ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೨ ಕರ್ನಾಟಕದ ಕಲಾವಿದರು ನಾಟಕಕಲೆಯ ಬಗ್ಗೆ ಮಾತನಾಡುತ್ತ ಕುಳಿತೆವು. ಸಿದ್ದರಾಮಪ್ಪನವರ ಪರಿಚಯ ನನಗೆ ಬೆಂಗಳೂರಿನಲ್ಲಿ ರಂಗಮಂದಿರದಮೇಲೆ ಆಗಿತ್ತು, ಅವರು ವಿಶ್ವ ರಂಜನ ನಾಟಕ ಮಂಡಳಿಯ ನಟರಾಗಿ ಬೆಂಗಳೂರಿಗೆ ಬಂದಿದ್ದಾಗ ; ಆದರೆ ವ್ಯಕ್ತಿ ಪರಿಚಯವಾದುದು ಧಾರವಾಡದಲ್ಲಿ. ಅವರ ಪರಿಚಯವಾಗುವುದೇ ತಡ, ಅದು ಸ್ನೇಹವಾಗಿ ಪರಿಣಮಿಸಿತು. ವಿಶಾಲವಾದ ಮುಖ, ತೀಕ್ಷವಾದ ಕಣ್ಣುಗಳು, ಸದಾ ಸ್ಮಿತವದನ, ಹಿತವಾದ ಮಿತವಾದ ಮಾತುಗಾರಿಕೆ ಅವರನ್ನು ನಿರ್ದೇಶಿಸುತ್ತಿದ್ದವು. ಕಂಡ ಕೂಡಲೆ ಒಲವನ್ನು ಹುಟ್ಟಿಸುತ್ತಿದ್ದ ಸೌಜನ್ಯ, ತನ್ನ ಹಿರಿಮೆಯನ್ನು ತಾನೇ ಕಾಣದ ನಿರಹಂಭಾವ. ಸಿದ್ದರಾಮಪ್ಪನವರು ವಿಜಾಪುರ ಜಿಲ್ಲೆಯ ಹಂದಿಗನೂರ ಹಳ್ಳಿಯಲ್ಲಿ ಹುಟ್ಟಿದರು. ಹಳ್ಳಿಯ ಶಾಲೆಯಲ್ಲಿ ಕನ್ನಡ ಮೂರನೆಯ ತರಗತಿಯವರೆಗೆ ಅಭ್ಯಾಸ ಸಾ ಗಿ ತು. ಚಿಕ್ಕ ವಯಸ್ಸಿನಲ್ಲಿಯೇ ತಾಯಿ ತಂದೆಗಳಿಬ್ಬರೂ ತೀರಿ ಕೊಂ ಡ ದ ರಿಂ ದ ಇವರು ಬಹಳ ತೊಂದರೆಗೀಡಾಗಬೇಕಾಯಿತು. ಹತ್ತನೆಯ ವಯಸ್ಸಿನಲ್ಲಿಯೇ ವಿಜಾಪುರ ಜಿಲ್ಲೆಯ ತಾಂಬೆ ಎಂಬ ಹಳ್ಳಿಯಲ್ಲಿ ಸ್ಥಾಪಿತವಾಗಿದ್ದ ನಾಟಕ ಕಂಪೆನಿ ಸೇರ ಬೇಕಾಗಿ ಬಂತು. ಆ ಕಂಪೆನಿ ಒಂದೇ ಒಂದು ನಾಟಕವಾಡಿ ಮುರಿದುಹೋಯಿತು. ಮುಂದೆ ಮೂರು ನಾಲ್ಕು ವರ್ಷ ಅದೇ ಹಳ್ಳಿಯಲ್ಲಿ ಹೇಗೋ ಜೀವನಮಾಡಿಕೊಂಡಿದ್ದರು. ಮುಂದೆ ಪುಟಗಿ ಮಹಾರಾಜರ ಕಂಪೆನಿ ಸೇರಿದರು. ಹದಿನೆಂಟನೆಯ ವಯಸ್ಸಿನವರೆಗೆ ಸಂಬಳದ ಮುಖ ಕಾಣಲಿಲ್ಲ. ಮುಂದೆ ಮೈಸಗಿ ಕಂಪೆನಿಯಲ್ಲಿ ೧೭ ರೂ ಸಂಬಳಕ್ಕೆ ಸೇರಿಕೊಂಡರು. ಇದುವರೆಗೆ ಈ ಕಂಪೆನಿಗಳಲ್ಲೆಲ್ಲಾ ಸಿದ್ದರಾಮಪ್ಪ ನವರು ಸ್ತ್ರೀ ಪಾತ್ರಗಳನ್ನೇ ಧರಿಸುತ್ತಿದ್ದರು. ಮೊಗಲಾಯಿ ಕಂಪೆನಿಯೊಂದ ರಲ್ಲಿ ಎರಡಣೆ ಪಾಲಿನ ಕರಾರಿನ ಮೇಲೆ ದುಡಿದರು. ಈ ಕಂಪನಿಯ ಆರೇ ತಿಂಗಳಲ್ಲಿ ಮುರಿದುಹೋಯಿತು. ಹಂದಿಗನೂರಿಗೆ ಹಿಂದಿರುಗಿ ಬಂದು ಅಲ್ಲಿನ ಅಮೆಚೂರ್ಸ್ ಕಂಪೆನಿಯಲ್ಲಿ ಮೂರು ವರ್ಷ ಕೆಲಸಮಾಡಿದರು. ಇಲ್ಲಿಂದ ವಂದೆ ಪುರುಷ ಪಾತ್ರಗಳನ್ನು ಧರಿಸಲಾರಂಭಿಸಿದರು. ಈ ವೇಳೆಗೆ ಗುಳೇದಗುಡ್ಡದ ಗಂಗೂಬಾಯಿ ಸ್ವಂತ ಕಂಪನಿ ಮಾಡಿದ್ದರು. ಅವರ ಕಂಪನಿಗೆ ಪ್ರಧಾನ ನಟರಾಗಿ ತಿಂಗಳಿಗೆ ೨೨ ರೂಪಾಯಿ ಸಂಬಳದ ಮೇಲೆ