ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಿಟ್ಟಿ, ಕೃಷ್ಣಯ್ಯಂಗಾರ್ಯ ನಾಮಗಳು (ಹಾಗೂ ತ್ಯಾಗರಾಜ ಕೀರ್ತನೆಗಳು) ಪ್ರಾಗತಿಕ ಜಗತ್ತಿನ ಮನೋಭಾವಕ್ಕೆ ಪೋಷಕವಾಗಿಲ್ಲ. ಅವುಗಳನ್ನು ಪ್ರಾಚೀನ ಸಂಸ್ಕೃತಿಯ ರಕ್ಷಣಾದೃಷ್ಟಿಯಿಂದ ನಾವು ಕಾಪಾಡಿಕೊಳ್ಳಬೇಕು. ಆದರೆ ನಮ್ಮ ಸಾಹಿತ್ಯ, ಕಲೆಗಳ ಬೆಳವಳಿಗೆ ಅಲ್ಲಿಗೇ ನಿಲ್ಲಬಾರದು. ಬಾಳಿನ ಉತ್ಸಾಹ, ದುಡಿಮೆಯ ಪಾವಿತ್ರ್ಯ, ಸಮಾನತೆಯ ಆವಶ್ಯಕತೆ ಹಾಗೂ ಮಾನವ್ಯದ ಅವರ ಶಕ್ತಿಗಳನ್ನು ಸಾರುವ ಹೊಸ ಗೀತೆಗಳು ಪ್ರಸಾರಕ್ಕೆ ಬರಬೇಕು. ದಿನದಿನದ ಆವಶ್ಯಕತೆ, ಜನತೆಯ ದೃಷ್ಟಿ, ಸಮಸ್ಯೆಗಳ ವೃದ್ಧಿಯಾದಂತೆ ದೇಶದ ಸಂಗೀತ ಹಾಗೂ ಸಂಗೀತದ ದೃಷ್ಟಿಯೂ ಬದಲಾಯಿಸುತ್ತ ಹೋಗ ಬೇಕು. ನಮ್ಮ ಸಂಗೀತಗಾರರು ಇಂಥ ದೃಷ್ಟಿಯನ್ನು ಬೆಳಸಿಕೊಳ್ಳಲು ಪ್ರಯತ್ನಿಸಬೇಕು. ಬಿ. ವಿ. ಯವರು ತಿಟ್ಟಿಯವರ ಗಾಯನರ ಮೇಲೆ ಸ್ವಾಗತಿಕ ಭಾವ ನೆಗೆ ವಿರುದ್ದವಾದ ಇನ್ನೊಂದು ಟೀಕೆ ಮಾಡಿದ್ದಾರೆ. “ ಈಗ ಸಾಮಾನ್ಯವಾಗಿ ದೇವರ ನಾಮಗಳಿಗೆ ಸಂಗೀತಗಾರರು ಅವ ರವರ ಇಷ್ಟಾನುಸಾರವಾಗಿ ರಾಗ ಮತ್ತು ತಾಳಗಳನ್ನು ಜೋಡಿಸಿ ಮುಟ್ಟು ತಾಕುವುದು ರೂಢಿಯಾಗಿ ಬಿಟ್ಟಿದೆ. ಒಂದು ವಸ್ತುವಿಗೆ ಪದೇಪದೇ ರೂಪದ ಬದಲಾವಣೆಗಳಾಗುತ್ತಿರುವುದಕ್ಕಿಂತ ಒಂದೇ ರೂಪವಿದ್ದರೆ ಜನಗಳ ನೆನಪಿನಲ್ಲಿ ಆದು ಸ್ಥಿರವಾಗಿ ನಿಲ್ಲಲು ಸಹಾಯವಾಗುವುದೆಂದು ನನ್ನ ಭಾವನೆ. ನಮ್ಮ ದೇವರ ನಾಮಗಳಿಗೆ ಈ ರೀತಿಯಾದ ಒಂದು ಸ್ಥಿರ ರೂಪವನ್ನು ಕೊಡಬೇಳೆ ಕಾದ್ದು ನಮ್ಮ ಕರ್ತವ್ಯ. ಅಲ್ಲದೆ ಒಂದು ರಾಗದ ಒಂದೇ ತಾಳದ ಒಂದು ನಿಷ್ಕರ್ಷೆಯಾದ ಮಟ್ಟಿನ ಚೌಕಟ್ಟಿನಲ್ಲಿ ಗಾಯಕನಿಗೆ ತನ್ನ ಪ್ರತಿಭೆಯನ್ನೂ ಪಾಂಡಿತ್ಯವನ್ನೂ ಪ್ರದರ್ಶಿಸಲು ಅವಕಾಶವು ಯಾವಾಗಲೂ ಇದ್ದೇ ಇದೆ. ಆಧುನಿಕವಾದ ಅನೇಕ ಮಟ್ಟು ಗಳು ಕೂಡ ಪೂರ್ವದಲ್ಲಿ ಕೇಳಿ ಬರುತ್ತಿದ್ದ ಮಟ್ಟು ಗಳಿಗಿಂತ ಸಂಗೀತ ವಿಚಾರದಲ್ಲಿ ಮೇಲ್ಕ ರದ್ದು ಎಂದು ಹೇಳುವುದೂ ಕಷ್ಟ. ಈ ಸಮಸ್ಯೆಯನ್ನು ಸಂಗೀತಾ ಭಿಮಾನಿಗಳೂ, ಸಾಹಿತ್ಯಾಭಿಮಾನಿ ಗಳೂ, ರಸಜ್ಞರೂ ಸೇರಿ ಸಮಾಲೋಚಿಸಿ ನಮ್ಮ ದೇವರ ನಾಮಗಳಿಗೆ ಆದಷ್ಟು ಸಂಪ್ರ ದಾಯಾನುಸಾರವಾದ ಮತ್ತು ಸೌಂದರ್ಯಯುತವಾದ ಒಂದು ರೂಪವನ್ನು ಕೈಗೊಳ್ಳುವುದು ಅವಶ್ಯವಾದೀತು.” ವಿಮರ್ಶಕರು ಸಂಪ್ರದಾಯವನ್ನ ಸೌಂದರ್ಯನೆಂದು ಭ್ರಮಿಸಿ