ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೦ ಕರ್ನಾಟಕದ ಕಲಾವಿದರು ನಿರ್ದೆಶಿಸುತ್ತವೆ. ಮಾಳವ, ಗೌಡ, ಕರ್ನಾಟ, ಕಾಂಭೋಜ ಮೊದಲಾದ ರಾಗಗಳು ದೇಶಗಳನ್ನೂ, ವಸಂತ, ಮೇಘ, ಶ್ರೀ, ಮಲ್ದಾರ ರಾಗಗಳು ಪ್ರಕೃತಿಯನ್ನೂ ಅ ನು ಸ ರಿ ಸಿ ವೆ. ಮಾಳವಕೌಶಿಕಾ (ಮಾಲಕಂಸ), ಪಟಮಂಜರಿ, ಭೂಪಾಳಿ, ಮೋಹನ, ತೋಡಿ ರ ಸ ಭಾ ವ ಗ ಳ ನ್ನು ಪ್ರತಿಬಿಂಬಿಸುತ್ತವೆ. ಒಂದು ರಾಗ ಚಿತ್ರಗಾರನ ಮನಸ್ಸಿನಮೇಲೆ ಮೂಡುವ ಪರಿಣಾಮದ ಅನುಭವಕ್ಕೆ ಒಂದು ಮೂರ್ತಸ್ವರೂಪವನ್ನು ಅವನು ಕೊಡಲೆತ್ನಿಸುವುದೇ ರಾಗಮಾಲೆಯ ಉದ್ದೇಶ. ಒಂದೇ ರಾಗ ಬೇರೆ ಬೇರೆ ಚಿತ್ರಗಾರರ ಮೇಲೆ ಬೇರೆ ಬೇರೆ ಪರಿಣಾಮವನ್ನುಂಟುಮಾಡಬಹುದು. ಅಂಥ ಸನ್ನಿವೇಶಗಳಲ್ಲಿ ಒಂದೇ ರಾಗದ ಹೆಸರಿನಲ್ಲಿ ವಿವಿಧ ಕಲ್ಪನೆಗಳು ಬಂದಿರುವುದನ್ನೂ ನಾವು ನೋಡಬಹುದು. (ಉದಾಹರಣೆ: ಲಲಿತ, ದೀಪಕ, ಖಂಬಾವತಿ, ಹಿಂದೋಳ ಇತ್ಯಾದಿ.) ಮಿಣಜಿಗಿಯವರು ರಾಗಭಾವಗಳನ್ನು ಏ ವ ರಿ ಸು ವ ಶಾಸ್ತ್ರಾಧಾರ, ರಜಪೂತ ಸಂಪ್ರದಾಯದವರು ರಚಿಸಿದ 'ರಾಗಮಾಲ' ಚಿ ತ ಗ ಳ ಹಿನ್ನೆಲೆಯನ್ನಿಟ್ಟು ಕೊಂಡು ತಮ್ಮ ಸ್ಫೂರ್ತಿಯನ್ನನುಸರಿಸಿ ಇದುವರೆಗೆ ಕೆಲವು ರಾಗಗಳನ್ನು ಚಿತ್ರಿಸಿದ್ದಾರೆ. ಅವುಗಳಲ್ಲಿ ಅವರ ಮಾಲಕಂಸ, ತೋಡಿ, ಮೇಘಮಲ್ಲಾರ, ಪಟಮಂಜರಿ, ಗುರ್ಜರಿ, ಜೋಗಿಯಾ ಆಸಾವೇರಿ, ಸೂರತ್ ಮುಖ್ಯವಾದುವು. (೧) ಮಾಲಕಂಸ : ಈ ರಾಗದ ಮ ಲ ಹೆ ಸ ರು ಮಾಳವ ಕೌಶಿಕಾ, ಹದಿನೆಂಟನೆಯ ಶತಮಾನದ ಗಂಗಾಧರನೆಂಬ ಲಾಕ್ಷಣಿಕ ಈ ರಾಗವನ್ನು ಹೀಗೆ ವರ್ಣಿಸುತ್ತಾನೆ. ' ಮಾಲಕೌಸ ರಾಗ ಧರಿಸಿರುವುದು ನೀಲವಸ್ಯ, ಅವನ ಕೈಯಲ್ಲಿ ಬಿಳಿಯ ಕೋಲಿದೆ. ಭುಜದಮೇಲೆ ರತ್ನಹಾರ 'ಧ ರಿ ಸಿ ದ್ದಾ ನೆ. ಅವನ ಸುತ್ತಮುತ್ತ ಸು೦ ದ ರಿ ಯ ರ ಬಳಗವಿದೆ. ನೀಲವಸ್ತ್ರಧಾರಿಯಾಗಿ ಸುಂದರನಾಗಿರುವ ಕೌಶಕ (?) ರಾಜಕುಮಾರ ಸಾತ್ವಿಕ ಪ್ರೇಮದ ಮೂರ್ತಿಯಾಗಿದ್ದಾನೆ. ಸ್ತ್ರೀಯರ ಹೃದಯಗಳನ್ನು ಗೆದ್ದು ತನ್ನ ಸೌಂದರ್ಯದಿಂದ ಅವರನ್ನು ಆಕರ್ಷಿಸುತ್ತಾನೆ. ಉಷಃಕಾಲಕ್ಕೆ ಎದ್ದು ಅವನು ಪೀಠಸ್ಥನಾಗುತ್ತಾನೆ. ವೀರಪ್ರಣಯಿಯಾದ ಅವನು ತನ್ನ ಪ್ರೇಮ