ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

2 ೧೨ ಕರ್ನಾಟಕದ ಕಲಾವಿದರು ತಂಜಾವೂರಿಗೆ ಸಮೀಪದಲ್ಲಿರುವ ತಿಟ್ಟೆ ಗ್ರಾಮದಿಂದ ಮೈಸೂರಿಗೆ ಬಂದು ನೆಲಸಿದರು. ತ್ಯಾಗರಾಜರ ತಿರುವೆಯಾರ್ ಕ್ಷೇತ್ರಕ್ಕೆ ತಿಟ್ಟೆ ಗ್ರಾಮ ಸಮಾಸ, ರಂಗಾಚಾರ್ಯರು ತ್ಯಾಗರಾಜರ ಹಾಡಿಕೆಯನ್ನು ಕೇಳಿದ್ದರು ಮತ್ತು ಅವರ ಶಿಷ್ಯರಾದ ತಿಲಸ್ಥಾನಂ ರಾಮಯ್ಯಂಗಾರ್ಯರಲ್ಲಿ ಶಾಸ್ತೋಕ ವಾಗಿ ಅಭ್ಯಾಸವನ್ನು ಮಾಡಿದ್ದರು. ಮನೆಯಲ್ಲಿ ಅನುಕೂಲವಾಗಿದ್ದು ದ ರಿಂದ ಸಂಗೀತವನ್ನು ಉದರಂಭರಣಕ್ಕೆ ಉಪಯೋಗಿಸದೆ ಆತ್ರೋದ್ದಾರಕ್ಕೆ ಬಳಸಿಕೊಂಡಿದ್ದರು. ರಂಗಾಚಾರರು ತಮ್ಮ ಮಗ ನಾರಾಯಣಯ್ಯಂಗಾರ್ಯರಿಗೆ ಸಂಗೀ ತಾಭ್ಯಾಸ ಮಾಡಿಸಿದರು. ಅನಂತರ ಅವರು ಚಾಮರಾಜವೊಡೆಯರ ಆಸ್ಥಾನ ವಿದ್ವಾಂಸರಾಗಿದ್ದ ಸುಬ್ಬರಾಯರಲ್ಲಿ ಬಹಳ ವರ್ಷ ಸಂಗೀತಾಭ್ಯಾಸ ಮಾಡಿದರು. ನಾರಾಯಣಯ್ಯಂಗಾರ್ಯರು ತಮ್ಮ ತೀರ್ಥರೂಪರಂತೆ ಅರಮನೆಯಲ್ಲಿ ವೈದಿಕವೃತ್ತಿಯಲ್ಲೇ ಇದ್ದರು. ಸಂಗೀತ ಸಾಮ್ರಾಟ್ ನಾಲ್ಮಡಿ ಕೃಷ್ಣರಾಜವೊಡೆಯರವರ ಸಮ್ಮುಖದಲ್ಲೊಮ್ಮೆ ಇವರ ಹಾಡಿಕೆ ಯಾಯಿತು. ಅಂದಿನಿಂದ ನಾರಾಯಣ ಅಯ್ಯಂಗಾರ್ಯರು ಸಂಗೀತ ವಿದ್ವಾಂಸರ ಗುಂಪು ಸೇರಬೇಕಾಯಿತು. ನಿರ್ವಂಚನೆಯಿಂದ ಅನೇಕ ಸಂಗೀತ ಜಿಜ್ಞಾಸುಗಳಿಗೆ ಪಾಠ ಹೇಳಿ ತಮ್ಮ ಪಾಂಡಿತ್ಯವನ್ನು ಸಾರ್ಥಕ ಗೊಳಿಸಿದರು. ಕೃಷ್ಣಯ್ಯಂಗಾರ್ಯರು ಇಂಥ ಪರಂಪರೆಯಲ್ಲಿ ಹುಟ್ಟಿ ಬೆಳೆದವರು. ಶೈಶವದಿಂದಲೇ ಉತ್ತಮ ಸಂಗೀತ ಶ್ರವಣ, ಒಂಭತ್ತನೆಯ ವಯಸ್ಸಿಗೆ ತಾಳಜ್ಞಾನ ಮತ್ತು ಸ್ವರಜ್ಞಾನ. ಒಂಭತ್ತನೆಯ ವಯಸ್ಸಿನಲ್ಲಿಯೇ ಕೃಷ್ಣ ಯ್ಯಂಗಾರ್ಯರು ಮಹಾಮಾತೃಶ್ರೀಯವರು, ನಾಲ್ಮಡಿ ಪ್ರಭುಗಳೆದುರಿಗೆ ಹಾಡಿ ಭಲೆ' ಎನಿಸಿಕೊಂಡರು. ಹದಿನೇಳನೆಯ ವಯಸ್ಸಿನಲ್ಲಿಯೇ ಆಸ್ಥಾನ ವಿದ್ವಾಂಸರಾದರು. ನಲವತ್ತು ನಾಲ್ಕನೆಯ ವಯಸ್ಸಿನಲ್ಲಿ ಆಳುವ ಮಹಾಸ್ವಾಮಿಯವರಿಂದ ಗಾನವಿಶಾರದ' ಬಿರುದನ್ನು ಉಚಿತ ಮಯ್ಯಾದೆ ಯೊಡನೆ ಪಡೆದರು. ಕೃಷ್ಣಯ್ಯಂಗಾರ್ಯರ ಸಂಗೀತ ಶಿಕ್ಷಣವೆಲ್ಲಾ ಅವರ ತಂದೆಯವ ರಿಂದಲೇ ಆಯಿತು. ಆದರೆ ಬಿಡಾರಂ ಕೃಷ್ಣಪ್ಪನವರು, ವೀಣೆ ಶೇಷಣ್ಣ