ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಕ್ಷಿಣೋತ್ತರ ಸಂಗೀತ ಸಮನ್ವಯ ೨೨೧ ಶುದ್ಧ ಸಾವೇರಿ ; ಭೈರವ, ಮಾಯಾಮಾಳವಗೌಳ : ಮಾಲಕಂ ಹಿಂದೋಳ. ಪರಂಪರಾಗತವಾಗಿ ಬಂದ ಕೆಲವು ರಾಗಗಳು ದಕ್ಷಿಣ ಸಂಪ್ರದಾಯದಲ್ಲಿ ಉಳಿದುಕೊಂಡು ಉತ್ತರ ಸಂಪ್ರದಾಯದಲ್ಲಿ ಇಲ್ಲ ನಾ ಗಿ ವೆ; ಹಾಗೆಯೇ ಉತ್ತರದಲ್ಲಿ ಕೆಲವು ಉಳಿದುಕೊಂಡು ದಕ್ಷಿಣದಲ್ಲಿ ಇಲ್ಲವಾಗಿವೆ. ಉತ್ತರದಲ್ಲಿ ವಿಶಿಷ್ಟವಾಗಿ ಬೆಳೆದ ಕೆಲವು ರಾಗಗಳನ್ನು ದಕ್ಷಿಣದವರೂ, ದಕ್ಷಿಣದಲ್ಲಿ ವಿಶಿಷ್ಟವಾಗಿ ಬೆಳೆದ ಕೆಲವು ರಾಗಗಳನ್ನು ಉತ್ತರದವರೂ ಧಾರಾಳವಾಗಿ ಬಳಸಿಕೊಂಡಿದ್ದಾರೆ. ಉತ್ತರ ದಕ್ಷಿಣ ಸಂಪ್ರದಾಯಗಳನ್ನು ಸಮರಸಮಾಡುವ ಪ್ರಯತ್ನವನ್ನು ಆಗಿಂದಾಗ್ಗೆ ವಿಶಾಲಹೃದಯಿಗಳಾದ ರಾಜರೂ, ಕಲಾವಿದರೂ ಮಾಡಿರುವ ರ್ಪಸರಣೆಗಳು ನಮಗೆ ದೊರಕುತ್ತವೆ. ಕಾಲಕ್ಕೆ ಹೊಂದಿಕೊಳ್ಳುವ ರಾಗಗಳನ್ನು ಹಾಡುವ | ದಕ್ಷಿಣಾದಿಯಲ್ಲಿ ಹಿಂದೆ ಇದ್ದಿತು. ಆದರೆ ಈಚೆಗೆ ಕಾಲಪರಿಸ್ಥಿತಿಯನ್ನನುಸರಿಸಿ ಮಾರ್ಪಾಡುಹೊಂದಿದೆ. ಉತ್ತರ ದಕ್ಷಿಣಾದಿ ಸಂಪ್ರದಾಯಗಳು ಸರ್ವೋತ್ತಮವೆಂದು ಮನ್ನಿಸುವ ಅಂಶಗಳು ಒಂದೇ ಆಗಿ\"ವುದೂ ವ್ಯಕ್ತವಾಗುತ್ತದೆ. ಶ್ರುತಿಶುದ್ದಿ, ಸಾಹಿತ್ಯ ಲಕ್ಷ, ವಿಲಂಬಕಾಲದ ಹಾಡುಗಾರಿಕೆ, ತಾಳದ ಅಚ್ಚು ಗಟ್ಟುಗಳನ್ನು ಉಭಯ ಸಂಪ್ರದಾಯದಸರೂ ಗೌರವಿಸುತ್ತಾರೆ. ಉತ್ತರ, ದಕ್ಷಿಣ ಸಂಗೀತ ಸಂಪ್ರದಾಯಗಳು ಎರಡು ಬೇರೆ ಬೇರೆ ಸಂಪ್ರದಾಯಗಳಾಗಿ ಬೆಳೆದುನಿಂತಿದ್ದರೂ ಅವು ಒಂದೇ ವೃಕ್ಷದ ಎರಡು ರೆಂಬೆಗಳೆಂಬುದನ್ನು ನಾವು ಮರೆಯಬಾರದು. ಭಾರತೀಯ ಸಂಪ್ರದಾಯದ ಈ ಉಭಯ ಪ್ರಕಾರಗಳಲ್ಲಿ ನಾವು ಭಾರತೀಯ ಜೀವನ, ಇತಿಹಾಸ, ಸಂಸ್ಕೃತಿಯ ಎರಕವನ್ನು ಕಾಣುತ್ತೇವೆ. ಅವುಗಳ ಹೊರಗಣ ಆಕಾರ ಬೇರೆಯಾದರೂ ಅಂತರಂಗ ಒಂದೇ. ಅವುಗಳ ಹಿಂದಣ ಪ್ರೇರಕ ಶಕ್ತಿ ಒಂದೇ ಆಗಿವೆ. ಅಖಂಡ ಭಾರತ ಸಂಸ್ಕೃತಿಯ ಸಂವರ್ಧನದ ಆವಶ್ಯಕತೆಯನ್ನು ಕಂಡುಕೊಂಡಿರುವ ನಾವು ಸಂಗೀತದ ಮಹಾಶಕ್ತಿಯನ್ನು ಮರೆಯಬಾರದು. ಉಭಯ ಸಂಪ್ರದಾಯದಲ್ಲಿ ಹೆಚ್ಚಿನ ಬಳಕೆ ಬೆಳೆದು, ಹೆಚ್ಚಿನ ವಿಚಾರ