ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೌಂದಯ್ಯೋಪಾಸಕ ಮಿಣಜಿಗಿ ಮಿಣಜಿಗಿಯವರು ಶುದ್ದ ಭಾರತೀಯ ಸಂಪ್ರದಾಯದಲ್ಲಿ ಒಂದು ಚಿತ್ರ ರಚಿಸಿದರು. ಅದು ಸ್ವೀಕೃತವಾದುದಲ್ಲದೆ ಚಿತ್ರಗಾರರಿಗೆ ಹೆಚ್ಚಿನ ಕೀರ್ತಿ ತಂದಿತು. ಇಂಗ್ಲೆಂಡು ಮತ್ತು ಫ್ರಾನ್ಸಿನ ಕಲಾಪತ್ರಿಕೆಯಲ್ಲಿ ಅದರ ಪ್ರತಿ ಚಿತ್ರ ಪ್ರಕಟವಾಯಿತು. ಚಿತ್ರಕಲೆಯಲ್ಲಿ ಹೇಗೆ ಮಿಣಜಿಗಿಯವರಿಗೆ ಅನುರಾಗವೋ ಹಾಗೆ ಸಂಗೀತದಲ್ಲಿಯೂ ಉತ್ಕಟ ಪ್ರೇಮ, ವಿಜಾಪುರದಲ್ಲಿ ಶಾಲೆಯಲ್ಲಿ ಓದುತ್ತಿ ದಾಗ ಆಗ ವಿಶೇಷ ಪ್ರಸಾರದಲ್ಲಿದ್ದ ಮರಾಠಿ ' ಸೌಭದ್ರ, ಶಾರದಾ' ನಾಟಕ ಗಳ ಹಾಡುಗಳನ್ನು ಹಾಡುತ್ತಿದ್ದರು. ವಿಜಾಪುರದ ಕಲೆಕ್ಟರಾಗಿ ಬಂದ ಶ್ರೀ ಕಬ್ರಾಜಿಯವರ ಪತ್ನಿ ಮಿಣಜಿಗಿಯವರ ಗಾಯನವನ್ನು ಮೆಚ್ಚಿ ಅವರಿಗೆ ಕೆಲವು ಹಾಡುಗಳನ್ನೂ ರಾಷ್ಟ್ರೀಯ flತೆಗಳನ್ನೂ ಹೇಳಿಕೊಟ್ಟರು. ಬಾಲ್ಯ ದಲ್ಲಿಯೇ ಅಂಕುರವಾದ ಸಂಗೀತ ಪ್ರೇಮವನ್ನು ಮಿಣಜಿಗಿ ಬೆಳಸಿಕೊಂಡು ಬಂದಿದ್ದಾರೆ. ಅವರ ಚಿತ್ರ, ಸಂಗೀತ ಕಲಾಪ್ರೇಮ ಸಮನ್ವಯ ಅವರ ಕೃತಿಗಳಮೇಲೆ ಎಂಥ ದಿವ್ಯ ಪರಿಣಾಮವನ್ನುಂಟುಮಾಡಿತೆಂಬುದನ್ನು ನಾವು ಮುಂದೆ ಕಾಣುತ್ತೇವೆ.

  • ಮಾಸ್ಟರ್ ಆಫ್ ಆಕ್ಟ್' ಪರೀಕ್ಷೆಯಲ್ಲಿ ಜಯ ದೊರಕಿಸಿಕೊಂಡ ಮೇಲೆ ಮಿಣಜಿ ' ಡಿಪ್ಲೊಮಾ ' ತೆಗೆದುಕೊಂಡರು. ಮುಂದೆ ೧೯೨೯ರಲ್ಲಿ ಉಚ್ಚ ಶಿಕ್ಷಣಕ್ಕೆ ಇಂಗ್ಲೆಂಡಿಗೆ ತೆರಳಿ ಸೌತ್ ಕೆನ್ಸಿಂಗ್ಟನ್‌ನಲ್ಲಿದ್ದ * ರಾಯಲ್ ಕಾಲೇಜ್ ಆಫ್ ಆರ್'ನಲ್ಲಿ ಸರ್ ವಿಲಿಯಂ ರಾಥೆನ್ಸ್ಟೀನರ ಶಿಷ್ಯರಾಗಿ ನಿಂತರು. ರಾಯಲ್ ಕಾಲೇಜಿನ ಶಿಕ್ಷಣ ಮುಗಿದಮೇಲೆ ಮರಳಿ ಮಾತೃಭೂಮಿಗೆ ಬಂದು ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಮುಂಬಯಿ ಕಲಾಶಾಲೆಯ ಪ್ರಾಧ್ಯಾಪಕರಾದ ಕ್ಯಾಪ್ಟನ್ ಗ್ಲಾಡ್ ಸ್ಟನ್ ಸಾರ್ಮ ಅವರಿಗೆ ರಾಥನ್ ಸ್ಟೀನರ ಬಗ್ಗೆ ಇದ್ದ ವಿರಸದ ಪರಿಣಾಮವಾಗಿ ಕೆಲಸಕ್ಕೆ ಸೊನ್ನೆ ಬಿತ್ತು. ರಾಥೆನ್ ಸ್ಟೀನರ ಶಿಷ್ಯರಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲವೆಂದು ಸಾಲೊರ್ಮ ಶಪಥ ತೊಟ್ಟಿದ್ದರು. ಮಿಣಜಿಗಿಯವರ ಭವಿಷ್ಯ ಅಸ್ಪಷ್ಟವಾಯಿತು. " ಮುಂದೇನು ಮಾಡುವುದು' ಎಂಬ ಪ್ರಶ್ನೆ ಬೃಹದಾಕಾರ ತಳೆದು ನಿಂತಿತು. ಆದರೆ ನಿರಾಶೆ ತಮ್ಮ ಭವಿಷ್ಯವನ್ನು