ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ಕರ್ನಾಟಕದ ಕಲಾವಿದರು a , ರಾಗಗಳನ್ನು (ಮೇಳಕರ್ತ ಅಥವಾ ಥಾಟ್) ನಿರ್ದೆಶಿಸಲು ಪ್ರಯತ್ನಿಸಿದ್ದಾ ಮಹಮ್ಮದ್ ರೇಜಾ ಮತ್ತು ಭಾವಭಟ್ಟರಿಬ್ಬರೂ ಮೇಳಕರ್ತ ರಾಗಸ್ಥಾನ ವನ್ನು ಮಾಲಕಂಸ (ಅಥವಾ ಮಾಳವಕ್ಕೆ ಸಿಕಾ) ರಾಗಕ್ಕೆ ಕೊಟ್ಟಿದ್ದಾರೆ. ಪಂಡಿತ ಭಾತ್ ಖಂಡೆ ನಾಲಕಂಸ ರಾಗವನ್ನು ಭೈರವಿ (ಅಥವಾ ಹನುಮಾನ್ ತೋಡಿ) ಗುಂಪಿಗೆ ಸೇರಿಸಿದ್ದಾರೆ. ಕೋಮಲ ರಿಷಭ, ದೈವತ ಸ್ವರ ನಿಯೋಜನೆಯಿಂದ ರಾಗಕ್ಕೆ ಅಪೂರ್ವ ಮಾರ್ದವತೆ ಬರುತ್ತದೆ. ಮಾಲಕಂಸ ರಾಗದಲ್ಲಿ ಕರುಣಾ, ರೌದ್ರ' ರಸಗಳಿಗೆ ಪ್ರಾಧಾನ್ಯ. ಎರಡನ್ನೂ ಪ್ರೌಢದೆಸೆಯಲ್ಲಿ ಉಪಯೋಗಿಸುವುದಿಲ್ಲ. ನೆಲ್ಲ ನಲ್ಲೆಯರಲ್ಲಿ ಮನಸ್ತಾಪ ಹುಟ್ಟಿದೆ. ನಲ್ಲೆ ಪಕ್ಕವಾದ್ಯಗಳನ್ನು ಅಣಿಮಾಡಿಕೊಂಡು ಪ್ರಿಯನಾಗಮನವನ್ನು ಕಾತುರತೆಯಿಂದ ನಿರೀಕ್ಷಿಸುತ್ತಿದ್ದಾಳೆ. ಹಾಡಿ, 'ಕುಣಿದು ಅವನ ಮನಸ್ಸನ್ನು ರಮಿಸಿ, ಕೋಪವನ್ನಿಳುಹಬೇಕೆಂಬುದು ಅವಳ ಹಿರಿಯಾಸೆ, ನಲ್ಲ ಬರುತ್ತಾನೆ. ನಲ್ಲೆ ಆವೇಗದಿಂದ ಅವನನ್ನಪ್ಪುತ್ತಾಳೆ. ಅವನ ಕೈ ಅವಳ ಭುಜವನ್ನು ಬಳಸುವುದಿಲ್ಲ. ಅವಳು ಹಿಡಿಯಲೆತ್ನಿಸುವ ಬಲಗೈಯನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಾನೆ. ಅವನ ಮುಖದಲ್ಲಿ ಕೊಪ ತುಂಬಿತುಳುಕುತ್ತಿದೆ. ಇಲ್ಲಿ ದೀನಳಾಗಿ, ಕರುಣಾದ್ರ್ರಳಾಗಿ ತಲೆ ತಗ್ಗಿಸಿದಾಳೆ-ಇದು ಮಿಣಜಿಗಿಯವರ “ ಮಾಲಕಂಸ' ಚಿತ್ರದ ವಸ್ತು. ನಲ್ಲ ಕೈ ಬಿಡಿಸಿಕೊಳ್ಳುತ್ತಿರುವುದು, ಅವನ ಮುಖದಲ್ಲಿ ಮೂಡಿರುವ ಕಾಠಿಣ್ಯ, ಅವಳ ದೀನ ಕೋಮಲಭಾವ, ವಾದ್ಯಗಾರರ ತನ್ಮಯತೆ, ಮೂರ್ತಿಗಳ ವಸ್ತ್ರಾಭರಣ ನಿಯೋಜನೆಗಳಲ್ಲೆಲ್ಲಾ ಉಜ್ವಲ ಕೌಶಲ್ಯವನ್ನು ಸಾರುತ್ತಿವೆ. ಮೂರ್ತಿಗಳ ತುಂಬು ಲಾವಣ್ಯ ಕಣ್ಮನಗಳನ್ನು ಸೂರೆಗೊಳ್ಳುತ್ತಿವೆ. ಹಿನ್ನೆಲೆ ಯಲ್ಲಿ ಚಿತ್ರಗಾರ ಬಳಿಸಿರುವ ಲಲಿತ ರೇಖಾವಿನ್ಯಾಸ ಚಿತ್ರಕ್ಕೆ ಅಪೂರ್ವ ಶೋಭೆಯನ್ನಿತ್ತಿದೆ. ಮುಂದೆ ಬಿದ್ದಿರುವ ನವಿಲುಗರಿ ಬೀಸಣಿಗೆ, ತಟ್ಟೆ, ಪನ್ನೀರುದಾನಿಗಳು ಕೂಡ ವಸ್ತುವಿನ ರಸ ಭಾವನೆಗಳಲ್ಲಿ ಬೆರೆತಂತಿವೆ. ಎಲ್ಲಿಯೂ ಅನವಶ್ಯಕ ವಸ್ತುನಿಯೋಜನೆಗಾಗಲಿ, ತಂತ್ರ ಚಮತ್ಕಾರಕ್ಕಾಗಲಿ ಮಿಣಜಿಗಿಯವರು ಕೈ ಹಾಕಿಲ್ಲ. ಕೇವಲ ಸರಳತೆ, ಪರಿಶುದ್ದ ರಸವಿಕಾಸ, ಸಹಜ ತಂತ್ರ ನೈಪುಣ್ಯಕ್ಕೆ - ಮಾಲಕಂಸ' ಚಿತ್ರ ನಿದರ್ಶನವಾಗಿದೆ. ರಜಪೂತ ಸಂಪ್ರದಾಯದಾನಂತರ ಇತ್ತೀಚೆಗೆ ಹುಟ್ಟಿ, ಭಾರತ ಚಿತ್ರ