ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Sol ಕರ್ನಾಟಕದ ಕಲಾವಿದರು ಹಾಡುಗಬ್ಬಗಳನ್ನು ಬರೆದಿರುವುದಲ್ಲದೆ, ಸಂಗೀತಶಾಸ್ತ್ರವನ್ನು ತನ್ನ 'ವಿವೇಕ ಚಿಂತಾಮಣಿ'ಯಲ್ಲಿ ಚರ್ಚಿಸಿದ್ದಾನೆ. ಬಸವಣ್ಣನಿಗಿಂತ ಪೂರ್ವದಲ್ಲಿ ಕನ್ನಡ ನಾಡಿನಲ್ಲಿ ಸ್ವತಂತ್ರ ಸಂಗೀತ ಸಂಪ್ರದಾಯವಿತ್ತೆಂದೂ, ಕನ್ನಡ ಜನ ಕನ್ನಡ ಭಾಷೆಯ ಹಾಡುಗಳನ್ನು ಹಾಡುತ್ತಿದ್ದರೆಂದೂ ನಾವು ಧೈರ್ಯವಾಗಿ ಹೇಳಬಹುದು. ಅನುಭವಮಂಟಪ ಸಂಗೀತವಿಹೀನವಾದ ಶುಷ್ಕ ಸಾಹಿತ್ಯ ಮಂಟಪವಾಗಿತ್ತೆಂದು ಹೇಳಲು ಸಾಧ್ಯವಿಲ್ಲ. ಪ್ರಾರ್ಥನಾಪ್ರಿಯನಾದ ಬಸವಣ್ಣ ಸಂಗೀತದಲ್ಲಿಯೂ ಪರಿಶ್ರಮಪಡೆದಿದ್ದ ಎಂದು ಭಾವಿಸುವುದು ತಪ್ಪಾಗಲಾರದು.

  • ನಮ್ಮ ಜನ ವಚನಸಾಹಿತ್ಯವನ್ನು ಕಾಯ್ದುಕೊಂಡಂತೆ ಅವುಗಳನ್ನು ಹಾಡುತ್ತಿದ್ದ ರೀತಿಯನ್ನು ಕಾಯ್ದುಕೊಳ್ಳಲಿಲ್ಲ. ಇದಕ್ಕೆ ಕಾರಣ ಬಸವಣ್ಣನ ಕಾಲದಲ್ಲಿಯೇ ಆದ ರಾಜ್ಯ ಕ್ರಾಂತಿ ಕಾಲಕಾಲಕ್ಕೆ ಕನ್ನಡನಾಡು ಕ್ರಾಂತಿ ಗೀಡಾಗಿ ತನ್ನ ಕಲಾಪ್ರಕಾರಗಳನ್ನು ಕಾಯ್ದುಕೊಳ್ಳಲು, ಉಳಿಸಿಕೊಳ್ಳಲು ಅಸಮರ್ಥವಾಯಿತು.

ನಮ್ಮ ಕೈಗೆ ದೊರೆತಿರುವ ದಾಸಸಾಹಿತ್ಯ ರಾಗ, ತಾಳಯುಕ್ತವಾಗಿರು ವುದರಿಂದ ವಚನ ಸಾಹಿತ್ಯವನ್ನು ರಾಗ, ತಾಳಯುಕ್ತವಾಗಿ ಉಪಯೋಗಿಸು ತಿರಲಿಲ್ಲವೆಂದು ಭಾವಿಸುವುದು ತಪ್ಪಾದೀತು. ಪ್ರಾಚೀನ ಶಾಸ್ತ್ರಗಳನೇಕದರ ತಂತ್ರಜ್ಞಾನ ನಮಗೆ ದೊರೆತಿಲ್ಲವೆಂದು, ಅವು ಸಶಾಸ್ತ್ರೀಯವಾಗಿಲ್ಲವೆಂದು ಭಾವಿಸುವುದು ತರ್ಕವಿರುದ್ಧವಾಗುತ್ತದೆ, ವಚನಸಾಹಿತ್ಯ, ಉದ್ಯೋಧ ಸಾಹಿತ್ಯ ; ಅದು ಎಲ್ಲ ಕಡೆ ಗೂ ಪ್ರಸಾರವಾಗಬೇಕೆಂಬ ಪ್ರಸ್ಥಾನವನ್ನೊಪ್ಪಿಕೊಂಡರೆ, ಆ ಸಾಹಿತ್ಯವನ್ನು ಪ್ರಸಾರ ಮಾಡುವ ಬಗೆಯಂತು ಎಂದು ವಿಚಾರಮಾಡಬೇಕು. ಆ ಸಾಹಿತ್ಯದ ಬಗ್ಗೆ ಅಭಿಮಾನವಿಲ್ಲದವರು ಅದರ ಬಗ್ಗೆ ಮಾತನಾಡುವ ಔದ್ಧತ್ಯ ತೋರಬಾರದು. ವಚನಸಾಹಿತ್ಯ ಮಾನವ ಸಾಹಿತ್ಯ. ಅದು ಅನುಭವಪೂರ್ಣವಾಗಿದೆ. ಲೋಕಕ್ಕೆ ಶಾಂತಿ, ಕಾಂತಿಯನ್ನು ನೀಡಬಲ್ಲುದೆಂದು ನನ್ನ ದೃಢನಂಬಿಕೆ) ಅದರ ಪ್ರಚಾರ ಹಲವು ದೃಷ್ಟಿಯಲ್ಲಿ, ಹಲವು ಬಗೆಯಲ್ಲಿ ಆಗಬೇಕೆಂದು ನನ್ನ ಆಶಯ. ವಚನಸಾಹಿತ್ಯ ಪ್ರಸಾರಮಾಡುವುದಕ್ಕೆ ಲೇಖನ, ಭಾಷಣಗಳು ಸಹಕಾರಿಯಾಗುವಂತೆ ಸಂಗೀತವೂ ಸಹಕಾರಿಯಾಗುತ್ತದೆ.