ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೌಂದರ್ಯೋಪಾಸಕ ಮಿಣ ಜಿಗಿ - SK 1.1 .7

- - -

- - - - 9 9ತ್ರಗಾರ ಶಿಷ್ಯ ' ನ್ಯಾಷನಲ್ ಗ್ಯಾಲರಿ 'ಯಲ್ಲಿ ಎರಡು ವಿಲಾಯಿತಿ ಚಿತ್ರಗಳ ಪ್ರತಿಚಿತ್ರ ತೆಗೆದು ಗುರುಗಳಾದ ಸರ್ ವಿಲಿಯಂ ರಾಥೆನ್ಸ್ಟೀನ್ ಅವರಿಗೆ ತೋರಿಸಿದ. ಅವುಗಳನ್ನು ನೋಡಿದ ಗುರುಗಳು * ಚಾಕೊಲೆಟ್ ಪೆಟ್ಟಿಗೆಯ ಮೇಲಣ ಚಿತ್ರಗಳನ್ನು ಪ್ರತಿ ತೆಗೆಯಬೇಡ. ಸ್ವತಂತ್ರವಾಗಿ ಚಿತ್ರಗಳನ್ನು ರಚಿಸಿ, ಭಾರತಕ್ಕೆ ಇಲ್ಲಿಂದ ಉತ್ತಮ ಕಲೆ * ಯನ್ನು ತೆಗೆದುಕೊಂಡು ಹೋಗು' ಎಂದು ಉಪದೇಶಿಸಿದರು. ಶಿಷ್ಯ ಗುರೂಪದೇಶವನ್ನು ಅಕ್ಷರಶಃ ಪಾಲಿಸಿ ತನ್ನ ಸ್ವತಂತ್ರ ಕಲಾ ಸಂಪ್ರದಾಯ ನನ್ನೆ ಬೆಳಸಿದ. ಭಾರತದ ಉತ್ಕಟ ಅಭಿಮಾನಿಗಳಾದ ಸರ್ ವಿಲಿಯಂ ಅವರು `ಭಾರತೀಯ ಕಲಾವಿದನಿಗೆ ಸ್ವಸ್ವರೂಪಜ್ಞಾನವನ್ನುಂಟುಮಾಡಿಕೊಡದಿದ್ದರೆ ಅವನು ವಿಲಾಯತಿಯ ದತ್ತ ಪುತ್ರರಲ್ಲಿ ಒಬ್ಬನಾಗುತ್ತಿದ್ದ. ಭಾರತ ಸಂಸ್ಕೃತಿಗನುಗುಣವಾದ ಮಾರ್ಗವನ್ನು ಹಿಡಿದ, ಕಲೆಯ ನಿರ್ಮಲ ರೂಪವನ್ನು ಆರಾಧನೆ ಮಾಡುತ್ತಿರುವ ಶ್ರೇಷ್ಠ ಕಲಾವಿದರಲ್ಲಿ ಮಡಿವಾಳಪ್ಪ ಮಿಣಜಿಗಿಯವರೊಬ್ಬರು. ಇವರ ಕಲೆ ಎಷ್ಟು ರಸವತ್ತಾಗಿ ದೆಯೋ ಅಷ್ಟೇ ಸ್ವಾರಸ್ಯವಾಗಿದೆ ಇವರು ಕಲೆಯನ್ನನುಸರಿಸಿದ ದಾರಿ. ಎಳೆ ವಯಸ್ಸಿನ ಶಾಲಾದಿನಗಳಲ್ಲಿಯೇ ಮಿಣಜಿಯವರಲ್ಲಿ ಕಲಾಸಕ್ತಿ ಅಂಕುರಿಸಿತು. ಮನೆಯಿಂದ ಶಾಲೆಗೆ ವಿಜಾಪುರದಲ್ಲಿ ಜನಗಾರ ಗಲ್ಲಿಯಲ್ಲಿ