ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವರನಟ ಹಂದಿಗನೂರ ಸಿದ್ದ ರಾಮಪ್ಪ ರುದ್ರ ಪಾತ್ರಗಳಲ್ಲಿ ನಿಷ್ಣಾತನಾದ ಕಲಾವಿದ ಸೌಮ್ಯ ಪಾತ್ರ ಗಳ ನ್ನು ಯಶಸ್ವಿಯಾಗಿ ನಿರ್ವಹಿಸುವುದು ಅಚ್ಚರಿ. ಸಿದ್ದರಾಮಪ್ಪನವರ ಕಲಾದೀಧಿತಿಗೆ ರುದ್ರ ಸೌಮ್ಯಗಳೆರಡೂ ಒಂದೇ. “ಅಕ್ಷಯಾಂಬರ' ದ ಕೃಷ್ಣ ಅರವಿಂದರ ಪೂರ್ಣಯೋಗವನ್ನು ಉಪದೇಶಿಸುವ ಪ್ರಾಣಿ-ಆದರೆ ಅವನ ಕೆಲಸ ಕಾರ್ಯವೆಲ್ಲಾ ರಾಜಕಾರಣಪಟುವಿನ ಕುಟಿಲಸಾಮ್ರಾಜ್ಯಕ್ಕೆ ಸೇರಿದ್ದು. ಘನಘೋರ ಯುದ್ಧವನ್ನು ನಿಲ್ಲಿಸಿ ರಾಜ್ಯದಲ್ಲಿ ಶಾಂತಿ ಸ್ಥಾಪನೆಮಾಡಲು ಕೃಷ್ಣ ಕೌರವನ ಆಸ್ಥಾನಕ್ಕೆ ಹೋಗುವುದಿಲ್ಲ; ಆ ಸೋಗು ಹಾಕಿ ಯುದ್ಧವನ್ನೇ ಸಾಧಿಸುತ್ತಾನೆ. ಪಾತ್ರರಚನೆಯ ಈ ಗೊಂದಲದಲ್ಲಿಯೂ ಸಿದ್ದರಾಮಪ್ಪನವರು ಕೃಷ್ಣನಿಗೆ ಒಂದು ವೈಶಿಷ್ಟ್ಯವನ್ನು ಕಲ್ಪಿಸುತ್ತಿದ್ದರು. ಅವನು ಆಡುತ್ತಿದ್ದ ಮಾತುಗಳು ಒಬ್ಬ ಮಹಾ ಪುರುಷನ ಅಂತರಂಗವನ್ನು ಹೊರಸೂಸು. ದ ವು. * ಆದರೆ ಸಿದ್ದರಾಮಪ್ಪನವರ ಕಲಾಪ್ರತಿಭೆಯ ಹೊನ್ನಗಳಶವೆಂದರೆ ಅವರ " ಭೀಷ್ಮ' ಪಾತ್ರ. ಭೀಷ್ಮೆ, ಕುರುಕುಲ ಪಿತಾಮದ, ಪ್ರಚಂಡ ವೀರ, ರಾಷ್ಟ್ರ ಕಲ್ಯಾಣವನ್ನು ಬಯಸುತ್ತಿದ್ದ ದೇಶಾಭಿಮಾನಿ. ಯುದ್ದದ ಹಿಂದಣ ರಾತ್ರಿ ಭೀಷ್ಮ ಏಕಾಂಗಿಯಾಗಿ ತನ್ನ ಶಯ್ಯಾಗ್ರಹದಲ್ಲಿದ್ದಾನೆ. ಅವನ ಮನಸ್ಸನ್ನು ಚಿಂತೆ ಕದಡಿಬಿಟ್ಟಿದೆ. ಸ್ಪಿ ತ ಪ್ರ " ನಾ ದ ಭೀಷ್ಮನೂ ಅರನಾಗಿದ್ದಾನೆ. ಪಾಂಡವರನ್ನು ಸಾಕಿದ ಜೀವ ಅದು. ಈಗ ಕೌರವರ ಕಡೆ ನಿಂತು ಪಾಂಡವರ ಮೇಲೆ ಶರಸಂಧಾನ ಮಾಡಬೇಕಾಗಿದೆ. ಕೌರವರ ಧೋರಣೆ ಅಕ್ರಮವಾದುದೆಂದು ಭೀಷ್ಮ ಬಲ್ಲ; ಅಂತಿಮವಿಜಯ ಭಗವಂತನ ಸಾರಥ್ಯದಲ್ಲಿದ್ದ ಪಾಂಡವರಿಗೇ ಎಂಬುದನ್ನೂ ಚೆನ್ನಾಗಿ ಬಲ್ಲ. ಆದರೆ ಭೀಷ್ಮ ಕರ್ತವ್ಯಚ್ಯುತನಾಗಲಾರ. ಅವನು ಕೌರವರ ಪ್ರಜೆ. ಅವರ ಪಕ್ಷದಲ್ಲಿ ನಿಂತು ಹೋರಾಡಬೇಕಾದುದು ಅನನ ಕರ್ತವ್ಯ, ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಇಂಥ ವಿಚಿತ್ರ ಪರಿಸ್ಥಿತಿಯಲ್ಲಿ ಅವನ ಮನಸ್ಸು ತೂಗುಯ್ಯಾಲೆಯ ಆಂದೋಲನಕ್ಕೆ ಸಿಕ್ಕಿಕೊಂಡಿದೆ. ಮಹಾವೀರನ ಕಣ್ಣು ಗಳಲ್ಲಿ ನೀರು, ಅವನ ಅಂತಃಕರಣ ಕಲಕಿಹೋಗಿದೆ, ಆದರೆ ಭೀಷ್ಮನಿರ್ಧಾರ ವನ್ನು ಅಲುಗಾಡಿಸಬಲ್ಲವರು ಯಾರು ? ಭೀಷ್ಮನ ಒಳತೋಟಿಯನ್ನು ಸಿದ್ದರಾಮಪ್ಪನವರು ಬಹಳ ಮಾರ್ಮಿಕವಾಗಿ ಚಿತ್ರಿಸುತ್ತಿದ್ದರು. ಅವನ ವಯೋಗುಣವನ್ನು ತಮ್ಮ ಮಾತು, ಅಭಿನಯಗಳಿಂದ ಬಹಳ ಸ್ಪಷ್ಟವಾಗಿ