ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨q೨ ಕರ್ನಾಟಕದ ಕಲಾವಿದರು ನಲ್ಲನಿಗಾಗಿ ಕಾದು ಕಾದು ಬೇಸತ್ತಿದ್ದಾಳೆ, ಘೋರ ವರ್ಷವಾರಂಭವಾಗಲಿದೆ. ಮನೆಬಿಟ್ಟು ನಲ್ಲನನ್ನರಸುತ್ತ ಹೊರಟುಬಿಟ್ಟಿದ್ದಾಳೆ. ಸಖಿ ಅವಳ ತೋಳು ಹಿಡಿದು 'ಹೋಗಬೇಡ' ಎಂದು ಒಳಗೆ ಜಗ್ಗುತ್ತಿದ್ದಾಳೆ. (೪) ತೋಡಿ: ರಾಗಮಾಲೆಯಲ್ಲಿ ತೋಡಿಗೆ ಇರುವ ಸ್ಥಾನ ಬೇರೆ ಯಾವ ರಾಗಕ್ಕೂ ಇಲ್ಲವೆನ್ನಬಹುದು. ರಜಪೂತ ಸಂಪ್ರದಾಯದಲ್ಲಿ ತೋಡಿಯ ಹತ್ತಾರು ಚಿತ್ರಗಳು ದೊರೆಯುತ್ತವೆ. ಮಾಲಕಂಸನ ಪ್ರಿಯಳಾದ ತೋಡಿ ರಾಗಿಣಿ ಸೀತವರ್ಣಳಾಗಿದ್ದಾಳೆ. ಕೇಸರಿ, ಪಚ್ಚ ಕರ್ಪೂರ ಅವಳ ದೇಹವನ್ನು ಅಲಂಕರಿಸಿದೆ. ಅವಳು ಧರಿಸಿರುವುದು ಶುದ್ಧ ಶ್ವೇತಾಂಬರ, ಸೀನಪಯೋಧರೆ, ಕೃಶಾಂಗಿ, ಆಳವಾದ ನಾಭಿಪ್ರದೇಶ, ಮೇಘರಾತಿಯೇ ಅವಳ ತಲೆಗೂದಲು, ಹರಿಣನೇತ್ರೆ, ಅವಳ ಹಲ್ಲುಗಳು ಮುತ್ತಿನಮಾಲೆಯಂತಿವೆ. ಅಮೂಲ್ಯ ರತ್ನ ಗಳಿಂದ ಅಲಂಕೃತವಾದ ವಸ್ತ್ರ ಧರಿಸಿದ್ದಾಳೆ. ಹುಲ್ಲುಗದ್ದೆಯ ಮೇಲೆ ಪವಡಿಸಿ ವೀಣೆ ನುಡಿಸುತ್ತಿದ್ದಾಳೆ. ಅವಳ ಸಂ ಗೀ ತ ಸೌ ರ ಭ ಕ್ಕೆ ಮೃಗಪಕ್ಷಿಗಳು ಮಾರುಹೋಗಿವೆ. ಅವಳ ಸಂಗೀತದಲ್ಲಿ ತಲ್ಲೀ ನ ಗೊಂ ಡ ಜಿಂಕೆಗಳು ನಿರ್ಭಯವಾಗಿ ಅವಳ ಬಳಿ ನರ್ತಿಸುತ್ತಿವೆ. ಈ ರಾಗದ ಬಗ್ಗೆ ಲಾಕ್ಷಣಿಕರಲ್ಲಿ ಭಿನ್ನಾಭಿಪ್ರಾಯವಿಲ್ಲ. ಮಿಣಜಿಯವರ ಚಿತ್ರದಲ್ಲಿ ತೋ ಡಿ ರಾ ಗಿ ಣಿ ಮಹತಿವೀಣೆಯನ್ನು ಹಿಡಿದಿದ್ದಾಳೆ. ಒಂದು ಜಿಂಕೆಗೆ ಅವಳು ಎಳೆ ಗರಿಕೆ ನೀಡುತ್ತಿದ್ದಾಳೆ. ರಾಗಿಣಿಯ ಚಿತ್ತಸ್ವಾಸ್ಥ್ಯ, ಅಮಿತಾನಂದ, ನಿಸರ್ಗಮೈತ್ರಿ ಮಿಣಜಿಗಿಯವರ ಚಿತ್ರದಲ್ಲಿ ಮೂರ್ತಿ ಭವಿಸಿವೆ. (೫) ಜೋಗಿಯಾ ಅಸಾವೇರಿ : ಕೋಟೆಯ ಹೊರವಲಯದಲ್ಲಿ ಗಂಧದ ಮರದ ಕೆಳಗೆ ಒಬ್ಬ ಜೋಗಿಣಿ ಕುಳಿತು ಪುಂಗಿನುಡಿಸುತ್ತಿದ್ದಾಳೆ. ಅವಳ ಸುತ್ತ ನೀರು ಹರಿಯುತ್ತಿದೆ. ಅವಳ ದೇಹವಿನ್ಯಾಸ ಸುಂದರವಾಗಿದೆ. ಕಿತ್ತಳೆ ವರ್ಣದ ಸೀರೆ ಧರಿಸಿದ್ದಾಳೆ. ನುಡಿಯನ್ನು ಜಟೆಯಂತೆ ಮೇಲಕ್ಕೆ ಕಟ್ಟಿದ್ದಾಳೆ. ಅವಳ ಪುಂಗಿಯ ನಾದಕ್ಕೆ ಸರ್ಪಗಳು, ನವಿಲುಗಳು ಆಕರ್ಷಿತವಾಗಿವೆ.5 ಮಿಣಜಿಗಿಯವರ ಚಿತ್ರ ಲಾಕ್ಷಣಿಕರ ವರ್ಣನೆಯನ್ನೆ 4 Ragas and Raginis: 0. C. Gangoly (P. 1+7) 5 Sangit of India : Atiya Begum (P. 62)