ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯ ತಿಟ್ಟಿ, ಕೃಷ್ಣ ಯ್ಯಂಗಾರ್ಯ ನವರು, ವೀಣೆ ಸುಬ್ಬಣ್ಣನವರಿಂದ ತಿಟ್ಟೆ ಯವರು ಅನೇಕ ವಿಷಯಗಳನ್ನು ಸಂಗ್ರಹಿಸಿದರುಕೃಷ್ಣಪ್ಪನವರಿಗಂತೂ ತಿಟ್ಟೆ ಯವರನ್ನು ಕಂಡರೆ ವಿಶೇಷ ಪ್ರೇಮ-ಹೆಮ್ಮೆ, ಕನ್ನಡನಾಡಿಗೆ ತಿಟ್ಟೆ ಯವರು ಕೀರ್ತಿ ತರುವರೆಂದು ಕೃಷ್ಣಪ್ಪನವರು ಚೆನ್ನಾಗಿ ಮನಗಂಡಿದ್ದರು.

  • ಕೃಷ್ಣಯ್ಯಂಗಾರ್ಯರು ಹಾಡುವ ಮುದ್ದು ಸ್ವಾಮಿ ದೀಕ್ಷಿತರವರ ಅಪೂರ್ವ ಕೀರ್ತನೆಗಳನ್ನೂ , ಕೃಷ್ಣರಾಜವೊಡೆಯರವರಿಂದ ರಚಿತವಾದ ಸಂಸ್ಕೃತ ಕೀರ್ತನೆಗಳನ್ನೂ ಅರಮನೆಯ ಎಲೆಕ್ಟಿಕ್ ರಿಕಾರ್ಡಿಂಗ್ ಯಂತ್ರದ ಸಹಾಯದಿಂದ ರಿಕಾರ್ಡ್ ಮಾಡಿಸಿದ್ದಾರೆ.
  • ದಕ್ಷಿಣ ಹಿಂದೂಸ್ಥಾನ, ಹೈದರಾಬಾದು, ಗದ್ವಾಲ ಪ್ರಾಂತ್ಯಗಳಲ್ಲಿ ಕೃಷ್ಣಯ್ಯಂಗಾರ್ಯರು ಪ್ರವಾಸಮಾಡಿ, ತಮ್ಮ ಸಂಗೀತಸೌರಭವನ್ನು ಅಲ್ಲಿ ಹರಡಿ ಬಂದಿದ್ದಾರೆ. ಮದರಾಸು, ತಿರುಚನಾಪಳ್ಳಿ ವಿಸರಣಾಲಯಗಳಲ್ಲಿ ಆಗಿಂದಾಗ್ಗೆ ಹಾಡುತ್ತಿರುತ್ತಾರೆ. ಮದರಾಸಿನ ಸಂಗೀತ ವಿದ್ವತ್ಸಭೆ ಗಳಲ್ಲಿ ಕೃಷ್ಣಯ್ಯಂಗಾರ್ಯರ ಹಾಡಿಕೆ ಮೇಲಿಂದ ಮೇಲೆ ಏರ್ಪಾಟಾ ಗುತ್ತಿರುತ್ತದೆ.

ಕೃಷ್ಣಯ್ಯಂಗಾರ್ಯರು ಕನ್ನಡದ ಉತ್ಕಟಾಭಿಮಾನಿಗಳು. ಆಧುನಿಕ ಕನ್ನಡ ಗೀತೆಗಳಿಗೆ ಸ್ವರ ಸಂಯೋಜನೆ ಮಾಡಿ ತಮ್ಮ ಕಛೇರಿಗಳಲ್ಲಿ ಹಾಡು ತಾರೆ. ಅಪರೂಪ ಕೀರ್ತನೆಗಳನ್ನು ಅಪೂರ್ವ ರೀತಿಯಲ್ಲಿ ಹಾಡುವುದು ತಿಟ್ಟೆಯವರ ವೈಶಿಷ್ಟ್ಯ :

  • ಕೀರ್ತಿಶೇಷ ಮುತ್ತಯ್ಯ ಭಾಗವತರು ೧೯೧೫ರಲ್ಲಿ ಮೈಸೂರಿನಲ್ಲಿ ತ್ಯಾಗರಾಜ ಸ್ವಾಮಿಗಳ ಆರಾಧನೋತ್ಸವವನ್ನು ಆರಂಭಿಸಿದರು. ಅದು ೨, ೩ ವರ್ಷ ವಿಜೃಂಭಣೆಯಿಂದ ನಡೆದು ನಿಂತು ಹೋಯಿತು. ೧೯೪೨ರಲ್ಲಿ ತಿಟ್ಟೆಯವರು ' ಶ್ರೀ ತ್ಯಾಗರಾಜ ಸಂಗೀತ ವಿದ್ವತ್ಸಭೆ' ಎಂಬ ಸಂಸ್ಥೆಯನ್ನು ಸ್ಥಾಪಿಸಿ ಉತ್ಸವ ಆಚಂದ್ರಾರ್ಕವಾಗಿ ನಡೆಯಲು ತ್ರಿಕರಣಪೂರ್ವಕವಾಗಿ ದುಡಿಯುತ್ತಿದ್ದಾರೆ.

೧೯೪೬ನೆಯ ಇಸವಿ ಡಿಸೆಂಬರ್ ತಿಂಗಳು ಒಂದು ಎರಡನೆಯ ತಾರೀಖು ಗಳಲ್ಲಿ ತಿಟ್ಟಿ ಯವರು ಬೆಂಗಳೂರು ಗಾಯನ ಸಮಾಜ ಮತ್ತು ಕನ್ನಡ ಸಾಹಿತ್ಯ, ಪರಿಷನ್ಮಂದಿರಗಳಲ್ಲಿ ಕಛೇರಿ ನಡೆಸಿ, ವಿದ್ವಜ್ಜನರ ತಲೆದೂಗಿಸಿದರು. ಪರಿಷ ತಿಟ್ಟೆ ಯವರ ಆರೋಪ ಕೀರ್ತನೆಗಳನೆ ಮಾಡಿ ತಮ್ಮ 18