೆ ಊಟ ಹೊತ್ತು ಹೊರಟಿದ್ದಾಳೆಂದು ಸೂಚಿಸುತ್ತದೆ, ಆದರೆ ವಾರ್ತೆ ಹೇಳುವ ಚಟ ಅವಳನ್ನು ಕರ್ತವ್ಯಪರಾಜ್ಜುಗಳನ್ನಾಗಿ ಮಾಡಿದೆ, ವಾರ್ತೆ ಹೇಳುತ್ತಿರುವವಳ ಕಣ್ಣುಗಳಲ್ಲಿ ಮೂಡಿರುವ ಉದ್ವೇಗ, ಕೇಳುತಿರುವವಳ ಕಣ್ಣಲ್ಲಿ ಮಿನುಗುತ್ತಿರುವ ಆಶ್ಚರ್ಯ ಚಿತ್ರಕ್ಕೆ ವಿಶೇಷ ಶಕ್ತಿಯನ್ನಿಗೆ * ರಾಮ-ರಾಮಿ' ಹಳ್ಳಿಯ ಜೀವನದ ಒಂದು ಸುಭಗ ನೋಟ. ಗಂಡ ರಾಮ ನೇಗಿಲಹೊತ್ತು ಅಂದಿನ ಉಳುಮೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾನೆ. ಅವನ ಜತೆಯಲ್ಲಿ ಹೆಂಡತಿ ರಾಮಿ ಊಟ ತೆಗೆದುಕೊಂಡು ಹೋಗಿದ್ದ ಬುಟ ಯನ್ನು ತಲೆಯಮೇಲೆ ಹೊತ್ತುಕೊಂಡು ಅವನಾಡು ರುವ ಮಾತುಗಳನ್ನು ಆಲೈಸಿ ಕೇಳುತ್ತ ಬರುತ್ತಿದ್ದಾಳೆ. ನಾಯಿ ಉತ್ಸಾಹದಲ್ಲಿ ಯಜಮಾನನ್ನು ದಿಟ್ಟಿಸಿ ನೋಡು ದೆ. ರಾಮ ಬರಿಯ ಕೌಪೀನ ಧರಿಸಿದ್ದಾನೆ. ಅವನ ದಷ್ಟ, ಪುಷ್ಟ ಮೈಯ ಶಕ್ತಿಯನ್ನು ಒಂದೆರಡು ಸರಳರೇಖೆಗಳಲ್ಲಿ ಚಿತ್ರಗಾರರು ಕಾಣಿಸಿದ್ದಾರೆ. “ ಹಳ್ಳಿ ಯ ಬಾಳು' ಚಿತ್ರದಲ್ಲಿ ಚಿ ಶ್ರೀ ಶ್ರೀ ಶ್ರೀ ಹೆಚ್ಚು ಸೂಕ್ಷತೆಯನ್ನು ಕಾಣಿಸಿದ್ದಾರೆ. ಹಿಂಬದಿಯ ಮರಗಳು, ಗುಡಿಸಲುಗಳ ಹೊಂದಿಕೆ, ಮುಂದೆ ಪ್ರಧಾನವಾಗಿ ಕಾಣು ರುವ ಮಂಟಪದ ಬಗೆಯ ಗುಡಿಸಲು ಹೆಚ್ಚು ವಿವರಗಳೊಂದಿಗೆ ಚಿತ್ರಿತವಾಗಿವೆ. ಮನೆಯ ಹಿರಿಯ ತನ್ನ ಕುರಿಮರಿಯೊಂದಿಗೆ ಅದುತ್ತ ಕುಳಿತಿದ್ದಾನೆ. ತಲೆಯ ಮೇಲೆ, ಕಂಕುಳಲ್ಲಿ ತುಂಬಿದ ಕೊಡ ಹೊತ್ತು ಬಂದ ಹಿರಿಮಗಳು ಆ ನೋಟ ನೋಡುತ್ತ ನಿಂತು ಬಿಟ್ಟಿದ್ದಾಳೆ. ಇತ್ತ ಮರದ ಪಕ್ಕದಲ್ಲಿ ಕಿರಿಮಗಳು ಕುತೂಹಲದಿಂದ ಅದೇ ನೋಟ ನೋಡುತ್ತಿದ್ದಾಳೆ. ಎಡಭಾಗದ ಒಂದು ಕೊನೆಯಲ್ಲಿ ಬೀದಿಯಲ್ಲಿ ಹೋಗುವಾತ ಅತ್ತ ದೃಷ್ಟಿ, ಚೆಲ್ಲಿದ್ದಾನೆ. ಚಿತ್ರಗಾರರು ಮೊದಲು ನಮ್ಮ ನೋಟ ಕುರಿಮರಿಯ ಮೇಲೆ ನೆಡುವಂತೆ ಮಾಡಿ ಅನಂತರ ನೋಟ ಸುತ್ತ ಬೀರುವಂತೆ ಹವಣಿಸಿದ್ದಾರೆ. ಮಧುರ ಭಾವನೆ ಹಾಗೂ ಸರಳ ಜೀವನದ ಪ್ರತೀಕವೆಂಬಂತಿದೆ ಈ ಚಿತ್ರ.