ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಅಜಂತಾ ಸಂಪ್ರದಾಯದಿಂದ ನಮ್ಮ ಚಿತ್ರಕಲೆಯ ಇತಿಹಾಸ ಆರಂಭವಾಯಿತೆಂದು ಸ್ಕೂಲವಾಗಿ ಭಾವಿಸಬಹುದು. ಅದರ ಪಡಿನೆಳಲು ಬಾದಾಮಿ, ಕಮತಗಿಗಳ ಚಿತ್ರಕಲೆ, ಅಜಂತಾ ಸಂಪ್ರದಾಯದಲ್ಲಿ ಪ್ರಕೃತಿ ಸೌಂದರಕ್ಕಿಂತಲೂ, ಭಾವನಾ ವಿಲಾಸಕ್ಕೆ ಹೆಚ್ಚು ಮನ್ನಣೆ, ಅಸ್ಥಿರವೂ, ಈಷಣತ್ರಯಬದ್ಧವೂ ಆದ ದೇಹ ಶಾಶ್ವತವಲ್ಲ, ಮಹತ್ವದ್ದೂ ಅಲ್ಲ. ದೇಹ ವೊಂದು ಪಾತ್ರೆ, ಒಂದು ನೌಕೆ. ಒಂದೇ ಪಾತ್ರೆಯ ಒಳಗೆ ಹಾಲನ್ನೂ ಹಾಕುತ್ತೇವೆ, ಹೆಂಡವನ್ನೂ ಹಾಕುತ್ತೇವೆ. ಹಾಲು ತುಂಬಿದ ಪಾತ್ರೆ ಪವಿತ್ರವಾಗುತ್ತದೆ, ಹೆಂಡ ತುಂಬಿದ ಪಾತ್ರೆ ಅಪವಿತ್ರವಾಗುತ್ತದೆ. (ನಾಮಾ ಚಾರಿಗಳಿಗೆ ಈ ಮಾತು ಅನ್ವಯಿಸುವುದಿಲ್ಲ) ಪಾತ್ರೆಗಿಂತಲೂ, ಅದರ ಒಳಗಿನ ಪದಾರ್ಥಕ್ಕೆ ನಾವು ಮನ್ನಣೆ ಕೊಡುತ್ತೇನೆ. ಈ ದೃಷ್ಟಿ ಅಜಂತೆಯ ಸಂಪ್ರದಾಯದಲ್ಲಿ ಚೆನ್ನಾಗಿ ಒಡಮೂಡಿದೆ. ಬೋಧಿಸತ್ಯನ ಜೀವನ, ಬೋಧೆಗಳನ್ನು ಚಿತ್ರಿಸುವ ಅವಸರದಲ್ಲಿ ಚಿತ್ರಗಾರರ ಲಕ್ಷವೆಲ್ಲಾ ಅವನ ಹಿರಿಯ ಗುಣಗಳ ಕಡೆ ಬಿದ್ದಿದೆ. ಎಷ್ಟೋ ಚಿತ್ರಗಳಲ್ಲಿ ದೇಹಪ್ರಮಾಣ ದುರ್ಲಕ್ಷಿಸಲ್ಪಟ್ಟಿದೆ. ವರ್ಣನಿಯೋಜನೆ ಕೂಡ ಭಾವಾನುವರ್ತಿಯಾಗಿದೆ ಯಲ್ಲದೆ, ತಾರತಮ್ಯ ಸಂಮಿಶ್ರಣವನ್ನವಲಂಬಿಸಿಲ್ಲ. ಮುಂದೆ ಜನಾಂಗದ ನೋಟ ಬದಲಾಯಿಸಿದಂತೆ ಚಿತ್ರಕಲೆಯ ತಂತ್ರವೂ ಬದಲಾಯಿಸಿತು. ಹುಮಾಯೂನನ ಕಾಲಕ್ಕೇ ಇದರ ಅರುಣೋದಯವಾಯಿತು. ಅಕ್ಷರನ ಕಾಲಕ್ಕೆ ಬೇರೊಂದು ಸಂಪ್ರದಾಯ ಅಳವಟ್ಟು ಭಾರತದಲ್ಲಿ ಶಾಶ್ವತವಾಗಿ ಉಳಿಯಿತು. ಮಧ್ಯಕಾಲ ಚಿತ್ರಕಲಾ ಸಂಪ್ರದಾಯ ಎರಡು ಮುಖವಾಗಿ ಹೊರ ಓತು. ಹಿಂದೂ ಭಾವನೆ, ವಿಚಾರಗಳನ್ನೇ ಅವಲಂಬಿಸಿದ ಪಹರಿ (ಕಾಂಗ್ರಾ) ಸಂಪ್ರದಾಯ (ಇದನ್ನೇ ರಜಪೂತ ಸಂಪ್ರದಾಯವೆಂದೂ ಕರೆಯುತ್ತಾರೆ). ಮುಸ್ಲಿಮ ಭಾವನೆ ವಿಚಾರಗಳನ್ನು ಅವಲಂಬಿಸಿದ ಮುಘಲ್ ಸಂಪ್ರದಾಯ. ರಜಪೂತ ಸಂಪ್ರದಾಯದಲ್ಲಿ ಆಧ್ಯಾತ್ಮಿಕವನ್ನು ಪ್ರಾಪಂಚಿಕ ನೇತ್ರಗಳಿಂದ ನೋಡುವ ಪರಿಪಾಠ ಆರಂಭವಾಯಿತು. ಇದರ ವಸ್ತುಗಳು ಹೆಚ್ಚು ಶ್ರೀಕೃಷ್ಣನ ರಸವಿಲಾಸವನ್ನು ಕುರಿತವಾಗಿದ್ದು ವರಿಂದ ಸಪ್ರಮಾಣವೂ, ಸಂ ದರವೂ ಆದ ಮೂರ್ತಿಗಳು ಚಿತ್ರಿತವಾಗುತ್ತಿದ್ದವು. ಸಾಮಾನ್ಯ