ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Aಂದರೊಪಾಸಕ ಮಿಣಜಿಗಿ ೧nz ಜನತೆಯ ಜೀವನ ಚಿತ್ರಗಳೂ, ರಾಗರಾಗಿಣಿ ಚಿತ್ರಗಳೂ ಪ್ರಸಾರಕ್ಕೆ, ಬಂದವು. ಮುಘಲ ಸಂಪ್ರದಾಯದ ಮೇಲೆ ಪರ್ಶಿಯನ್ ಕಲೆ ಪ್ರಭಾವ ಬೀರಿತು. ಅದರಲ್ಲಿ ಭವ್ಯತೆಗೆ, ಕುಸುರಿ ಕೆಲಸಕ್ಕೆ ಹೆಚ್ಚು ಬೆಲೆ. ಕೆಲವು ಸಲ ಚಿತ್ರ, ಗಾರ ಮೂರ್ತಿಗಳನ್ನು ನಿರ್ಲಕ್ಷಿಸಿ ಅವುಗಳ ವಸ್ತ್ರ ಭೂಷಣಕ್ಕೆ ಹೆಚ್ಚು ಗಮನ ಕೊಟ್ಟಿರುತ್ತಾನೆ. - ರಜಪೂತ ಸಂಪ್ರದಾಯ ರಾಗ-ರಾಗಿಣಿ ಮಾಲೆಯ ಒಂದು ವಿಶಿಷ್ಟ ಪದ್ದತಿಯನ್ನು ಬೆಳಸಿತು. ಈ ಚಿತ್ರಗಳನ್ನು ಕಲಾವಿಮರ್ಶಕರು ಕಾಣುವ ಸಂಗೀತ' (Visualised Music) ಎಂದು ಕರೆದಿದ್ದಾರೆ. ಒಂದು. ರಾಗದ ಭಾವ, ರಸಗಳಿಗೆ ಅನುಗುಣವಾದ ರೀತಿಯಲ್ಲಿ ವಸ್ತುವನ್ನು ನಿರ್ಮಿಸಿ ರಾಗಭಾವನೆಯನ್ನು ನೋಡುವುದಕ್ಕೆ ಚಿತ್ರಗಾರರು ಪ್ರಯತ್ನಿಸಿದರು. ಈ ಮಾರ್ಗವನ್ನು ಒಪ್ಪಿಕೊಳ್ಳದಿರುವ ವಿಮರ್ಶಕರೂ ಚಿತ್ರಗಳ ಸೌಂದರವನ್ನು ಮನಃಪೂರ್ವಕವಾಗಿ ಮೆಚ್ಚಿಕೊಂಡಿದ್ದಾರೆ. ಮಿಣಜಿಗಿಯವರ ಮಾರ್ಗ, ಕಲೆಯ ವಿಧಾನ ರಜಪೂತ ಸಂಪ್ರದಾ ಯಕ್ಕೆ ಸೇರಿದೆ. ಪ್ರಕೃತಿಯನ್ನವರು ತುಂಬುಕಣ್ಣಿನಿಂದ ನೋಡುತ್ತಾರೆ. ಪ್ರಕೃತಿ ಮಿಣಜಿಗಿಯವರಿಗೆ ಅಪಾರ, ಅನಂತ ದುಃಖ ಸಾಗರವಲ್ಲ-ಆಟ ಮಾಸದ ಝುಂಝಮಾರುತವೂ ಅಲ್ಲ. ಅದರ ರುದ್ರ, ಭೀಷಣ ಭವ್ಯತೆಯ ಜತೆಗೆ ಸುಕೋಮಲವೂ, ಲಲಿತವೂ, ಸುಭಗವೂ ಆದ ಲೀಲಾವಿಲಾಸವೂ ಇದೆ. ಸಾವಿರಾರು ವರ್ಷಗಳಿಂದ ತಾನೇ ತಾನಾಗಿ ನಿಂತಿರುವ ಪರ್ವತರಾಶಿ 'ಯಲ್ಲಿ ರುದ್ರ ಸೌಂದರ್ಯವಿದ್ದರೆ, ಅದೇ ಅರಳಿ ಅಂದೇ ಅಳಿಯುವ ಮಲ್ಲಿಕೆ ಯಲ್ಲಿ ನಸುಚೆಲುವು ಚಿಮ್ಮುತ್ತದೆ. ಸಾಗರದ ರಾಜಸಿಕ ಆರ್ಭಟಿಯಲ್ಲಿ ಭಯ ಮೂಡಿದರೆ, ಮಗುವಿನ ಸರಳ ನಗೆಯಲ್ಲಿ, ನಲ್ಲೆಯ ಹುಸಿಮುನಿಸಿನಲ್ಲಿ ಸಾತ್ವಿಕ ಚೆಲುವು ಮೂಡಿರುತ್ತದೆ. ಇಂತಹ ಸಾತ್ವಿಕ ಚೆಲುವನ್ನು -ಮಾಯಾ ಸ್ವರ್ಣಮೃಗದಂತೆ ಸುಳಿದು, ನುಲಿದು, ಕೈಗೆ ಸಿಕ್ಕದಂತೆ ಹಾರುವ ಚೆಲು ವನ್ನು ಶಾಶ್ವತವಾಗಿ ವಶಪಡಿಸಿಕೊಳ್ಳುವ ಸಾಧನ ಮಿಣಜಿಗಿಯವರಲ್ಲಿ ಕಂಡು ಬರುತ್ತದೆ. ಸಂಗೀತ ಶಾಸ್ತ್ರಕಾರರು ರಾಗಗಳನ್ನು ಸೃಥಕ್ಕರಿಸಿ ಕೆಲವು ಮೂಲ.