ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಸ್. ಎನ್. ಸ್ವಾಮಿ وف ವಿದ್ಯೆ ಹೆಚ್ಚು ಜನ ಕಲಾವಿದರಿಗೆ ನಿಲುಕಬೇಕು. ದೊಡ ಸಂಪ್ರದಾಯ ಅಳಿಯದಂತೆ ಉಳಿಸುವ ಪ್ರಯತ್ನ ನಡೆಯಬೇಕು. ಮಹಾರಾಜಾ ಕಾಲೇಜಿನ ಸಭಾ ಮಂದಿರದಲ್ಲಿ ಸರ್ ರಾಧಾಕ್ರಷನ್ ರವರ ಅಧ್ಯಕ್ಷತೆಯಲ್ಲಿ (೧೯೪೦) ಏರ್ಪಟ್ಟ ಸಭೆಯೊಂದರಲ್ಲಿ ಮೈಸೂರಿನ ಕಲಾಭಿಮಾನಿಗಳು ತಾಯಮ್ಮನವರಿಗೆ ' ನಾಟ್ಯ ಸರಸ್ವತಿ' ಎಂಬ ಬಿರುದ ನ್ನಿತ್ತು ಗೌರವಿಸಿದರು. ನಾಟ್ಯ ಜಗತ್ತಿನಲ್ಲಿ ಸ್ವಾಮಿಯವರಿಗೆ ಉಜ್ವಲ ಭವಿಷ್ಯ ಕಾದಿದೆ. ಪ್ರಾಚೀನ ಕಲೆಯೊಂದರ ಜೀರ್ಣೋದ್ಧಾರ ಮಾಡುವ ಮಹದ್ಯೆಲಸ ಇವರ ಮಡುಲಿಗೆ ಬಿದ್ದಿದೆ. ಸ್ವಾಮಿಯವರು ಈ ಕೆಲಸವನ್ನು ಕೈಗೊಂಡು ಕೃತ ಕೃತ್ಯರಾಗುತ್ತಾರೆಂದು ನಮಗೆ ಭರವಸೆಯಿದೆ. ಸ್ವಾಮಿಯವರ ಮನಸ್ಸೆಲ್ಲಾ ಇಂದು ನಾಟ್ಯ ಕಲೆಯಲ್ಲಿ ವಿಲೀನವಾಗಿ ದ್ದರೂ ಚಿತ್ರಕಲೆ ಅವರನ್ನು ಬಿಟ್ಟಿಲ್ಲ. ಅವರು ಹಿಂದೆ ರಚಿಸಿದ ' ಭಿಕ್ಷಾಟನ ಮೂರ್ತಿ'ಯ ತೈಲ ಚಿತ್ರ, ಮೈಸೂರಿನ ಗೋಕುಲಾಷ್ಟಮಿ ಉತ್ಸವದ ನೋಟಗಳು ಮತ್ತು ಈಚೆಗೆ ಶ್ರೀ ರಾಮಕೃಷ್ಣಾಶ್ರಮಕ್ಕಾಗಿ ರಚಿಸಿರುವ ಭಗವಾನ್ ರಾಮಕೃಷ್ಣ ಪರಮಹಂಸರ ಭಾವಚಿತ್ರ ಅವರ ಚಿತ್ರಕಲಾ ನೈಪುಣ್ಯಕ್ಕೆ ಸಾಕ್ಷಿಗಳಾಗಿವೆ. * ಕರ್ನಾಟಕದ ಶಿಲ್ಪ ವೈಭವದ ಮುಕುಟ ಮಣಿಯಂತಿರುವ ಹೊಯ್ಸಳ ಶಿಲ್ಪಗಳ ಪ್ರತಿ ಚಿತ್ರಗಳನ್ನು ಸ್ವಾಮಿಯವರು ರಚಿಸುತ್ತಿದ್ದಾರೆ. ಈ ಕೆಲಸವನ್ನು ಪ್ರಶಂಸಿಸುತ್ತಾ ಮುಂಬಯಿಯ “ ಬಿಟ್ಸ್” ಪತ್ರಿಕೆ ಹೀಗೆ ಅಭಿಪ್ರಾಯ ಪಟ್ಟಿದೆ. ' ಪಾಶ್ಚಾತ್ಯ ಜಗತ್ತಿಗೆ ಭಾರತೀಯ ಪ್ರಾಚೀನ ಸಂಸ್ಕೃತಿಯ ಜ್ಞಾನವೆಷ್ಟಿದೆಯೆಂಬುದನ್ನು ಗ್ರಹಿಸಿದ ಸ್ವಾಮಿ ಯವರು ಹೊಯ್ಸಳ ವಾಸ್ತು, ಮೂರ್ತಿ ಶಿಲ್ಪಗಳ ಪ್ರತಿಚಿತ್ರಗಳನ್ನು ಮಾಡಲು ತೊಡಗಿದ್ದಾರೆ. ಪ್ರತಿಯೊಂದು ರೇಖಾ ಚಿತ್ರದಲ್ಲಿಯೂ ಮೂಲ ರೇಖೆಗಳ ಅನನ್ಯ ಲಾವಣ್ಯ, ನಿರ್ದೋಷ ಕೃತಿವಿಲಾಸ, ಸೂಕ್ಷ್ಮ ವಿಸ್ತಾರ ಒಡಮೂಡಿವೆ. ಹಳೆಯಬೀಡು ದೇವಾಯದ ಮೂರ್ತಿಗಳಲ್ಲಿ ಶಿಲ್ಪಿಗಳು ಬಟ್ಟೆಗಿಂತ ಒಡವೆಗಳಿಗೆ ಹೆಚ್ಚು ಪ್ರಾಧಾನ್ಯ ಕೊಟ್ಟಿದ್ದಾರೆ. ಹೆಚ್ಚಿನ ನೃತ್ಯ ಮೂರ್ತಿಗಳು