ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩ ಸೌಂದಯ್ಯೋ ಪಾಸಕ ಮಿಣಜಿಗಿ | ಕಲೆಯಮೇಲೆ ವಿಶೇಷ ಪ್ರಭಾವವನ್ನು ಬೀರಿದವರು - ಶಾಂತಿನಿಕೇತನ ಸಂಪ್ರ ದಾಯ ' 1 ದ ಚಿತ್ರಗಾರರು. ಕೆಲವರು ರಾಗಮಾಲಾ ಚಿತ್ರಗಳನ್ನು ರಚಿಸ ಲೆತ್ನಿಸಿದರು. ಆದರವುಗಳಲ್ಲಿ ಅವರು ಅಜಂತಾ, ಕಾಂಗ್ರಾ ಸಂಪ್ರದಾಯ ಗಳನ್ನು ಕಲೆಸಲು ಯತ್ನಿಸಿದ್ದರಿಂದ ಅವರ ಪ್ರಯತ್ನ ಫಲಕಾರಿಯಾಗಲಿಲ್ಲ. ವೈಜೀ ರಹರ್ಮಾ ಕೆಲವು ರಾಗ, ರಾಗಿಣಿಗಳ ಚಿತ್ರಗಳನ್ನು ರಚಿಸಿ ದ್ದಾರೆ. ಅವುಗಳನ್ನು ರಾಗಮಾಲಾ ಚಿತ್ರಗಳೆಂದು ಕರೆಯುವುದಕ್ಕಿಂತ ಅವುಗಳ ವಿಡಂಬನಗಳೆಂದು ಕರೆಯಬಹುದು. ಪಹರಿ ಚಿತ್ರಗಾರರಿಂದ ಇದುವರೆಗೆ-ಎರಡು ಶತಮಾನಕಾಲ-ರಾಗರಾಗಿಣಿ ಚಿತ್ರಗಳನ್ನು ರಚಿಸಲೆತ್ನಿ ರಿದವರೆಲ್ಲಾ ಸೋಲನ್ನೊಪ್ಪಿಕೊಳ್ಳಬೇಕಾಯಿತು. ಪಹರೀ ಸಂಪ್ರದಾಯದ ಕೀರ್ತಿಯನ್ನು ಬೆಳಸಿದ ಭಾಗ್ಯ ಮಿಣಜಿಗಿಯವರದು. ಇವರ ಮಾಲಕಂಸತೋಡಿ-ಮೇಘಮಲ್ಲಾರ ಅನ್ಯಾದೃಶ ಕಲಾದೀಧಿತಿಯನ್ನು ಬೆಳಗು ತಿವೆ ತೋಡಿ ರಾಗ ಹೇಗೆ ಸಂಗೀತಗಾರರಿಗೂ, ಸಂಗೀತ ಪ್ರೇಮಿಗಳಿಗೂ ಅತ್ಯಂತ ಪ್ರಿಯರಾಗವೊ ಹಾಗೆ ಸಹರಿ ಚಿತ್ರಗಾರರಿಗೂ ಪ್ರಿಯವಾದುದು. ಇದರ ಹತ್ತೆಂಟು ಮೂಲಕೃತಿಗಳು ಮುಂಬಯಿ, ಬೋಸ್ಟನ್, ಹೈದರಾ. ಬಾದು, ಲಕ್ಕೊ ಚಿತ್ರಶಾಲೆಗಳಲ್ಲಿವೆ. ತೋಡಿ ಜನಕ (ಥಾಯ್ ) ರಾಗ ಪ್ರಾತಃಕಾಲ, ಮಧ್ಯಾನ್ನಗಳ ಸಂಧಿಕಾಲದಲ್ಲಿ ಹಾಡತಕ್ಕದ್ದು, ಕರ್ನಾಟಕ ಪದ್ದತಿಯಲ್ಲಿ ಇದನ್ನು ' ಶುಭ ಪಂತುವರಾಳಿ' ಎಂದು ಕರೆಯುತ್ತಾರೆ.. ಉತ್ತರದಲ್ಲಿ ಹದಿನಾರು ಬಗೆ ತೋಡಿಯನ್ನು ಹಾಡುತ್ತಾರೆ-ಅಸಾ, ಗಜರಿ, ಗಾಂಧಾರಿ, ಹುಸೇನಿ, ಬಹಾದುರಿ, ದರ್ಬಾರಿ, ವಿಲಕ್ಷಿಣಿ, ಲಕ್ಷ್ಮಿ, ದೇಶಿ, ಖಟ್, ಲಾಚರಿ, ಸುಗ್ರಾಯಿ, ಸುಹಾ, ಮಂದರೀಕ, ಜೀವನಪುರಿ ಮತ್ತು 1 ಕಲ್ಕತ್ತಾ ಕಲಾಶಾಲೆಯಲ್ಲಿ ನಿರ್ಮಾಣವಾಗುವ ಚಿತ್ರಗಳಿಗೂ ಶಾಂತಿ ನಿಕೇತನ ಕಲಾಶಾಲೆಯಲ್ಲಿ ನಿರ್ಮಾಣವಾಗುವ ಚಿತ್ರಗಳಿಗೂ ಬಹಳ ಅಂತರವಿದೆ. ಎರಡನ್ನೂ ವಿಮರ್ಶಕರು ಬಂಗಾಳಿ ಚಿತ್ರ ಕಲೆ' ಎಂದು ಕರೆಯುತ್ತಾರೆ. ಇದು ಬಹಳ ಆ ಸ್ಪಷ್ಟವಾಗುವುದರಿಂದ ಶಾಂತಿನಿಕೇತನ ಸಂಪ್ರದಾಯ, ಕಲ್ಕತ್ತಾ ಸಂಶ ದಾಯ ಎಂದು ನಾನು ಕರೆಯಲಿಚ್ಛಿಸುತ್ತೇನೆ. ಅ. ನ. ಕೃ. 2 ಇವು ಅತೀಯಾ ಬೇಗಂ ಆವರ Sangit of India' ಗ್ರಂಥದಲ್ಲಿ ಪ್ರಕಟವಾಗಿವ.